For Quick Alerts
ALLOW NOTIFICATIONS  
For Daily Alerts

ಒಂದು ವರ್ಷದಲ್ಲಿ ಶೇ. 30 ಲಾಭ ಕೊಡುತ್ತಾ ಈ ಆಲ್ಕೋಹಾಲ್ ಕಂಪನಿಯ ಷೇರು?

|

ಷೇರುಪೇಟೆಯನ್ನು ಮೇಲ್ನೋಟಕ್ಕೆ ನೋಡುವವರಿಗೆ ಅದೊಂದು ಜೂಜಾಟ ಎನಿಸಬಹುದು. ಕುದುರೆ ಬಾಲಕ್ಕೆ ದುಡ್ಡು ಕಟ್ಟಿ ಹಣ ಬಾಚಬೇಕೆಂದು ಹೊರಟು ಮನೆ ಮಠ ಕಳೆದುಕೊಂಡಿರುವಂತೆ ಷೇರುಪೇಟೆಯಲ್ಲಿ ಹಣ ಹಾಕಿಕೊಂಡು ಕೈ ಸುಟ್ಟುಕೊಂಡವರಿದ್ದಾರೆ. ಆದರೆ, ಪೇಟೆಯ ಆಳ ಅಗಲದ ಅರಿವುವವರು, ಅಥವಾ ಅಂಥ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಸೋತಿದ್ದು ಕಡಿಮೆ. ಮಾರುಕಟ್ಟೆಯ ಸ್ಥಿತಿ, ಸಂಸ್ಥೆಯ ಆದಾಯ, ಲಾಭ ನಷ್ಟ ಇತ್ಯಾದಿ ಅಂಶಗಳ ಆಧಾರದ ಮೇಲೆ ಆ ಕಂಪನಿಯ ಷೇರುಗಳಿಗೆ ಎಷ್ಟು ಬೇಡಿಕೆ ಸೃಷ್ಟಿಯಾಗಬಹುದು ಎಂದು ನಿಖರವಾಗಿ ಅಂದಾಜು ಮಾಡುವ ಪರಿಣಿತರು ಇರುತ್ತಾರೆ.

 

ಆಗಾಗ್ಗೆ ಲಾಭ ತಂದುಕೊಡಬಲ್ಲ ಅಥವಾ ನಷ್ಟ ಉಂಟುಮಾಡಬಲ್ಲ ಷೇರುಗಳ ಬಗ್ಗೆ ಬ್ರೋಕರೇಜ್ ಕಂಪನಿಗಳು ಎಚ್ಚರಿಸುತ್ತಲೇ ಇರುತ್ತಾರೆ. ಪೇಟಿಎಂ ಐಪಿಒಗೆ ತೆರೆದುಕೊಂಡಾಗ ಹಲವು ತಜ್ಞರು ಪೇಟಿಎಂ ಷೇರಿನ ಬೆಲೆ ತೀರಾ ಜಾಸ್ತಿ ಆಯಿತು ಎಂದು ಎಚ್ಚರಿಸಿದ್ದುಂಟು. ಆದರೂ ಹಲವರು ಪೇಟಿಎಂ ಷೇರುಗಳನ್ನು ಮುಗಿಬಿದ್ದು ಖರೀದಿಸಿ ಈಗ ಕೈಸುಟ್ಟುಕೊಂಡಿದ್ದಾರೆ.

ಇದೇ ವೇಳೆ, ಬ್ರೋಕರೇಜ್ ಸಂಸ್ಥೆಯಾದ ಐಸಿಐಸಿಐ ಡೈರೆಕ್ಟ್ ಮುಂದಿನ ಒಂದು ವರ್ಷದಲ್ಲಿ ಭರ್ಜರಿಯಾಗಿ ಓಡುವ ಕುದುರೆಯಂತಹ ಸ್ಟಾಕ್ ಅನ್ನು ಗುರುತಿಸಿದೆ. ಆಲ್ಕೋಹಾಲ್ ತಯಾರಕ ಸಂಸ್ಥೆ ಗ್ಲೋಬಸ್ ಸ್ಪಿರಿಟ್ಸ್‌ನ ಷೇರು ಬೆಲೆ ಮುಂದಿನ 12 ತಿಂಗಳಲ್ಲಿ ಶೇ. 30ರಷ್ಟು ಏರಿಕೆ ಆಗಬಹುದು ಎಂದು ನಿರೀಕ್ಷಿಸಿದೆ.

