For Quick Alerts
ALLOW NOTIFICATIONS  
For Daily Alerts

ಗೂಗಲ್ ಉದ್ಯೋಗಿಗಳಿಗೇ ನೋ ನೋ; ಬೆಂಗಳೂರಿನ ಮನೆಮಾಲೀಕರದ್ದು ದೊಡ್ಡ ಡಿಮ್ಯಾಂಡಾ?

|

ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗೆ ಈಗ ಮನೆ ಬಾಡಿಗೆ ಸಿಗುವುದು ಬಹಳ ಸುಲಭ. ಹಲವು ಕಡೆ ಮನೆಗಳು ಬಾಡಿಗೆದಾರರು ಸಿಗದೇ ಖಾಲಿ ಬಿದ್ದಿವೆ. ಇದೇ ಹೊತ್ತಿನಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಬಾಡಿಗೆಗೆ ಪಡೆಯುವ ಟೆಕ್ಕಿಗಳಿಗೆ ಮನೆಗಳು ಸಿಗದಿರುವ ಪರಿಸ್ಥಿತಿಯೂ ಇದೆ ಎನ್ನುವ ಸುದ್ದಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಗೂಗಲ್, ಮಾರ್ಗನ್ ಸ್ಟಾನ್ಲೀ ಇತ್ಯಾದಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಜನರಿಗೂ ಬಾಡಿಗೆ ನಿರಾಕರಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಪ್ರಿಯಾಂಶ್ ಜೈನ್ ಎಂಬ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ತಮ್ಮ ಮನೆಬೇಟೆ ಪ್ರಯತ್ನದ ಅನುಭವವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಅದೀಗ ವೈರಲ್ ಆಗಿದೆ. ಬೆಂಗಳೂರಿನ ಮನೆ ಮಾಲೀಕರು ಅಳೆದು ತೂಗಿ ಬಾಡಿಗೆ ನೀಡುವ ಪ್ರವೃತ್ತಿ ಹೆಚ್ಚುತ್ತಿರುವುದು ಈ ಟ್ವೀಟ್‌ನಿಂದ ಗೊತ್ತಾಗುತ್ತದೆ. ಪ್ರಿಯಾಂಶ್ ಜೈನ್ ಮನೆ ಬಾಡಿಗೆ ಪಡೆಯಲು ಬ್ರೋಕರ್ ಜೊತೆ ತಾವು ನಡೆಸಿದ ಸಂಭಾಷಣೆಯನ್ನು ಟ್ವೀಟ್ ಮಾಡಿದ್ದರು.

ಕ್ರೋಸಿನ್, ಫ್ರೆಂಚ್ ಅಳಿಯ; ಆನಂದ್ ಮಹೀಂದ್ರ ಟ್ವೀಟ್ ವೈರಲ್ಕ್ರೋಸಿನ್, ಫ್ರೆಂಚ್ ಅಳಿಯ; ಆನಂದ್ ಮಹೀಂದ್ರ ಟ್ವೀಟ್ ವೈರಲ್

ಪ್ರಿಯಾಂಶ್ ಜೈನ್ ತಾನು ಆಸ್ಟ್ರೇಲಿಯಾ ಮೂಲದ ಸಾಫ್ಟ್‌ವೇರ್ ಕಂಪನಿ ಅಟ್ಸಾಸಿಯನ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾನು ಸಸ್ಯಾಹಾರಿ ಎಂದು ಹೇಳಿಕೊಂಡರೂ ಬಾಡಿಗೆ ನಿರಾಕರಿಸಲಾದ ಕುತೂಹಲಕಾರಿ ಘಟನೆ ಅದು. ದೊಡ್ಡ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಪ್ರಿಯಾಂಶ್ ಜೈನ್ ಓದಿದ್ದು ತಮಿಳುನಾಡಿನ ವೇಲೂರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ. ಈ ವಿಚಾರ ತಿಳಿಯುತ್ತಿದ್ದಂತೆಯೇ ಬ್ರೋಕರ್, 'ಕ್ಷಮಿಸಿ ನಿಮ್ಮ ಪ್ರೊಫೈಲ್ ನಮ್ಮ ಮನೆಮಾಲೀಕರಿಗೆ ಸೂಕ್ತವಾಗಿಲ್ಲ' ಎಂದು ಹೇಳಿದರಂತೆ.

