For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರಿಗೆ ಹೀಗೊಂದು ಅವಕಾಶ

|

ಈ ಬಾರಿಯ ಅಕ್ಷಯ ತೃತೀಯ ಏಪ್ರಿಲ್ 26ನೇ ತಾರೀಕಿನ ಭಾನುವಾರ ಬಂದಿದೆ. ಪ್ರಮುಖ ಚಿನ್ನದ ಆಭರಣಗಳ ವರ್ತಕರು ಆನ್ ಲೈನ್ ನಲ್ಲಿ ಚಿನ್ನದ ಮಾರಾಟ ಮಾಡಲು ಮುಂದಾಗಿದ್ದಾರೆ. ಕೊರೊನಾ ವೈರಾಣು ಹಬ್ಬದಂತೆ ತಡೆಯಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವ ಸಂದರ್ಭದಲ್ಲಿ ಎಲ್ಲ ಆಭರಣ ಮಳಿಗೆಗಳು ಮುಚ್ಚಿವೆ.

ಚಿನ್ನದ ಮಾಲೀಕತ್ವ ಪ್ರಮಾಣಪತ್ರವನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ಬಗ್ಗೆ ಭಾನುವಾರ ಕಲ್ಯಾಣ್ ಜ್ಯುವೆಲ್ಲರ್ಸ್ ಘೋಷಣೆ ಮಾಡಿದೆ. ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿರುವ ಕಲ್ಯಾಣ್ ಜ್ಯುವೆಲ್ಲರ್ಸ್, ಎರಡು ಗ್ರಾಮ್ ಮೇಲ್ಪಟ್ಟು ಖರೀದಿ ಮಾಡಬಹುದು. ಅದಕ್ಕೆ ಚಿನ್ನದ ಮಾಲೀಕತ್ವ ಪ್ರಮಾಣ ಪತ್ರವನ್ನು ಅಕ್ಷಯ ತೃತೀಯ ದಿನದಂದು ತಲುಪುವಂತೆ ಕಳಿಸಲಾಗುತ್ತದೆ. ಅದು ಕೂಡ ಗ್ರಾಹಕರು ಯಾವ ಪ್ಲಾಟ್ ಫಾರ್ಮ್ ನಲ್ಲಿ ಬೇಕೆನ್ನುತ್ತಾರೋ ಅದರಲ್ಲಿ ಕಳಿಸಲಾಗುತ್ತದೆ ಎಂದಿದೆ.

ಅಕ್ಷಯ ತೃತೀಯದ ಶುಭ ದಿನದಂದು ಚಿನ್ನ ಖರೀದಿಸಬೇಕು ಎನ್ನುವ ಗ್ರಾಹಕರ ಉದ್ದೇಶವನ್ನು ಈ ಚಿನ್ನದ ಮಾಲೀಕತ್ವ ಪ್ರಮಾಣಪತ್ರವು ಈಡೇರಿಸುತ್ತದೆ. ಎಷ್ಟು ಮೊತ್ತದ ಚಿನ್ನ ಖರೀದಿ ಮಾಡಿದ್ದಾರೆ ಎಂಬುದಕ್ಕೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರಿಗೆ ಹೀಗೊಂದು ಅವಕಾಶ

ಸೋಷಿಯಲ್ ಮೀಡಿಯಾಗಳಲ್ಲಿ ಚಿನ್ನ ಖರೀದಿ ಬಗ್ಗೆ ಕೇಳಿಕೊಂಡು ಬಹಳ ಮಂದಿ ವಿಚಾರಿಸುತ್ತಿದ್ದಾರೆ. ಆ ಕಾರಣಕ್ಕೆ ಇದೇ ಮೊದಲ ಬಾರಿಗೆ ಚಿನ್ನದ ಪ್ರಮಾಣಪತ್ರ ವಿತರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಕಲ್ಯಾಣ್ ಜ್ಯುವೆಲ್ಲರ್ಸ್ ನ ಸಿಎಂಡಿ ತಿಳಿಸಿದ್ದಾರೆ. ಏಪ್ರಿಲ್ 21ನೇ ತಾರೀಕಿನಿಂದ ಗ್ರಾಹಕರು ಕಲ್ಯಾಣ್ ಜ್ಯುವೆಲ್ಲರ್ಸ್ ವೆಬ್ ಸೈಟ್ ನಿಂದ ಚಿನ್ನ ಮಾಲೀಕತ್ವದ ಪ್ರಮಾಣಪತ್ರವನ್ನು ಖರೀದಿ ಮಾಡಬಹುದು.

ಇದೇ ರೀತಿ ಟಾಟಾ ಗ್ರೂಪ್ ನ ತನಿಷ್ಕ್ ನಿಂದ ಕೂಡ ಅಕ್ಷಯ ತೃತೀಯಕ್ಕೆ ಆನ್ ಲೈನ್ ನಲ್ಲಿ ಚಿನ್ನದ ಮಾರಾಟ ಘೋಷಣೆ ಮಾಡಲಾಗಿದೆ. ಇ ಕಾಮರ್ಸ್ ವೆಬ್ ಸೈಟ್ www.tanishq.co.in ನಿಂದ ಏಪ್ರಿಲ್ 18ರಿಂದ 27ರ ಮಧ್ಯೆ ಖರೀದಿ ಮಾಡಬಹುದು. ಒಂದು ಸಲ ಲಾಕ್ ಡೌನ್ ತೆರವಾದ ಮೇಲೆ ಮಳಿಗೆಗೆ ಹೋಗಿ ಆಭರಣ ಖರೀದಿ ಮಾಡಬಹುದು ಅಥವಾ ಮನೆ ಬಾಗಿಲಿಗೆ ಒಡವೆ ತಲುಪಿಸಲಾಗುತ್ತದೆ.

English summary

Akshaya Tritiya Special: Jewellers To Enable Online Gold Purchase

This year Akshaya Tritiya on April 26, Sunday. Here is an opportunity to purchase through online.
Story first published: Monday, April 20, 2020, 22:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X