For Quick Alerts
ALLOW NOTIFICATIONS  
For Daily Alerts

ಶಾಕ್ ಕೊಟ್ಟ ಸರ್ಕಾರ! 2 ವಾರದೊಳಗೆ ಎರಡು ಬಾರಿ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ

ಎಲ್ಪಿಜಿ ಗ್ರಾಹಕರಿಗೆ ಇದೇ ತಿಂಗಳಲ್ಲಿ ಎರಡು ಬಾರಿ ಸರ್ಕಾರ ಬಿಸಿ ಮುಟ್ಟಿಸಿದೆ. ಶ್ರೀಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದ್ದು, ನವೆಂಬರ್ ನಲ್ಲಿ ಎರಡನೇ ಬಾರಿ ಅಡುಗೆ ಅನಿಲ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ.

|

ಎಲ್ಪಿಜಿ ಗ್ರಾಹಕರಿಗೆ ಇದೇ ತಿಂಗಳಲ್ಲಿ ಎರಡು ಬಾರಿ ಸರ್ಕಾರ ಬಿಸಿ ಮುಟ್ಟಿಸಿದೆ. ಶ್ರೀಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಿದ್ದು, ನವೆಂಬರ್ ನಲ್ಲಿ ಎರಡನೇ ಬಾರಿ ಅಡುಗೆ ಅನಿಲ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದೆ. ಅಂದರೆ ಕೇವಲ ಎರಡು ವಾರದೊಳಗೆ ಎರಡು ಬಾರಿ ಎಲ್ಪಿಜಿ ದರ ಏರಿದೆ. ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆಗೆ ನವೆಂಬರ್ 13 ಕೊನೆ ದಿನ, ಇಂದೇ ಅರ್ಜಿ ಸಲ್ಲಿಸಿ..

 

ಎಲ್ಪಿಜಿ ದರ ಏರಿಕೆಗೆ ಕಾರಣ

ಎಲ್ಪಿಜಿ ದರ ಏರಿಕೆಗೆ ಕಾರಣ

ಸರ್ಕಾರ ಎಲ್ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ದರವನ್ನು ಹೆಚ್ಚಳ ಮಾಡಿರುವ ಪರಿಣಾಮವಾಗಿ ಎಲ್ಪಿಜಿ ದುಬಾರಿಯಾಗಿದೆ. ಇದೀಗ ಎಲ್ಪಿಜಿ ದರ ರೂ. 2 ಏರಿಕೆ ಕಂಡಿದೆ.

ಸಿಲಿಂಡರ್ ಬೆಲೆ

ಸಿಲಿಂಡರ್ ಬೆಲೆ

14.2 ಕೆಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 507.42 ಆಗಿದೆ. ಇದರ ಹಿಂದಿನ ಬೆಲೆ ರೂ. 505.34 ಆಗಿತ್ತು. ಈ ತಿಂಗಳಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ ಎರಡನೇ ಬಾರಿ ಹೆಚ್ಚಳ ಕಂಡಿದೆ. ಮುಂಬೈನಲ್ಲಿ ರೂ. 503.11, ಚೆನ್ನೈನಲ್ಲಿ ರೂ. 493.87 ರಷ್ಟಿದ್ದ ಬೆಲೆ ಇದೀಗ ರೂ. 2 ಏರಿಕೆ ಕಂಡಿದೆ.

ಸತತ ಏಳು ಬಾರಿ ಏರಿಕೆ
 

ಸತತ ಏಳು ಬಾರಿ ಏರಿಕೆ

ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಸಬ್ಸಿಡಿ ಸಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಸತತ ಏಳು ಬಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು ರೂ. 16.13 ಹೆಚ್ಚಳವಾದಂತಾಗಿದೆ.
ನವೆಂಬರ್ 1ರಂದು ಸಿಲಿಂಡರ್ ಮೂಲ ಬೆಲೆಯನ್ನು 2.84 ಹೆಚ್ಚಳ ಮಾಡಲಾಗಿತ್ತು. ಜಿಎಸ್ಟಿ ದರ ಏರಿಕೆಯಾದ ಕಾರಣ ಜೂನ್ ತಿಂಗಳಿಂದ ಪ್ರತಿ ತಿಂಗಳು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ.

English summary

LPG cylinder price raised twice in less than 2 weeks

The LPG cylinder in your kitchen has become expensive by about Rs 2 once again this month.
Story first published: Saturday, November 10, 2018, 11:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X