ಗೂಗಲ್ ಉದ್ಯೋಗಿ ಬೇಡ; ಬೆಂಗಳೂರಿನ ಮನೆಮಾಲೀಕರದ್ದು ದೊಡ್ಡ ಡಿಮ್ಯಾಂಡಾ?

ಆಗ ಜೈನ್, ಯಾವ ರೀತಿಯ ವ್ಯಕ್ತಿಗಳನ್ನು ಮನೆಮಾಲೀಕರು ಹುಡುಕುತ್ತಿದ್ದಾರೆ ಎಂದು ಕೇಳಿದರಂತೆ. ಅದಕ್ಕೆ ಬ್ರೋಕರ್, "ಕೇವಲ ಐಐಟಿ, ಐಐಎಂ. ಸಿಎ ಮತ್ತು ಐಎಸ್‌ಬಿಗಳಲ್ಲಿ ಓದಿದವರಿಗೆ ಮಾತ್ರ" ಎಂದು ಉತ್ತರಿಸಿದರಂತೆ.

ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವಾಗ ಕೆಲ ಹುದ್ದೆಗಳಿಗೆ ಕಂಪನಿಗಳು ಈ ರೀತಿ ಐಐಟಿ, ಐಐಎಂ ಶಿಕ್ಷಿತರನ್ನು ಶಾರ್ಟ್‌ಲಿಸ್ಟ್ ಮಾಡುವುದನ್ನು ಕೇಳಿದ್ದೇವೆ. ಆದರೆ, ಬಾಡಿಗೆ ಕೊಡಲು ಮನೆಮಾಲೀಕರು ಇಂಥ ಡಿಮ್ಯಾಂಡ್ ಇಟ್ಟುಕೊಂಡಿರುತ್ತಾರೆ ಎಂಬುದು ಸಾಮಾನ್ಯ ಬೆಂಗಳೂರಿಗರಿಗೆ ಹೊಸ ಅನುಭವ.

ಆರ್ನವ್ ಗುಪ್ತಾ ಎಂಬ ಮತ್ತೊಬ್ಬ ಎಂಜಿನಿಯರ್ ಕೂಡ ಇದೇ ರೀತಿಯ ಅನುಭವವೊಂದನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.

"ಬೆಂಗಳೂರಿಗೆ ಬಂದು ಬಾಡಿಗೆ ಹುಡುಕುವಾಗ ಮನೆ ಮಾಲೀಕರು ನಮ್ಮ ಲಿಂಕ್ಡ್ ಇನ್ ಪ್ರೊಫೈಲ್‌ಗಳನ್ನು ಕೇಳುತ್ತಾರೆ. ಇದೆಂಥ ವರ್ತನೆ?" ಎಂದು ಆಶ್ಚರ್ಯಚಕಿತರಾಗಿ ಕೇಳುತ್ತಾರೆ.

ಇನ್ನು ಕೆಲವರು ಸ್ಯಾಲರಿ ಸ್ಲಿಪ್‌ಗಳನ್ನು ಕೇಳಿದ್ದಾರೆ. ವಯಸ್ಸು, ಗರ್ಲ್‌ಫ್ರೆಂಡ್ಸ್ ಎಲ್ಲಾ ವಿಚಾರಿಸಿ ಕೊನೆಗೆ ಬಾಡಿಗೆ ಕೊಡಲು ಒಪ್ಪದವರು ಇದ್ದಾರೆ. ಮೋಹಿತ್ ಠಾಕೂರ್ ಎಂಬುವರು ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಹೇಳಿದ್ದಾರೆ. ಗೂಗಲ್, ಜೆಪಿ ಮಾರ್ಗನ್‌ನಲ್ಲಿ ಕೆಲಸ ಮಾಡಿದ್ದರೂ ಮನೆ ಮಾಲೀಕರಿಗೆ ಸಮಾಧಾನ ತರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

English summary

Bengaluru House Owners Wants Tenants To Have IIT, IIM, CA Degrees

Landlords of Bengaluru seem to be adding tough conditions of their own to screen potential tenants. Social media posts say house owners are not willing to give rent to engineers studied in institutions other than IIT, IIMs.
Story first published: Sunday, November 27, 2022, 13:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X