ಗ್ಲೋಬಸ್ ಸ್ಪಿರಿಟ್ಸ್‌ನ ಷೇರು ಹೊಯ್ದಾಟ

ಗ್ಲೋಬಸ್ ಸ್ಪಿರಿಟ್ಸ್‌ನ ಷೇರು ಹೊಯ್ದಾಟ

ಎನ್‌ಎಸ್ಇ ನಿಫ್ಟಿಯಲ್ಲಿ ಗ್ಲೋಬಸ್ ಸ್ಪಿರಿಟ್ಸ್‌ನ (ಜಿಎಸ್‌ಎಲ್) ಈಗಿನ ಷೇರು ಬೆಲೆ 771 ರೂ ಆಸುಪಾಸು ಇದೆ. ಮುಂದಿನ 12 ತಿಂಗಳಲ್ಲಿ ಇದರ ಬೆಲೆ 1,000 ರೂ ಮುಟ್ಟಬಹುದು ಎಂಬುದು ಐಸಿಐಸಿಐ ಡೈರೆಕ್ಟ್‌ನ ಹೂಡಿಕೆ ಸಲಹೆಗಾರರ ಅನಿಸಿಕೆ. ಸುಮಾರು 200-230 ರೂಪಾಯಿಗಳಷ್ಟು ಹೆಚ್ಚಳವಾಗಬಹುದು ಎನ್ನಲಾಗಿದೆ.

ಗ್ಲೋಬಸ್ ಸ್ಪಿರಿಟ್ಸ್ ಷೇರಪೇಟೆಯಲ್ಲಿ ಈ ಹಿಂದೆ ಬಹಳ ಏರಿಳಿತಗಳನ್ನು ಕಂಡಿದೆ. ಜನವರಿ 14ರಂದು ಇದರ ಬೆಲೆ ಬರೋಬ್ಬರಿ 1,759.50 ರೂಪಾಯಿಗೆ ಏರಿಬಿಟ್ಟಿತ್ತು. ವಾರದ ಹಿಂದಷ್ಟೇ ಇದರ ಬೆಲೆ 721.50 ರೂಪಾಯಿಗೆ ಕುಸಿದುಹೋಗಿತ್ತು. ಏಳು ದಿನಗಳ ಅಂತರದಲ್ಲಿ 38 ರೂಪಾಯಿ ಜಾಸ್ತಿಯಾಗಿದೆ.

 

ಯಾವುದಿದು ಈ ಕಂಪನಿ?

ಯಾವುದಿದು ಈ ಕಂಪನಿ?

ಹರ್ಯಾಣದ ಹಿಸ್ಸಾರ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಗ್ಲೋಬಸ್ ಸ್ಪಿರಿಟ್ಸ್ ಮದ್ಯ ತಯಾರಕ ಕಂಪನಿಯಾಗಿದೆ. ಕಾಳುಗಳ ಭಟ್ಟಿಯಿಂದ ತಯಾರಿಸುವ ಇಎನ್‌ಎ ಮದ್ಯದ ಉತ್ಪಾದನೆಯಲ್ಲಿ ಭಾರತದ ನಂಬರ್ ಒನ್ ಸಂಸ್ಥೆಯಾಗಿದೆ. ಇಎನ್‌ಎ ಎಂದರೆ ಎಕ್ಸ್‌ಟ್ರಾ ನ್ಯೂಟ್ರಲ್ ಆಲ್ಕೋಹಾಲ್. ಇದರ ಡಿಸ್ಟಿಲರಿ ಘಟಕಗಳಲ್ಲಿ 25 ಕೋಟಿ ಲೀಟರ್ ಇಎನ್‌ಎ ಆಲ್ಕೋಹಾಲ್ ತಯಾರಿಸುವ ಸಾಮರ್ಥ್ಯ ಇದೆ. ಭಾರತದಲ್ಲಿ ಐಎಂಐಎಲ್ ಬ್ರ್ಯಾಂಡ್‌ನ ಮದ್ಯವನ್ನು ಸರಬರಾಜು ಮಾಡುತ್ತದೆ. ರಾಜಸ್ಥಾನದಲ್ಲಿ ಇದರ ಹೆಚ್ಚಿನ ಮಾರಾಟ ನಡೆಯುವುದು.

ಹಣಕಾಸು ಪರಿಸ್ಥಿತಿ
 

ಹಣಕಾಸು ಪರಿಸ್ಥಿತಿ

ಷೇರುಪೇಟೆಯಲ್ಲಿ ಗ್ಲೋಬಸ್ ಸ್ಪಿರಿಟ್ಸ್‌ನ ಒಟ್ಟು ಬಂಡವಾಳ 2 ಸಾವಿರ ಕೋಟಿ ರೂಗಿಂತ ಹೆಚ್ಚು ಇದೆ. ಇನ್ನು, ಆದಾಯ ಮತ್ತು ಲಾಭದ ವಿಚಾರಕ್ಕೆ ಬಂದರೆ ಸ್ವಲ್ಪ ಹಿನ್ನಡೆ ಇದೆ. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಇದರ ನಿವ್ವಳ ಆದಾಯ 480 ಕೋಟಿ ರೂ ಇದೆ. ಬಡ್ಡಿ, ತೆರಿಗೆ, ಡಿಪ್ರಿಶಿಯೇಶನ್ (ಸವಕಳಿ) ಇತ್ಯಾದಿ ಕಳೆಯುವ ಮುಂಚಿನ ಗಳಿಕೆ (EBITDA) ಕೂಡ ಹಿಂದಿನ ತ್ರೈಮಾಸಿಕಕ್ಕಿಂತ ಶೇ. 35ರಷ್ಟು ಕಡಿಮೆ ಆಗಿದೆ. ತೆರಿಗೆ ಮುಂದಿನ ಲಾಭ (ಪಿಎಟಿ) 22 ಕೋಟಿ ರೂ ಇದೆ. ಇದು ಹಿಂದಿನ ಕ್ವಾರ್ಟರ್‌ಗೆ ಹೋಲಿಸಿದರೆ ಶೇ. 58ರಷ್ಟು ಕಡಿಮೆ ಇದೆ. ಈ ಹಿನ್ನಡೆಗೆ ಅಧಿಕ ಇಂಧನ ಮತ್ತು ವಿದ್ಯುತ್ ವೆಚ್ಚ ಪ್ರಮುಖ ಕಾರಣ ಎಂದು ಗಣಿಸಲಾಗಿದೆ.

