For Quick Alerts
ALLOW NOTIFICATIONS  
For Daily Alerts

ಕೇಬಲ್ ಟಿವಿ, ಡಿಟಿಎಚ್ ಹೊಸ ನೀತಿ ಎಫೆಕ್ಟ್: ಇಲ್ಲಿದೆ ಮುಖ್ಯ ಮಾಹಿತಿ..

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಏಪ್ರಿಲ್ ಒಂದರಿಂದ ಹೊಸ ನೀತಿ ಜಾರಿಗೊಳಿಸಿದ ನಂತರ ಹೆಚ್ಚಿನ ಬಳಕೆದಾರರು ವಲಸೆಯಾಗಿದ್ದಾರೆ ಎಂದು ಟ್ರಾಯ್ ಸಲಹೆಗಾರ ಅರವಿಂದ ಕುಮಾರ್ ಹೇಳಿದ್ದಾರೆ.

|

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಏಪ್ರಿಲ್ ಒಂದರಿಂದ ಹೊಸ ನೀತಿ ಜಾರಿಗೊಳಿಸಿದ ನಂತರ ಹೆಚ್ಚಿನ ಬಳಕೆದಾರರು ವಲಸೆಯಾಗಿದ್ದಾರೆ ಎಂದು ಟ್ರಾಯ್ ಸಲಹೆಗಾರ ಅರವಿಂದ ಕುಮಾರ್ ಹೇಳಿದ್ದಾರೆ.
ಹೊಸ ನಿಯಮದನ್ವಯ ಕೇಬಲ್ ಟಿವಿ ಮತ್ತು ಡಿಟಿಎಚ್ ನಿಯಮಕ್ಕೆ ಬಹುತೇಕ ಎಲ್ಲ ಬಳಕೆದಾರರು ವಲಸೆಯಾಗಿದ್ದು, ಟ್ರಾಯ್ ನ ಹೊಸ ನೀತಿ ತೃಪ್ತಿಕರವಾಗಿದೆ ಎಂದು ಟ್ರಾಯ್ ಹೇಳಿದೆ.
ಟ್ರಾಯ್ ನ ಹೊಸ ಸುಂಕ ನಿಯಮಕ್ಕೆ ಹೆಚ್ಚಿನ ವಿಕ್ಷಕರು ವಲಸೆಗೊಂಡು ತಮ್ಮ ನೆಚ್ಚಿನ ಚಾನೆಲ್ ಗಳನ್ನು ಆಯ್ಕೆ ಮಾಡಿದ್ದಾರೆ ಅಥವಾ ಬೆಸ್ಟ್ ಫಿಟ್ ಪ್ಲಾನ್ಸ್ (BFPs) ಮುಂದುವರೆಸಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಬೆಸ್ಟ್ ಫಿಟ್ ಪ್ಲಾನ್ಸ್ (BFPs) ಗಳಿಗೆ ವಲಸೆ ಬಂದ ಅನೇಕ ಡಿಟಿಎಚ್ ಗ್ರಾಹಕರು ಆ ಪ್ಯಾಕ್ ಗಳೊಂದಿಗೆ ಉಳಿದಿದ್ದಾರೆ ಅಥವಾ ಕೆಲ ಚಾನೆಲ್ ಗಳನ್ನು ಬದಲಾಯಿಸಿದ್ದಾರೆ ಎಂದು ಅರವಿಂದ ಕುಮಾರ್ ತಿಳಿಸಿದ್ದಾರೆ.

 

ಟ್ರಾಯ್ ಹೊಸ ನಿಯಮದ ಎಫೆಕ್ಟ್

ಟ್ರಾಯ್ ಹೊಸ ನಿಯಮದ ಎಫೆಕ್ಟ್

ಒಟ್ಟಿನಲ್ಲಿ, ಕೇವಲ ಶೇ. 60 ರಷ್ಟು ಕೇಬಲ್ ಟಿವಿ ಗ್ರಾಹಕರು ತಮ್ಮ ಆಯ್ಕೆಯ ಚಾನೆಲ್ ಗಳನ್ನು ಆರಿಸಿಕೊಂಡಿದ್ದು, ಉಳಿದ ಶೇ. 39 ರಷ್ಟು ಜನರು ಬೆಸ್ಟ್ ಫಿಟ್ ಪ್ಲಾನ್ಸ್ (BFPs) ವಲಸೆ ಹೋಗಿದ್ದಾರೆ ಎಂದು ಮೂಲಗಳು ಹೇಳಿವೆ.
ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೇಬಲ್ ದರ ಸ್ವಲ್ಪ ಏರಿಕೆಯಾಗಿದ್ದು, ಕೆಲ ಸಮಸ್ಯೆಗಳನ್ನು ಹೊರತುಪಡಿಸಿದರೆ ಹೊಸ ಕೇಬಲ್ ನೀತಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ನೀವು ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರೇ? ಹಾಗಿದ್ದರೆ ಇಲ್ಲಿ ನೋಡಿ..

