For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಭಾರತದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ : ಜೆಫ್ ಬೇಜೋಸ್ ಹೇಳಿಕೆ

|

2025ರ ಒಳಗೆ ಭಾರತದಲ್ಲಿ ಅಮೆಜಾನ್ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಭಾರತ ಪ್ರವಾಸದಲ್ಲಿರುವ ಇ ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೇಜೋಸ್ ಶುಕ್ರವಾರ ಹೇಳಿದ್ದಾರೆ.

 

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್, ಜೆಫ್ ಬೇಜೋಸ್ ಮೇಲೆ ಟೀಕೆ ಮಾಡಿದ ಒಂದು ದಿನದ ಬಳಿಕ ಜೆಫ್ ಬೇಜೋಸ್ ಈ ಹೇಳಿಕೆಯನ್ನು ನೀಡಿದ್ದು, ಅಮೆಜಾನ್ ಕಂಪನಿಯು ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸಾಗಾಟ(ಲಾಜಿಸ್ಟಿಕ್) ನೆಟ್‌ವರ್ಕ್ ಮೇಲೆ ಹೂಡಿಕೆ ಮಾಡುವ ಮೂಲಕ 2025ರ ಒಳಗೆ ಭಾರತದಲ್ಲಿ 10 ಲಕ್ಷ ಉದ್ಯೋಗಗಳನ್ನು ಅಮೆಜಾನ್ ಸೃಷ್ಟಿಸಲಿದೆ ಎಂದಿದ್ದಾರೆ.

 
ಭಾರತದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದ್ದೇವೆ : ಜೆಫ್ ಬೇಜೋಸ್

''2003ರಿಂದೀಚೆಗೆ ಅಮೆಜಾನ್ ಈಗಾಗಲೇ ದೇಶದಲ್ಲಿ 7ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸಲಿದ್ದು, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಒಂದು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ನಾವು ಹೂಡಿಕೆ ಮಾಡುತ್ತಿದ್ದೇವೆ'' ಎಂದು ಬೇಜೋಸ್ ಹೇಳಿದ್ದಾರೆ.

ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಕಾರವಿಲ್ಲ : ಪಿಯೂಷ್ ಗೋಯೆಲ್ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಕಾರವಿಲ್ಲ : ಪಿಯೂಷ್ ಗೋಯೆಲ್

ಬುಧವಾರ ಜೆಫ್ ಬೇಜೋಸ್ ಭಾರತದಲ್ಲಿ ಚಿಕ್ಕ, ಮಧ್ಯಮ ಮತ್ತು ಸಣ್ಣ ಉದ್ಯಮಗಳನ್ನು ಡಿಜಿಟೈಜ್ ಮಾಡಲು 1 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ ಸುಮಾರು 7,083 ಕೋಟಿ) ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. ಈ ಕುರಿತಾಗಿ ಟೀಕಿಸಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಅಮೆಜಾನ್ 1 ಬಿಲಿಯನ್ ಡಾಲರ್ ಹೂಡಿಕೆಯಿಂದ ಭಾರತಕ್ಕೆ ಉಪಯೋಗವಾಗುವುದಿಲ್ಲ ಎಂದಿದ್ದರು.

English summary

Amazon will create 10 lakh new jobs in India by 2025 said Jeff Bezos

Amazon will create 10 lakh new jobs in India by 2025 through continued investments said CEO Jeff Bezos
Story first published: Friday, January 17, 2020, 19:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X