For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ 4,181 ರು. ಬಿಲ್ ಪಾವತಿಗೆ ಕಾರ್ಡ್ ಸ್ವೈಪ್‌ ಮಾಡಿದ್ರೆ, 4.1 ಲಕ್ಷ ರುಪಾಯಿ ವಂಚನೆ

|

ಪ್ರತಿ ವರ್ಷ ಸಾವಿರಾರು ಭಾರತೀಯರು ಮೋಸದ ಜಾಲಕ್ಕೆ ಸಿಲುಕಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಹಿವಾಟುಗಳಲ್ಲಿ, ನಕಲಿ ನೋಂದಣಿ ಶುಲ್ಕಗಳನ್ನು ಪಾವತಿಸಿ ಕೋಟಿ ರುಪಾಯಿಗಳನ್ನು ಕಳೆದುಕೊಳ್ಳುತ್ತಾರೆ. ಇದೇ ರೀತಿಯಲ್ಲಿ ಬೆಂಗಳೂರಿನಲ್ಲಿ 34 ವರ್ಷದ ವ್ಯಕ್ತಿಯೊಬ್ಬ ಪಬ್‌ನಲ್ಲಿ ಬಿಲ್ ಪಾವತಿಸಲು ಪ್ರಯತ್ನಿಸಿದಾಗ ಮೋಸದ ಜಾಲಕ್ಕೆ ಬಿದ್ದಿರುವುದು ಬಹಿರಂಗವಾಗಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ವರುಣ್ ಗುಪ್ತಾ ಎಂಬುವರು, ಬೆಂಗಳೂರು ರೆಸ್ಟೋರೆಂಟ್‌ನಲ್ಲಿ 4,181 ರುಪಾಯಿಗಳ ಬಿಲ್ ಪಾವತಿಸಿದ್ದಾರೆ. ಆದರೆ ಇವರು ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದ ನಂತರ ಹತ್ತು ವಹಿವಾಟುಗಳಲ್ಲಿ ಇವರ ಖಾತೆಯಿಂದ 4.1 ಲಕ್ಷ ರುಪಾಯಿ ಕಡಿತಗೊಂಡಿದೆ.

ಹತ್ತು ನಿಮಿಷಗಳ ಅವಧಿಯಲ್ಲಿ 4.1 ಲಕ್ಷ ರುಪಾಯಿ ವಂಚನೆ

ಹತ್ತು ನಿಮಿಷಗಳ ಅವಧಿಯಲ್ಲಿ 4.1 ಲಕ್ಷ ರುಪಾಯಿ ವಂಚನೆ

34 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಿಂಗಸಂದ್ರ ನಿವಾಸಿ ವರುಣ್ ಗುಪ್ತಾ, ಕೋರಮಂಗಲ 6ನೇ ಬ್ಲಾಕ್‌ನ ಪಬ್‌ವೊಂದರಲ್ಲಿ 4,181 ರೂ.ಗಳ ಬಿಲ್ ಪಾವತಿಸಲು ತನ್ನ ಆಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದ್ದಾರೆ. ಆದರೆ ಹತ್ತು ನಿಮಿಷಗಳ ಅವಧಿಯಲ್ಲಿ ಹತ್ತು ಕಂತುಗಳಲ್ಲಿ ದುಷ್ಕರ್ಮಿಗಳು ಇವರ 4,10,036 ರುಪಾಯಿಗಳನ್ನು ಎಗರಿಸಿದ್ದಾರೆ.

ಬೆಂಗಳೂರಿನಲ್ಲಿ ಸ್ವೈಪ್ ಮಾಡಿದ್ರೆ ವ್ಯವಹಾರ ನಡೆದಿದ್ದು ನ್ಯೂಯಾರ್ಕ್‌ನಲ್ಲಿ!

ಬೆಂಗಳೂರಿನಲ್ಲಿ ಸ್ವೈಪ್ ಮಾಡಿದ್ರೆ ವ್ಯವಹಾರ ನಡೆದಿದ್ದು ನ್ಯೂಯಾರ್ಕ್‌ನಲ್ಲಿ!