ಈಗ ಖರೀದಿಸುವುದು ಯಾಕೆ ಉತ್ತಮ?

ಈಗ ಖರೀದಿಸುವುದು ಯಾಕೆ ಉತ್ತಮ?

ಅಷ್ಟೇನೂ ಲಾಭ ತೋರಿಸದ ಕಂಪನಿಯ ಷೇರುಗಳ ಮೇಲೆ ಹೂಡಿಕೆ ಮಾಡುವುದರಲ್ಲಿ ಅರ್ಥ ಏನಿದೆ ಎನಿಸಬಹುದು. ಆದರೆ, ಕಂಪನಿಯ ಈಗಿನ ಸ್ಥಿತಿ ಹೇಗಿದೆ ಎನ್ನುವುದಕ್ಕಿಂತ ಅದರ ಭವಿಷ್ಯದ ದಾರಿ ಹೇಗಿದೆ ಎಂಬುದು ಮುಖ್ಯ. ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಹೆಚ್ಚಿನ ಬೆಲೆಗೆ ಅಕ್ಕಿಯನ್ನು ಖರೀದಿಯಾಗಿರುವುದು ಮತ್ತು ವಿವಿಧ ಉತ್ಪನ್ನಗಳ ಲಭ್ಯತೆ ಇವೆಲ್ಲವೂ ಗ್ಲೋಬಸ್ ಸ್ಪಿರಿಟ್ಸ್‌ನ ಆದಾಯ ಮತ್ತು ಲಾಭ ಹೆಚ್ಚಿಸಲಿವೆ.

ಹಾಗೆಯೇ, ಭತ್ತದ ಹುಲ್ಲುಗಳನ್ನು ವಿದ್ಯುತ್ ಉತ್ಪಾದನೆಗೆ ಎಷ್ಟರಮಟ್ಟಿಗೆ ಬಳಲಾಗುತ್ತದೆ, ಕಲ್ಲಿದ್ದಲು ಎಷ್ಟು ಕಡಿಮೆ ಬೆಲೆಗೆ ಸಿಗುತ್ತದೆ ಇವು ಈ ಕಂಪನಿಯ ಆದಾಯ ಮತ್ತು ಲಾಭದ ಹಣೆಬರಹ ಬರೆಯಬಹುದು ಎಂಬುದು ಐಸಿಸಿಐ ಡೈರೆಕ್ಟ್‌ನ ಹೂಡಿಕೆ ತಜ್ಞರ ಅಭಿಪ್ರಾಯ.

ಭಾರತದಲ್ಲಿ ತಯಾರಿಸಲಾದ ಭಾರತೀಯ ಮದ್ಯ (ಐಎಂಐಎಲ್) ಕ್ಷೇತ್ರ ಉಜ್ವಲ ಭವಿಷ್ಯ ಹೊಂದಿದೆ. ಇಲ್ಲಿ ಗಟ್ಟಿ ಮಾಡಿಕೊಂಡಿರುವ ಗ್ಲೋಬಸ್ ಸ್ಪಿರಿಟ್ಸ್‌ನ ಮುಂದಿನ ಹಾದಿ ಸುಗಮದ್ದಾಗಿರುವ ನಿರೀಕ್ಷೆ ಇದೆ.

"ಈ ಕಂಪನಿಯ ಷೇರಿನ ಬಗ್ಗೆ ನಮಗೆ ಸಕಾರಾತ್ಮಕ ಅನಿಸಿಕೆ ಬಂದಿದೆ. ಅದಕ್ಕೆ 'ಬಯ್' (Buy) ಶಿಫಾರಸು ನೀಡಿದ್ದೇವೆ. ಮುಂದಿನ 12 ತಿಂಗಳಲ್ಲಿ ಇದರ ಷೇರು ಬೆಲೆ 1000 ರೂ ಆಗಬಹುದು ಎಂದುಕೊಂಡಿದ್ದೇವೆ" ಎಂದು ಬ್ರೋಕರೇಜ್ ಕಂಪನಿ ಹೇಳಿದೆ.

 

English summary

Buy Globus Spirits Alcohol Beverage Company Shares; Recommendation From Brokerage

Globus Spirits Ltd is a strong small cap alocohol beverage company that is set to grow faster in next 12 months. Brokerage company ICICI Direct has recommended 'Buy' For this stock in NSE.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X