For Quick Alerts
ALLOW NOTIFICATIONS  
For Daily Alerts

ಎಲ್ಲೆಲ್ಲ FASTag ಕಡ್ಡಾಯ ಆಗಲಿದೆ ಗೊತ್ತೆ? ಇಲ್ಲಿದೆ ಸರ್ಕಾರದ ಅಧಿಸೂಚನೆ ಮಾಹಿತಿ

By ಅನಿಲ್ ಆ‌ಚಾರ್
|

ಡಿಸೆಂಬರ್ 1, 2017ಕ್ಕೂ ಮುನ್ನ ಮಾರಾಟ ಮಾಡಿದ ವಾಹನಗಳಿಗೆ ಫಾಸ್ ಟ್ಯಾಗ್ (FASTag) ಅನ್ನು ಕಡ್ಡಾಯಗೊಳಿಸಿ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕರಡು ಅಧಿಸೂಚನೆ ಹೊರಡಿಸಿದೆ. ಇನ್ನು ಹೊಸ ಮೋಟಾರ್ ವಾಹನ ಇನ್ಷೂರೆನ್ಸ್ ಖರೀದಿ ಮಾಡಬೇಕು ಎಂದಿದ್ದಲ್ಲಿ FASTag ಕಡ್ಡಾಯಗೊಳಿಸಲು ಪ್ರಸ್ತಾವ ಇಟ್ಟಿದೆ. ಒಂದು ವೇಳೆ ಈ ಹೊಸ ನಿಯಮ ಬಂದಲ್ಲಿ 2021ರಿಂದ ಜಾರಿಗೆ ಬರಲಿದೆ.

ಈ ಬಗ್ಗೆ ಗುರುವಾರ ಹೇಳಿಕೆ ನೀಡಲಾಗಿದೆ. ಡಿಸೆಂಬರ್ 1, 2017ಕ್ಕೂ ಮುನ್ನ ಮಾರಾಟ ಮಾಡಿದ ವಾಹನಗಳಿಗೆ FASTag ಕಡ್ಡಾಯ ಮಾಡುವ ಸಂಬಂಧ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಆ ತಿದ್ದುಪಡಿಯ ಅನ್ವಯ ನಿಯಮವು 2021ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಇದರ ಜತೆಗೆ ಹೊಸದಾಗಿ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಖರೀದಿಸಲು FASTag ಕಡ್ಡಾಯ ಮಾಡಲು ತೀರ್ಮಾನಿಸಲಾಗಿದೆ. ಇದನ್ನು ಏಪ್ರಿಲ್ 1, 2021ರಿಂದ ಜಾರಿಗೆ ತರುವುದಕ್ಕೆ ಪ್ರಸ್ತಾವ ಮಾಡಲಾಗಿದೆ. 2017ರಿಂದ ಈಚೆಗೆ ಹೊಸದಾಗಿ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ FASTag ಕಡ್ಡಾಯ ಮಾಡಿದೆ. ಇನ್ನು ಫಿಟ್ ನೆಸ್ ಸರ್ಟಿಫಿಕೇಟ್ ನವೀಕರಣಕ್ಕೆ ಕೂಡ FASTag ಬೇಕಾಗುತ್ತದೆ.

ಎಲ್ಲೆಲ್ಲ FASTag ಕಡ್ಡಾಯ ಆಗಲಿದೆ ಗೊತ್ತೆ? ಇಲ್ಲಿ ಸರ್ಕಾರದ ಅಧಿಸೂಚನೆ

ರಾಷ್ಟ್ರೀಯ ಪರವಾನಗಿಗೆ ಆಕ್ಟೋಬರ್ 1, 2019ರಿಂದ FASTag ಕಡ್ಡಾಯ ಮಾಡಲಾಗಿದೆ. ಅಂದ ಹಾಗೆ, ಟೋಲ್ ಪ್ಲಾಜಾಗಳಿಗೆ ಪ್ರೀಪೇಯ್ಡ್ ಶುಲ್ಕಕ್ಕೆ FASTag ಬಳಸಲು ಅನುಕೂಲವಾಗುತ್ತದೆ.

English summary

Central Government Proposes Making FASTag Mandatory For Old Vehicles, Availing 3rd Party Motor Insurance

Central government has issued a draft notification to make FASTag mandatory for old vehicles sold before 1 December 2017. It has also proposed making FASTag mandatory to buy a new third party motor vehicle insurance.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X