"ನಾನು ಬೆಂಗಳೂರಿನಲ್ಲಿದ್ದಾಗ ನ್ಯೂಯಾರ್ಕ್‌ನಲ್ಲಿ ನನ್ನ ಆಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ವ್ಯವಹಾರಗಳು ನಡೆದಿವೆ" ಎಂದು ಗುಪ್ತಾ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ವರದಿ ಪ್ರಕಾರ ಈ ಮೋಸದ ವಹಿವಾಟನ್ನು ಕಂಡುಹಿಡಿಯಲು ಬ್ಯಾಂಕ್‌ಗೆ ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು TOIಗೆ ತಿಳಿಸಿದ್ದಾರೆ. "ಇದು ಸ್ಕಿಮ್ಮಿಂಗ್‌ನ ಸ್ಪಷ್ಟ ಪ್ರಕರಣವಾಗಿದೆ. ಗುಪ್ತಾ ಕಾರ್ಡ್ ಬಳಸಿದ ಇತರ ಸ್ಥಳಗಳೊಂದಿಗೆ ನಾವು ಪರಿಶೀಲಿಸುತ್ತಿದ್ದೇವೆ. " ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನೆ ನಡೆದ ಪಬ್‌ನ ನಿರ್ವಹಣೆಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ, ಕಾರ್ಡ್ ಸ್ವೈಪ್ ಮಾಡಲು ಬಳಸಿದ ಸಾಧನ ಮತ್ತು ಯಂತ್ರವನ್ನು ನಿರ್ವಹಿಸಿದ ಸಿಬ್ಬಂದಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 

ಎಟಿಎಂ ಸ್ಕಿಮ್ಮಿಂಗ್ ನಿಂದಲೂ ನಡೆಯುತ್ತೆ ವಂಚನೆ!

ಎಟಿಎಂ ಸ್ಕಿಮ್ಮಿಂಗ್ ನಿಂದಲೂ ನಡೆಯುತ್ತೆ ವಂಚನೆ!

ಎಟಿಎಂಗಳಲ್ಲಿ ಹಣ ವಿತ್‌ಡ್ರಾ ಮಾಡಲು ಹೋದಾಗಲು ಅನೇಕರು ಹಣ ಕಳೆದುಕೊಂಡ ಘಟನೆಗಳು ಕೂಡ ಹೆಚ್ಚಾಗಿವೆ. ದುಷ್ಕರ್ಮಿಗಳು ಎಟಿಎಂ ಕಾರ್ಡ್ ಸ್ಕಿಮ್ಮಿಂಗ್ ಡಿವೈಸ್‌ಗಳನ್ನು ಬಳಸಿ ಜನರ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಪ್ರಕರಣದಲ್ಲೂ ಹ್ಯಾಕರ್‌ಗಳು ಕೆಲಸ ಮಾಡಿರುವ ಶಂಕೆಯು ವ್ಯಕ್ತವಾಗಿದೆ.

ಎಟಿಎಂ ಸ್ಕಿಮ್ಮಿಂಗ್ ಎಂದರೇನು?

ಎಟಿಎಂ ಸ್ಕಿಮ್ಮಿಂಗ್ ಎಂದರೇನು?

ಎಟಿಎಂ ಸ್ಕಿಮ್ಮಿಂಗ್ ಅನ್ನುವುದು ಇತ್ತೀಚೆಗೆ ನಡೆಯುತ್ತಿರುವ ಸಾಮಾನ್ಯ ಎಟಿಎಂ ಮೋಸಗಾರಿಕೆಯಾಗಿದೆ. ಎಟಿಎಂ ಮತ್ತು ಪಿಓಎಸ್ ಯಂತ್ರಗಳನ್ನು ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಸಲುವಾಗಿ ಬಳಕೆ ಮಾಡಲಾಗುತ್ತದೆ.

