For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಪೇ ಮೂಲಕ 5 ರುಪಾಯಿಗೂ ಡಿಜಿಟಲ್ ಚಿನ್ನ ಖರೀದಿ

|

ಅಮೆಜಾನ್ ಇಂಡಿಯಾದ ಫೈನಾನ್ಷಿಯಲ್ ಸೇವೆ ಒದಗಿಸುವ ಪ್ಲಾಟ್ ಫಾರ್ಮ್ ಅಮೆಜಾನ್ ಪೇನಿಂದ ಬಳಕೆದಾರರಿಗೆ ಡಿಜಿಟಲ್ ಚಿನ್ನ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. 5 ರುಪಾಯಿ ಮೊತ್ತಕ್ಕೆ ಕೂಡ ಚಿನ್ನ ಖರೀದಿಸಬಹುದು. ಈ ಹೂಡಿಕೆ ಫೀಚರ್ ಗೆ 'ಗೋಲ್ಡ್ ವಾಲ್ಟ್' ಎಂದು ಹೆಸರಿಡಲಾಗಿದೆ. ಈ ಕೊಡುಗೆಗಾಗಿ ಸೇಫ್ ಗೋಲ್ಡ್ ಜತೆಗೆ ಅಮೆಜಾನ್ ಪೇ ಸಹಭಾಗಿತ್ವ ವಹಿಸಿದೆ.

ಸೇಫ್ ಗೋಲ್ಡ್ ನಿಂದ 995 ಶುದ್ಧತೆಯ (99.5% ಶುದ್ಧತೆ) ಚಿನ್ನ ನೀಡಲಾಗುತ್ತದೆ. ಈ ಮೂಲಕ ಅಮೆಜಾನ್ ಗ್ರಾಹಕರು ಯಾವಾಗ ಬೇಕಾದರೂ ಸ್ಪರ್ಧಾತ್ಮಕ ಬೆಲೆಗೆ ಚಿನ್ನ ಖರೀದಿ ಹಾಗೂ ಮಾರಾಟ ಮಾಡುವ ಸ್ವಾತಂತ್ರ್ಯ ಪಡೆಯುತ್ತಾರೆ. ಬಾಡಿಗೆಗೆ ಲಾಕರ್ ಪಡೆದು, ಅದರೊಳಗೆ ಚಿನ್ನ ಇಡಬೇಕು ಎಂಬ ಚಿಂತೆಯೂ ಇಲ್ಲ.

ಚಿನ್ನದ ದರ ಭಾರತದಲ್ಲಿ 70 ಸಾವಿರ ಮುಟ್ಟಬಹುದು: ICICI ಡೈರೆಕ್ಟ್ಚಿನ್ನದ ದರ ಭಾರತದಲ್ಲಿ 70 ಸಾವಿರ ಮುಟ್ಟಬಹುದು: ICICI ಡೈರೆಕ್ಟ್

ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಮೊಬಿಕ್ಬಿಕ್, ಆಕ್ಸಿಸ್ ಬ್ಯಾಂಕ್ ಮಾಲೀಕತ್ವದ ಫ್ರೀಚಾರ್ಜ್ ಕೂಡ ಡಿಜಿಟಲ್ ಚಿನ್ನದ ಖರೀದಿ- ಮಾರಾಟಕ್ಕೆ ಅವಕಾಶ ನೀಡಿವೆ. ಪೇಟಿಎಂ, ಗೂಗಲ್ ಪೇ ಮತ್ತು ಫೋನ್ ಪೇ ಬಳಕೆದಾರರು 1 ರುಪಾಯಿಗೆ ಕೂಡ ಚಿನ್ನವನ್ನು ಖರೀದಿ ಮಾಡಬಹುದು.

ಅಮೆಜಾನ್ ಪೇ ಮೂಲಕ 5 ರುಪಾಯಿಗೂ ಡಿಜಿಟಲ್ ಚಿನ್ನ ಖರೀದಿ

ಗೂಗಲ್ ಪೇನಿಂದ ಕಳೆದ ವರ್ಷ ಏಪ್ರಿಲ್ ನಲ್ಲಿ ಡಿಜಿಟಲ್ ಚಿನ್ನ ಆರಂಭಿಸಲಾಯಿತು. ಪೇಟಿಎಂ ಹಾಗೂ ಎರಡೂ 2017ರಲ್ಲಿ ಆರಂಭಿಸಿದವು. ಗುರುಗ್ರಾಮ ಮೂಲದ ಮೊಬಿಕ್ವಿಕ್ 2018ರಲ್ಲಿ ಆರಂಭ ಮಾಡಿತು. ಚೀನಾದ ಎಲೆಕ್ಟ್ರಾನ್ಸಿಕ್ಸ್ ಮಾರಾಟ ಕಂಪೆನಿ ಶಿಯೋಮಿಯಿಂದ ಏಪ್ರಿಲ್ ನಲ್ಲಿ MiPay ಮೂಲಕ ಮಾರಾಟ ಶುರು ಮಾಡಲಾಯಿತು.

English summary

Amazon Pay Launches Digital Gold Scheme; Purchase Start At 5 Rupees

Amazon pay launches digital gold platform in India. You can buy with starting price of 5 rupees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X