For Quick Alerts
ALLOW NOTIFICATIONS  
For Daily Alerts

ಸಿದ್ಧಾರ್ಥ ಸಾವಿನ ಬಳಿಕ ಕುಸಿದ ಕೆಫೆ ಕಾಫಿ ಡೇ ಮಾರುಕಟ್ಟೆ ಮೌಲ್ಯ

|

ಬೆಂಗಳೂರು, ಆಗಸ್ಟ್ 16 : ಕೆಫೆ ಕಾಫಿ ಡೇ ಮಾಲೀಕ ವಿ. ಜೆ. ಸಿದ್ಧಾರ್ಥ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹೊರಬರುವುದಕ್ಕೂ ಮೊದಲು ಕಾಫಿ ಡೇ ಎಂಟರ್‌ಪ್ರೈಸಸ್ ಲಿ. ಆಸ್ತಿ 4050 ಕೋಟಿ ಇತ್ತು. ಪ್ರಸ್ತುತ ಮಾರುಕಟ್ಟೆ ಮೌಲ್ಯ 1,393 ಕೋಟಿಗೆ ಇಳಿಕೆಯಾಗಿದೆ.

ವಿ. ಜಿ. ಸಿದ್ದಾರ್ಥ ನಿಗೂಢ ಸಾವಿನ ಬಳಿಕ ಕೆಫೆ ಕಾಫಿ ಡೇ ಭವಿಷ್ಯವೇನು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಾಫಿ ಡೇ ಷೇರುಗಳ ಮೌಲ್ಯ ಕಡಿಮೆಯಾಗುತ್ತಲೇ ಇದೆ. ಸಿದ್ದಾರ್ಥ ಇನ್ನಿಲ್ಲ ಎಂಬ ಸುದ್ದಿ ಹೊರ ಬಂದ ಬಳಿಕ ಮಾರುಕಟ್ಟೆ ಮೌಲ್ಯ ಕುಸಿದಿದೆ.

ಸೋಲಿಗೆ ಹೆದರಬೇಡಿ ಎಂದಿದ್ದ ಸಿದ್ಧಾರ್ಥ ಮರೆತ ಮಾತುಸೋಲಿಗೆ ಹೆದರಬೇಡಿ ಎಂದಿದ್ದ ಸಿದ್ಧಾರ್ಥ ಮರೆತ ಮಾತು

ಅದು 2009ರ ಜನವರಿ ತಿಂಗಳು ಸತ್ಯಂ ಕಂಪ್ಯೂಟರ್ ಸರ್ವೀಸ್‌ನಲ್ಲಿ ಹಗರಣ ನಡೆದಿದೆ ಎಂಬ ಮಾಹಿತಿ ಹೊರಬಿದ್ದಾಗಲೂ ಹಾಗೇಯೇ ಆಗಿತ್ತು. ಕಂಪನಿಯ ಮಾರುಕಟ್ಟೆ ಮೌಲ್ಯ ಸಂಪೂರ್ಣವಾಗಿ ಕುಸಿದಿತ್ತು. ಕಂಪನಿ ಷೇರುಗಳ 40 ರೂ.ಗೆ ಬಂದಿತ್ತು.

ಸಿದ್ಧಾರ್ಥ ಸಾವಿನ ಬಳಿಕ ಕುಸಿದ ಕೆಫೆ ಕಾಫಿ ಡೇ ಮಾರುಕಟ್ಟೆ ಮೌಲ್ಯ

40 ರಿಂದ 60 ರೂ.ಗಳ ತನಕ ಕೆಲವು ದಿನಗಳ ಕಾಲ ಷೇರುಗಳ ಮೌಲ್ಯವಿತ್ತು. ಟೆಕ್ ಮಹೀಂದ್ರಾ ಆಗ 58 ರೂ. ನೀಡಿ ಷೇರುಗಳನ್ನು ಖರೀದಿ ಮಾಡಿತ್ತು. ಕಾಫಿ ಡೇ ಎಂಟರ್‌ಪ್ರೈಸಸ್ ಲಿ. ಕೂಡಾ ಈಗ ಷೇರುಗಳ ಮೌಲ್ಯ ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆಯಲ್ಲಿದೆ.

ವಿಜಿ ಸಿದ್ದಾರ್ಥ ಅಕಾಲಿಕ ಮರಣ, ಸಂಸ್ಥೆ ಮೌಲ್ಯ, ಸಿಸಿಡಿ ಷೇರು ಪಾತಾಳಕ್ಕೆ

ಕಾಫಿ ಡೇ ಎಂಟರ್‌ಪ್ರೈಸಸ್ ಲಿ. 2019ರ ಆರ್ಥಿಕ ವರ್ಷದ ಆರಂಭದಲ್ಲಿಯೇ ದೊಡ್ಡ ಸಾಲದಲ್ಲಿ ಸಿಲುಕಿತ್ತು. ಈಗ ಸಿದ್ಧಾರ್ಥ ಸಾವಿನ ಬಳಿಕ ಬೆಂಗಳೂರಿನ 90 ಎಕರೆ ಪ್ರದೇಶದಲ್ಲಿ ಗ್ಲೋಬಲ್ ವಿಲೇಜ್ ಮಾರಾಟ ಮಾಡಲು ಸಿಡಿಇಎಲ್ ತೀರ್ಮಾನಿಸಿದೆ.

ಕೆಫೆ ಕಾಫಿ ಡೇ ಸುಮಾರು 2,400 ಕೋಟಿ ಸಾಲದಲ್ಲಿದೆ. ಆಸ್ತಿ ಮಾರಾಟದಿಂದ ಸುಮಾರು 2,100 ಕೋಟಿ ಬರುವ ನಿರೀಕ್ಷೆ ಇದೆ. ಕಾಫಿ ಡೇ ಷೇರುಗಳ ಮೌಲ್ಯ ಹೆಚ್ಚಳವಾದರೆ ಆರ್ಥಿಕ ನಷ್ಟದಿಂದ ಹೊರಬರಬಹುದಾಗಿದೆ.

English summary

Coffee Day Enterprises Ltd Market Capitalization Dropped

After the death of V.G. Siddhartha Coffee Day Enterprises Ltd market capitalization dropped by nearly two-thirds. Now it's dropped to 5050 crores to 1393 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X