 

 

ಸ್ಕಿಮ್ಮಿಂಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಸ್ಕಿಮ್ಮಿಂಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಎಟಿಎಂ ಕೀಪ್ಯಾಡ್ ಗೆ ಕ್ರಿಮಿನಲ್ ಗಳು ಸ್ಕಿಮ್ಮರ್ ಎಂದು ಕರೆಯಲಾಗುವ ಡಿವೈಸ್ ನ್ನು ಅಟ್ಯಾಚ್ ಮಾಡುತ್ತಾರೆ. ಈ ತೆಳುವಾದ ಕ್ಲಾನಿಂಗ್ ಡಿವೈಸ್ ನ್ನು ನಂತರ ಕಾರ್ಡಿನ ಮಾಹಿತಿಗಳನ್ನು ಕದಿಯುವುದಕ್ಕಾಗಿ ಬಳಸಲಾಗುತ್ತದೆ.ಎಟಿಎಂನಲ್ಲಿ ಕಾರ್ಡ್ ನ್ನು ಹಾಕಿದಾಗ ಕಾರ್ಡಿನ ಮಾಹಿತಿಯು ಈ ತೆಳುವಾದ ಡಿವೈಸ್ ಗೆ ಸೇರಿಕೊಂಡಿರುತ್ತದೆ.

ಸಿಸಿ ಕ್ಯಾಮೆರಾ ಇದ್ದರೂ ಕದಿಯುವ ಕಳ್ಳರು

ಸಿಸಿ ಕ್ಯಾಮೆರಾ ಇದ್ದರೂ ಕದಿಯುವ ಕಳ್ಳರು

ಎಟಿಎಂ ಕಾರ್ಡ್ ಗಳನ್ನು ಪಂಚ್ ಮಾಡಿದಾಗ ಅದು ಕ್ಲೋನ್ ಆಗುತ್ತದೆ ಮತ್ತು ಕೀಪ್ಯಾಡ್ ಗೆ ಲಗತ್ತಿಸಲಾಗಿರುವ ಡಿವೈಸ್ ಮೂಲಕ ಗ್ರಾಹಕರ ಪಿನ್ ನಂಬರ್ ಹ್ಯಾಕರ್ ಗಳಿಗೆ ರವಾನಿಸಲ್ಪಡುತ್ತದೆ. ನೀವು ಕ್ಯಾಮರಾವನ್ನು ಎಟಿಎಂ ಸೆಂಟರ್ ನಲ್ಲಿ ಅಳವಡಿಸಿರಲಾಗುತ್ತದೆಯಲ್ಲ ಎಂದು ಅಂದುಕೊಳ್ಳುತ್ತಿರಬಹುದು. ಆದರೆ ಕ್ಯಾಮರಾ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಯಾಕೆಂದರೆ ಪಿನ್ ನಂಬರ್ ಗ್ರಾಹಕರು ಎಂಟರ್ ಮಾಡಿದಾಗಲೇ ಕಳ್ಳರಿಗೆ ರವಾನೆಯಾಗಿರುತ್ತದೆ.

ಹೀಗೆ ಎಟಿಎಂನಿಂದ ಕದಿಯಲಾಗುವ ಮಾಹಿತಿಗಳನ್ನು ಬಳಸಿ ಹಣವನ್ನು ಇತರೆ ಎಟಿಎಂಗಳಲ್ಲಿ ವಿತ್ ಡ್ರಾ ಮಾಡಲಾಗುತ್ತದೆ. ಇದೇ ರೀತಿ ಘಟನೆಗಳು ಈ ಮೇಲಿನ ಕೇಸ್ ಗಳಲ್ಲೂ ಆಗಿರಬಹುದು.

 

English summary

Bengaluru Man Swipes Card For Rs 4,181 Loses 4.1 Lakh Rupees

Varun Gupta lost Rs 4.1 lakh from his account in ten transactions after swiping his debit card at a Bengaluru restaurant.
Story first published: Wednesday, January 22, 2020, 16:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X