For Quick Alerts
ALLOW NOTIFICATIONS  
For Daily Alerts

ಸುಂದರ್‌ ಪಿಚೈಗೆ ಮುಂದಿನ 3 ವರ್ಷದಲ್ಲಿ ಸಿಗಲಿದೆ 1,707 ಕೋಟಿ ರುಪಾಯಿ

|

ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ಹೊಸ ಸಿಇಒ(ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ) ಆಗಿರುವ ಭಾರತ ಮೂಲದ ಸುಂದರ್ ಪಿಚೈ, ಕಂಪನಿ ನೀಡಿರುವಂತಹ ಗುರಿಗಳನ್ನು ಮುಟ್ಟಿದರೆ ಮುಂದಿನ 3 ವರ್ಷಗಳಲ್ಲಿ ಸಂಬಳ ಹೊರತುಪಡಿಸಿ 240 ಮಿಲಿಯನ್ ಅಮೆರಿಕ್ ಡಾಲರ್ (1,707 ಕೋಟಿ 7 ಲಕ್ಷದ 20 ಸಾವಿರ ರುಪಾಯಿ) ಮೌಲ್ಯದ ಷೇರುಗಳ(Stock) ಪ್ರಶಸ್ತಿಯನ್ನು ಪಡೆಯಲಿದ್ದಾರೆ ಎಂದು ಕಂಪನಿಯು ಘೋಷಿಸಿದೆ.

 

ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರುವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು

ಅಲ್ಫಾಬೆಟ್ ನೂತನ ಸಿಇಒ ಸುಂದರ್ ಪಿಚೈ್ 2020ರಿಂದ ವಾರ್ಷಿಕವಾಗಿ 2 ಮಿಲಿಯನ್ ಅಮೆರಿಕನ್ ಡಾಲರ್(14 ಕೋಟಿ 22ಲಕ್ಷ 56 ಸಾವಿರ) ಸಂಬಳ ಪಡೆಯುವುದರ ಜೊತೆಗೆ ಮುಂದಿನ 3 ವರ್ಷದಲ್ಲಿ ಕಂಪನಿಯ ಟಾರ್ಗೆಟ್ ಮುಟ್ಟಿಸಿದರೆ 1,707 ಕೋಟಿ ರುಪಾಯಿಗೂ ಅಧಿಕ ಮೊತ್ತದ ಸ್ಟಾಕ್ ಪ್ರಶಸ್ತಿ ಪಡೆಯಲಿದ್ದಾರೆ.

 
ಸುಂದರ್‌ ಪಿಚೈಗೆ ಮುಂದಿನ 3 ವರ್ಷದಲ್ಲಿ ಸಿಗಲಿದೆ 1,707 ಕೋಟಿ ರುಪಾಯಿ

ಅಲ್ಫಾಬೆಟ್ ಷೇರುಗಳು S&P 100 ಸೂಚ್ಯಂಕವನ್ನು ಮೀರಿಸಿದರೆ ಪಿಚೈ ಹೆಚ್ಚುವರಿ 90 ಮಿಲಿಯನ್ ಅಮೆರಿಕನ್ ಡಾಲರ್ (640 ಕೋಟಿ 15 ಲಕ್ಷ 20 ಸಾವಿರ) ಸ್ಟಾಕ್ ಪ್ರಶಸ್ತಿ ಪಡೆಯಲಿದ್ದಾರೆ. ಕಂಪನಿಯು ಇದೇ ಮೊದಲ ಬಾರಿಗೆ ಕಾರ್ಯಕ್ರಮತೆ (Performance) ಆಧಾರದ ಮೇಲೆ ಸ್ಟಾಕ್ ಪ್ರಶಸ್ತಿಗಳನ್ನು ನೀಡುತ್ತಿದೆ.

ಇತ್ತೀಚೆಗಷ್ಟೇ ಗೂಗಲ್‌ನ ಮಾತೃಸಂಸ್ಥೆ ಅಲ್ಫಾಬೆಟ್ ಭಾರತೀಯ ಮೂಲದ ಸುಂದರ್ ಪಿಚೈಗೆ ನಾಯಕತ್ವ ಜವಾಬ್ದಾರಿ ವಹಿಸಿತು. ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್ ಆಡಳಿತದಿಂದ ಕೆಳಗಿಳಿದ ಬಳಿಕ ಗೂಗಲ್ ಸಿಇಒ ಆಗಿದ್ದ ಸುಂದರ್ ಪಿಚೈ ಜಗತ್ತಿನ ಶಕ್ತಿಶಾಲಿ ಕಾರ್ಪೋರೇಟ್ ಕಂಪನಿಯ ನಾಯಕನಾಗಿದ್ದಾರೆ.

ಸುಂದರ್ ಪಿಚೈನಿಂದ ಮತ್ತೊಂದು ಮೆಟ್ಟಿಲು ಎತ್ತರಕ್ಕೆ ಹೆಜ್ಜೆ, ಆಲ್ಫಾಬೆಟ್ ಸಿಇಒಸುಂದರ್ ಪಿಚೈನಿಂದ ಮತ್ತೊಂದು ಮೆಟ್ಟಿಲು ಎತ್ತರಕ್ಕೆ ಹೆಜ್ಜೆ, ಆಲ್ಫಾಬೆಟ್ ಸಿಇಒ

47 ವರ್ಷದ ಸುಂದರ್ ಪಿಚೈ 2015ರಲ್ಲಿ ಗೂಗಲ್ ಸಿಇಓ ಆಗಿ ನೇಮಕಗೊಂಡರು. ಮೂಲತಃ ತಮಿಳುನಾಡಿನ ಮದುರೈನವರಾದ ಸುಂದರ್, ಐಐಟಿ ಖರಗ್ ಪುರ್, ಸ್ಟ್ಯಾನ್ ಫೋರ್ಡ್ ವಿವಿಯ ವಾರ್ಟನ್ ಬಿಜಿನೆಸ್ ಸ್ಕೂಲ್‌ನಲ್ಲಿ ವ್ಯಾಸಾಂಗ ಮಾಡಿದ್ದಾರೆ. ಇದೀಗ ಗೂಗಲ್ ಜೊತೆಗೆ ಹೆಚ್ಚುವರಿಯಾಗಿ ಅಲ್ಫಾಬೆಟ್ ಸಿಇಒ ಆಗಿಯು ಕಾರ್ಯ ನಿರ್ವಹಿಸುತ್ತಿದ್ದಾರೆ.

English summary

Alphabet CEO Sundar Pichai Awarded 242 Million US Dollar package

Alphabet New CEO Sundar Pichai will receive 240 million us dollar in stock awards over the next 3 years if he reach company target
Story first published: Saturday, December 21, 2019, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X