For Quick Alerts
ALLOW NOTIFICATIONS  
For Daily Alerts

ದಿನಕ್ಕೆ 22 ಕೋಟಿಯಂತೆ ದಾನ ಮಾಡಿದ ಮಹಾನ್ ದಾನಿ ಆತ

|

ಜಗತ್ತಿನ ಅತ್ಯಂತ ಶ್ರೀಮಂತ ಯಾರು, ಭಾರತಕ್ಕೆ ಯಾರು ಎಂಬ ಪಟ್ಟಿಗಿಂತ ಸ್ಫೂರ್ತಿ ನೀಡುವ ಮಾಹಿತಿ ಈ ಲೇಖನದಲ್ಲಿದೆ. 2020ನೇ ಇಸವಿಯಲ್ಲಿ ಭಾರತದಲ್ಲಿ ಟಾಪ್ ದಾನಿಗಳು ಯಾರು ಎಂಬುದೇ ಈ ಪಟ್ಟಿಯ ವಿಶೇಷ. ವಿಪ್ರೋಸ ಸ್ಥಾಪಕ- ಅಧ್ಯಕ್ಷ ಅಜೀಂ ಪ್ರೇಂ ಜೀ ಟಾಪ್ ಸ್ಥಾನದಲ್ಲಿ ಇದ್ದಾರೆ. ದಿನಕ್ಕೆ 22 ಕೋಟಿಯಂತೆ 7,904 ಕೋಟಿ ರುಪಾಯಿಯನ್ನು ದಾನ ಮಾಡಿದ್ದಾರೆ ಅಜೀಂ ಪ್ರೇಂ ಜೀ.

ಶ್ರೀಮಂತ ಭಾರತೀಯರ ಹ್ಯುರನ್ ಪಟ್ಟಿ: ಸಾವಿರ ಕೋಟಿಗೂ ಹೆಚ್ಚು ಆಸ್ತಿ ಇರುವ 627 ಮಂದಿಶ್ರೀಮಂತ ಭಾರತೀಯರ ಹ್ಯುರನ್ ಪಟ್ಟಿ: ಸಾವಿರ ಕೋಟಿಗೂ ಹೆಚ್ಚು ಆಸ್ತಿ ಇರುವ 627 ಮಂದಿ

"ಏಪ್ರಿಲ್ 1ನೇ ತಾರೀಕು ಅಜೀಂ ಪ್ರೇಂ ಜೀ ಫೌಂಡೇಷನ್, ವಿಪ್ರೋ ಮತ್ತು ವಿಪ್ರೋ ಎಂಟರ್ ಪ್ರೈಸಸ್ ನಿಂದ ಕೊರೊನಾ ನಿಯಂತ್ರಣಕ್ಕಾಗಿ 1,125 ಕೋಟಿ ದೇಣಿಗೆ ನೀಡುವ ಘೋಷಣೆ ಮಾಡಿತು. ವಿಪ್ರೋದ ವಾರ್ಷಿಕ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಚಟುವಟಿಕೆ ಜತೆಗೆ ಹೆಚ್ಚುವರಿಯಾಗಿ ಘೋಷಣೆ ಮಾಡಿದ ಮೊತ್ತವಿದು," ಎಂದು ಎಡೆಲ್ ಗೀವ್ ಹ್ಯುರನ್ ಇಂಡಿಯಾ ದಾನಿಗಳ ಪಟ್ಟಿ 2020ರಲ್ಲಿ ತಿಳಿಸಲಾಗಿದೆ.

ಅಜೀಂ ಪ್ರೇಂ ಜೀ ರೋಲ್ ಮಾಡೆಲ್

ಅಜೀಂ ಪ್ರೇಂ ಜೀ ರೋಲ್ ಮಾಡೆಲ್

ದಾನ ಮಾಡುವ ವಿಚಾರದಲ್ಲಿ ಅಜೀಂ ಪ್ರೇಂ ಜೀ ಅವರು ಇತರ ಉದ್ಯಮಿಗಳಿಗೆ ರೋಲ್ ಮಾಡೆಲ್ ಎಂದು ಹ್ಯುರನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಮುಖ್ಯ ಸಂಶೋಧಕ ಅನಸ್ ರೆಹಮಾನ್ ಜುನೈದ್ ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇರುವವರು ಎಚ್ ಸಿಎಲ್ ಟೆಕ್ನಾಲಜೀಸ್ ನ ಶಿವ್ ನಾಡಾರ್. ದಾನ ಕಾರ್ಯಗಳಿಗೆ ಅವರು 795 ಕೋಟಿ ರುಪಾಯಿ ನೀಡಿದ್ದಾರೆ. ಏಷ್ಯಾದ ಅತ್ಯಂತ ಶ್ರೀಮಂತ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ- ಕಾರ್ಯನಿರ್ವಹಣಾ ನಿರ್ದೇಶಕ ಮುಕೇಶ್ ಅಂಬಾನಿ ಮೂರನೇ ಸ್ಥಾನದಲ್ಲಿದ್ದು, ₹458 ಕೋಟಿ ನೀಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ನೀಡಿದ ದೇಣಿಗೆ ಎಷ್ಟು?