ಟ್ರಾಯ್ ಹೊಸ ನಿಯಮದಲ್ಲಿ ಏನಿದೆ?

ಟ್ರಾಯ್ ಹೊಸ ನಿಯಮದಲ್ಲಿ ಏನಿದೆ?

ಟ್ರಾಯ್ ಹೊಸ ನಿಯಮ ಕೇಬಲ್ ಹಾಗೂ ಡಿಟಿಎಚ್ ಗ್ರಾಹಕರ ಮೇಲೆ ಪ್ರಭಾವ ಬೀರೋದು ಪಕ್ಕಾ. ಇನ್ನುಮುಂದೆ ಅಪರೇಟರ್ ಗಳು ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಗ್ರಾಹಕರಿಗೆ ಕೇಬಲ್, ಡಿಟಿಎಚ್ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿದೆ. ಗ್ರಾಹಕರು ತಾವು ಇಷ್ಟಪಡುವ ಚಾನೆಲ್ ಗಳನ್ನು ನೋಡಬಹುದು ಹಾಗು ಅವುಗಳಿಗೆ ಮಾತ್ರ ಶುಲ್ಕ ಕಟ್ಟಬಹುದು. ಏಪ್ರಿಲ್ 1ರಿಂದ ಹೊಸ ನಿಯಮ ಜಾರಿ: ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರು ಏನು ಮಾಡಬೇಕು?

ಬೇಸಿಕ್ ಪ್ಯಾಕ್
 

ಬೇಸಿಕ್ ಪ್ಯಾಕ್

100 ಚಾನೆಲ್ ಉಚಿತ ಮಾರ್ಚ್ ೩೧ರ ಒಳಗೆ ಗ್ರಾಹಕರು ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಹಕರಿಗೆ 100 ಏರ್ ಚಾನೆಲ್ ಗಳಿಗೆ ಉಚಿತವಾಗಿ ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡಲಾಗುತ್ತದೆ. 100 ರ ನಂತರ, ಗ್ರಾಹಕರು ಆಯ್ಕೆ ಮಾಡುವ ಚಾನಲ್ ಆಧರಿಸಿ ಪಾವತಿಸಬೇಕಾಗುತ್ತದೆ. ಬೇಸಿಕ್ ಪ್ಯಾಕೇಜ್ (Base pack) ನಲ್ಲಿ ಮಾಸಿಕ ರೂ. 130 ಶುಲ್ಕ ಪಾವತಿಸಿ 100 ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು. ಇದಕ್ಕೆ ಶೇ.18ರಷ್ಟು ಜಿಎಸ್ಟಿ ಸೇರಿ ರೂ. 153 ಪಾವತಿಸಬೇಕಿದೆ.
ಟ್ರಾಯ್ ಹೊಸ ನಿಯಮ ಜಾರಿಗೊಳಿಸಿದ ನಂತರ, ಕೇಬಲ್ ಮತ್ತು DTH ಗ್ರಾಹಕರು ನೋಡಬೇಕಾದ ಚಾನಲ್ ಗಳಿಗೆ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಬೇಸಿಕ್ ಪ್ಯಾಕೇಜ್ (Base pack) ನಲ್ಲಿ ಮಾಸಿಕ ರೂ. 130 ಶುಲ್ಕ ಪಾವತಿಸಿ 100 ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು. ಇದಕ್ಕೆ ಶೇ.18ರಷ್ಟು ಜಿಎಸ್ಟಿ ಸೇರಿ ರೂ. 153 ಪಾವತಿಸಬೇಕಿದೆ. ಎಲ್ಲಾ 25 ದೂರದರ್ಶನ ಚಾನೆಲ್ ಗಳು ಬೇಸ್ ಪ್ಯಾಕ್ ನಲ್ಲಿ ಲಭ್ಯವಿರುತ್ತವೆ. ಉಳಿದ 75 ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೇಬಲ್‌ ಟಿವಿ, ಡಿಟಿಎಚ್‌ಗಳಿಗೆ ಗಂಡಾಂತರ! ಇನ್ಮುಂದೆ ಕೇಬಲ್‌, ಡಿಟಿಎಚ್ ಸೇವೆ ಸಿಗೋದು ಕಷ್ಟ..

Read more about: trai money telecom business
English summary

Migration to new TV channel tariff regime complete: TRAI

Migration to the new tariff order is complete with most of the viewers either selecting their choice of channels or continuing with the best fit plans (BFPs).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X