For Quick Alerts
ALLOW NOTIFICATIONS  
For Daily Alerts

ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಕಾರವಿಲ್ಲ : ಪಿಯೂಷ್ ಗೋಯೆಲ್

|

ಇ-ಕಾಮರ್ಸ್ ದಿಗ್ಗಜ ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಪ್ರಯೋಜನವಾಗುವುದಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಟೀಕಿಸಿದ್ದಾರೆ.

''ಬಹುರಾಷ್ಟ್ರೀಯ ಇ-ಕಾಮರ್ಸ್ ಸಂಸ್ಥೆಗಳು ಭಾರತದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೇ ಹೊರತು, ಬಹುಬ್ರ್ಯಾಂಡ್‌ನ ರಿಟೇಲ್ ವಹಿವಾಟಿಗೆ ಹಿಂಬಾಗಿಲಿನಿಂದ ಪ್ರವೇಶಿಸಲು ನಿಯಮಗಳಲ್ಲಿನ ಲೋಪಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು'' ಎಂದು ಹೇಳಿದ್ದಾರೆ.

ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಕಾರವಿಲ್ಲ!

''ಮಾರಾಟದಾರರು ಮತ್ತು ಖರೀದಿದಾರರಿಗೆ ಇಂಟರ್‌ನೆಟ್ ಮೂಲಕ ತಂತ್ರಜ್ಞಾನ ಆಧಾರಿತ ಮಾರುಕಟ್ಟೆ ತಾಣ ಒದಗಿಸುವ ಇ-ಕಾಮರ್ಸ್ ಕಂಪನಿಗಳು ಭಾರೀ ನಷ್ಟಕ್ಕೆ ಗುರಿಯಾಗುವುದನ್ನು ಕಂಡಾಗ ಅಚ್ಚರಿಯಾಗುತ್ತದೆ. ನಷ್ಟದ ಮೂಲದ ಬಗ್ಗೆ ಸಂದೇಹವಾಗುತ್ತದೆ. ಇದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ'' ಎಂದು ಹೇಳಿದ್ದಾರೆ.

ಭಾರತದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ: ಜೆಫ್ ಬೇಜೋಸ್ಭಾರತದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ: ಜೆಫ್ ಬೇಜೋಸ್

ಕಿರು, ಸಣ್ಣ ಮತ್ತು ಸಣ್ಣ ಉದ್ಯಮಗಳನ್ನು ಡಿಜಿಟೈಜ್ ಮಾಡಲು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೇಜೋಸ್ ಬುಧವಾರ(ಜನವರಿ 15) ಘೋಷಿಸಿದ್ದರು. ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಅಮೆಜಾನ್ ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮಕ್ಕಾಗಿ ಬೇಜೋಸ್ ಭಾರತಕ್ಕೆ ಆಗಮಿಸಿದ್ದರು.

English summary

Amazon Investing 1 Billion Dollar Not Doing Favour India

Jeff Bezos's firm Amazon was not doing a favour to the country by the investments said Union Commerce and Industry Minister Piyush Goyal
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X