For Quick Alerts
ALLOW NOTIFICATIONS  
For Daily Alerts

ಭಾರತ್ ಬಾಂಡ್ ಇಟಿಎಫ್ ಆರಂಭದಲ್ಲೇ 12,400 ಕೋಟಿ ರುಪಾಯಿ ಸಂಗ್ರಹ

|

ದೇಶದ ಮೊದಲ ಕಾರ್ಪೋರೇಟ್ ಬಾಂಡ್ ಆಗಿರುವ ಭಾರತ್ ಬಾಂಡ್ ಇಟಿಎಫ್ ತನ್ನ ಮೊದಲ ಕೊಡುಗೆಯಲ್ಲಿ 12,400 ಕೋಟಿ ರುಪಾಯಿ ಸಂಗ್ರಹಿಸಿದೆ.

 

ಡಿಸೆಂಬರ್ 12ರಿಂದ 20ರವರೆಗೆ ಭಾರತ್ ಬಾಂಡ್ ಇಟಿಎಫ್ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಹೆಚ್ಚುವರಿ ಹಣಕಾಸು ಒದಗಿಸುವ ನಿಟ್ಟಿನಲ್ಲಿ ಅನುಕೂಲವಾಗುವ ಭಾರತ್ ಬಾಂಡ್ ಇಟಿಎಫ್ ಗೆ ಚಾಲನೆ ನೀಡಲಾಗಿತ್ತು.

ಭಾರತ್ ಬಾಂಡ್ ಇಟಿಎಫ್ ಆರಂಭದಲ್ಲೇ 12,400 ಕೋಟಿ ರುಪಾಯಿ ಸಂಗ್ರಹ

''ಭಾರತ್ ಬಾಂಡ್ ಇಟಿಎಫ್‌ಗೆ ಎಲ್ಲ ಬಗೆಯ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. 3 ಮತ್ತು 10 ವರ್ಷಗಳ ಬಾಂಡ್‌ಗಳಿಗೆ ನಿಗದಿಪಡಿಸಲಾಗಿದ್ದ ಮೊತ್ತಕ್ಕಿಂತ ಹೆಚ್ಚುವರಿ ಹಣ ಸಂಗ್ರಹವಾಗಿದೆ. 55 ಸಾವಿರ ರಿಟೇಲ್ ಹೂಡಿಕೆದಾರರು ಈ ಮಹತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದು ಮಹತ್ವದ ಸಂಗತಿಯಾಗಿದೆ'' ಎಂದು ಹೂಡಿಕೆ ಮತ್ತು ಸರ್ಕಾರಿ ಆಸ್ತಿ ನಿರ್ವಹಣೆಯ ಇಲಾಖೆಯ(ಡಿಐಪಿಎಎಂ) ಕಾರ್ಯದರ್ಶಿ ಟಿ.ಕೆ. ಪಾಂಡೆ ಟ್ವೀಟ್ ಮಾಡಿದ್ದಾರೆ.

ಭಾರತ್ ಬಾಂಡ್ ಇಟಿಎಫ್‌ನಲ್ಲಿ ಸಂಗ್ರಹವಾದ ಹಣವನ್ನು ಕೇಂದ್ರೋದ್ಯಮಗಳ 'ಎಎಎ' ಮಾನದಂಡದ ಆಧಾರದ ಮೇಲೆ ಬಾಂಡ್ಸ್‌ಗಳನ್ನು ಮಾತ್ರ ತೊಡಗಿಸಲು ನಿರ್ಧರಿಸಲಾಗಿದೆ.

ಇಟಿಎಫ್, ಮೂರು ವರ್ಷಗಳ ಮುಕ್ತಾಯದೊಂದಿಗೆ ನಿಫ್ಟಿ ಭಾರತ್ ಬಾಂಡ್ ಸೂಚ್ಯಂಕ ಏಪ್ರಿಲ್ 2023 ಅನ್ನು ಅನುಸರಿಸಿದರೆ, 10 ವರ್ಷಗಳ ಮುಕ್ತಾಯದ ಅವಧಿ ಹೊಂದಿರುವ ನಿಫ್ಟಿ ಭಾರತ್ ಬಾಂಡ್ ಸೂಚ್ಯಂಕ ಏಪ್ರಿಲ್ 2030 ಅನ್ನು ಅನುಸರಿಸುತ್ತದೆ.

English summary

Bharat Bond ETF Fetched 12,400 Crore From Maiden Offer

Bharat Bond ETF, India's First corporate bond ETF, has fetched 12,400 crore from its maiden offer
Story first published: Thursday, December 26, 2019, 10:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X