For Quick Alerts
ALLOW NOTIFICATIONS  
For Daily Alerts

ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ ತಡೆರಹಿತ ವಿಮಾನ ಮುಂದಿನ ವರ್ಷದಿಂದ

By ಅನಿಲ್ ಆಚಾರ್
|

ಈ ವರ್ಷದ ಡಿಸೆಂಬರ್ ನಿಂದ ದೆಹಲಿ- ಶಿಕಾಗೋ ಮಧ್ಯೆ ಪ್ರತಿ ನಿತ್ಯ ವಿಮಾನ ಹಾರಾಟ ಸೇವೆ ಆರಂಭ ಮಾಡಲಾಗುವುದು. ಇನ್ನು ಮುಂದಿನ ವರ್ಷದಿಂದ ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೋ ಮಾರ್ಗದಲ್ಲಿ ವಿಮಾನ ಹಾರಾಟ ನಡೆಯಲಿದೆ ಎಂದು ಯುನೈಟೆಡ್ ಏರ್ ಲೈನ್ಸ್ ಗುರುವಾರ ಹೇಳಿದೆ.

"ನವದೆಹಲಿ ಮತ್ತು ಮುಂಬೈನಿಂದ ನ್ಯೂಯಾರ್ಕ್ ಹಾಗೂ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ಯಾನದ ಸೇವೆ ಜತೆಗೆ ಯುನೈಟೈಡ್ ಏರ್ ಲೈನ್ಸ್ ನಿಂದ ಇನ್ನಷ್ಟು ತಡೆರಹಿತ (ನಾನ್ ಸ್ಟಾಪ್) ಸೇವೆಯನ್ನು ಭಾರತದಿಂದ ಒದಗಿಸಲಾಗುವುದು. ಯು.ಎಸ್.ನ ಬೇರೆ ಯಾವುದೇ ವಿಮಾನ ಯಾನ ಸಂಸ್ಥೆ ಇಷ್ಟು ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ" ಎಂದು ಏರ್ ಲೈನ್ಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Birth Tourism: ಆಧುನಿಕ ಜಗತ್ತಿನ ಹೊಸ ವ್ಯವಹಾರದ ಬಗ್ಗೆ ನಿಮಗೆಷ್ಟು ಗೊತ್ತು?Birth Tourism: ಆಧುನಿಕ ಜಗತ್ತಿನ ಹೊಸ ವ್ಯವಹಾರದ ಬಗ್ಗೆ ನಿಮಗೆಷ್ಟು ಗೊತ್ತು?

ಬೋಯಿಂಗ್ 787- 9 ಡ್ರೀಮ್ ಲೈನರ್ ವಿಮಾನವು ದೆಹಲಿ- ಶಿಕಾಗೋ ಹಾಗೂ ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೋ ಮಾರ್ಗದಲ್ಲಿ ಹಾರಾಟಕ್ಕೆ ಬಳಸಲಾಗುತ್ತದೆ. ಯುನೈಟೆಡ್ ನ ಅಂತರರಾಷ್ಟ್ರೀಯ ಮಾರಾಟದ ಮ್ಯಾನೇಜಿಂಗ್ ಡೈರೆಕ್ಟರ್ ಮಾರ್ಕೆಲ್ ಫ್ಯುಚ್ಸ್ ಮಾತನಾಡಿ, ಬೆಂಗಳೂರು ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ ತಡೆರಹಿತವಾದ ಮೊದಲ ವಿಮಾನ ಯಾನ ಆರಂಭಿಸುತ್ತಿರುವುದಕ್ಕೆ ಹೆಮ್ಮೆ ಆಗುತ್ತಿದೆ. ಈ ಮೂಲಕ ವ್ಯಾಪಾರೋದ್ಯಮ ಹಾಗೂ ಪ್ರವಾಸಿಗರಿಗೆ ಅನುಕೂಲ ಆಗಲಿದೆ ಎಂದಿದ್ದಾರೆ.

ಬೆಂಗಳೂರು- ಸ್ಯಾನ್ ಫ್ರಾನ್ಸಿಸ್ಕೋ ಮಧ್ಯೆ ತಡೆರಹಿತ ವಿಮಾನ 2021ಕ್ಕೆ

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಮಾರ್ಚ್ 23ನೇ ತಾರೀಕಿನಿಂದ ನಿಗದಿತ ವೇಳಾಪಟ್ಟಿಯ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಅಮಾನತು ಮಾಡಲಾಗಿದೆ. ಮೇ ತಿಂಗಳಿಂದ ಈಚೆಗೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿಶೇಷ ವಿಮಾನಗಳು ಹಾರಾಟ ನಡೆಸುತ್ತಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಏರ್ ಬಬಲ್ ವ್ಯವಸ್ಥೆ ಅಡಿಯಲ್ಲಿ ಭಾರತ ಹಾಗೂ ಕೆಲ ದೇಶಗಳ ಜತೆ ಜುಲೈನಲ್ಲಿ ದ್ವಿಪಕ್ಷೀಯ ಒಪ್ಪಂದವಾಗಿದೆ.

English summary

Bengaluru- San Francisco Non Stop Flights To Operate By United Airlines From Next Year

United airlines Thursday announced that, Bengaluru- San Francisco daily flights to operate from next year. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X