ರಿಲಯನ್ಸ್ ಇಂಡಸ್ಟ್ರೀಸ್ ನೀಡಿದ ದೇಣಿಗೆ ಎಷ್ಟು?

"30ನೇ ಮಾರ್ಚ್ 2020, ರಿಲಯನ್ಸ್ ಇಂಡಸ್ಟ್ರೀಸ್ PM CARES ಫಂಡ್ ಗೆ 500 ಕೋಟಿ ಘೋಷಿಸಿತು. ಕೊರೊನಾ ವಿರುದ್ಧ ಹೋರಾಟಕ್ಕೆ ಮಹಾರಾಷ್ಟ್ರ, ಗುಜರಾತ್ ಸಿಎಂ ಪರಿಹಾರ ನಿಧಿಗೆ ತಲಾ 5 ಕೋಟಿ ಘೋಷಿಸಲಾಯಿತು," ಎಂದು ವರದಿ ಹೇಳಿದೆ. 276 ಕೋಟಿ ರುಪಾಯಿ ದೇಣಿಗೆಯೊಂದಿಗೆ ಕುಮಾರ್ ಮಂಗಲಂ ಬಿರ್ಲಾ ಮತ್ತು ಕುಟುಂಬ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಇರುವುದು ವೇದಾಂತ ಅಧ್ಯಕ್ಷ ಅನಿಲ್ ಅಗರ್ ವಾಲ್ ಮತ್ತು ಕುಟುಂಬ. 215 ಕೋಟಿ ರುಪಾಯಿ ದಾನ ನೀಡಿದೆ. 2014ರ ಸೆಪ್ಟೆಂಬರ್ ನಲ್ಲಿ 75% ಆಸ್ತಿಯನ್ನು ದಾನ ಮಾಡುವುದಾಗಿ ಅನಿಲ್ ಅಗರ್ ವಾಲ್ ಹೇಳಿದ್ದರು ಎಂದು ವರದಿಯಾಗಿದೆ.

ನಲವತ್ತು ವರ್ಷದೊಳಗಿನವರಲ್ಲಿ ಬಿನ್ನಿ ಬನ್ಸಾಲ್

ನಲವತ್ತು ವರ್ಷದೊಳಗಿನವರಲ್ಲಿ ಬಿನ್ನಿ ಬನ್ಸಾಲ್

ಹ್ಯುರನ್ ಇಂಡಿಯಾ ಮತ್ತು ಎಡೆಲ್ ಗೀವ್ ನಿಂದ ಮಂಗಳವಾರ "EdelGive Hurun India Philanthropy List 2020" ಬಿಡುಗಡೆ ಮಾಡಿದೆ. 1 ಏಪ್ರಿಲ್ 2019 ರಿಂದ 31 ಮಾರ್ಚ್ 2020 ತನಕ ನಗದು ಹಾಗೂ ನಗದು ಸಮಾನವಾಗಿ ನೀಡಿದ ದಾನವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ನಲವತ್ತು ವರ್ಷದೊಳಗಿನವರಲ್ಲಿ ಈ ಪಟ್ಟಿಯಲ್ಲಿ ಇರುವ ವ್ಯಕ್ತಿ ಬಿನ್ನಿ ಬನ್ಸಾಲ್. ಕನಿಷ್ಠ 21 ಮಂದಿ EdelGive Hurun India Philanthropy List 2020ರಲ್ಲಿ ಇರುವವರು ವೈಯಕ್ತಿಕವಾಗಿ 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ದಾನ ಮಾಡಿದ್ದಾರೆ. ದಾನದ ಉದ್ದೇಶಗಳನ್ನು ಗಮನಿಸಿದರೆ ಭಾರತದ ಬಹುತೇಕ ದಾನಿಗಳು ಶಿಕ್ಷಣಕ್ಕೆ ಹೆಚ್ಚು ನೀಡಿದ್ದಾರೆ. ಆ ನಂತರ ಬಡತನದಿಂದ ಮೇಲೆತ್ತಲು ನೀಡಿರುವ ದಾನ ಎರಡನೇ ಪ್ರಮುಖ ಉದ್ದೇಶವಾಗಿದೆ ಎಂದು ಮ್ಯಾನೇಜಿಂಗ್ ಡೈರೆಕ್ಟರ್ ತಿಳಿಸಿದ್ದಾರೆ.

English summary

Azim Prem Ji Top Philanthropist Of India With 22 Crore Rupees Donation Per Day

Azim Prem Ji become top philanthropist of India, according to EdelGive Hurun India Philanthropy List 2020. Here is the others list.
Story first published: Tuesday, November 10, 2020, 17:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X