For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್: ಈತನೇ ಜಗತ್ತಿನಲ್ಲಿ ಅತಿ ಹೆಚ್ಚು ಹಣ ಕಳೆದುಕೊಂಡಿದ್ದು!

|

ಕೊರೊನಾವೈರಸ್‌ದಿಂದ ಅನೇಕ ದೇಶದ ಆರ್ಥಿಕ ವ್ಯವಸ್ಥೆಗಳು ತಲೆಕೆಳಗಾಗಿವೆ. ಎಷ್ಟೋ ಸಂಸ್ಥೆಗಳು ಮುಚ್ಚಿ ಹೋಗಿವೆ. ಅನೇಕ ಕಂಪನಿಗಳು ದಿವಾಳಿ ಘೋಷಿಸಿವೆ. ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಕೊರೊನಾ ಎಫೆಕ್ಟ್ ವಿಶ್ವದ ಯಾರನ್ನೂ ಬಿಡದೆ ಬೆಂಬಿಡದೆ ಕಾಡಿದೆ. ಹೀಗಿರುವಾಗ ಇದರಿಂದ ಯಾವೊಬ್ಬ ಉದ್ಯಮಿಯು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆಸರಾಂತ ಬಿಲಿಯನೇರ್‌ಗಳೇ ಸಾವಿರಾರು ಕೋಟಿ ರುಪಾಯಿ ಕಳೆದುಕೊಂಡಿದ್ದಾರೆ. ಹೀಗಿರುವಾಗ ವಿಶ್ವದಲ್ಲೇ ಅತಿ ಹೆಚ್ಚು ಹಣ ಕಳೆದುಕೊಂಡಿದ್ದು ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ವಿಶ್ವದಲ್ಲಿ ಅತಿ ಹೆಚ್ಚು ಹಣ ಕಳೆದುಕೊಂಡಿದ್ದು ಬರ್ನಾಲ್ಡ್ ಅರ್ನಾಲ್ಟ್

ವಿಶ್ವದಲ್ಲಿ ಅತಿ ಹೆಚ್ಚು ಹಣ ಕಳೆದುಕೊಂಡಿದ್ದು ಬರ್ನಾಲ್ಡ್ ಅರ್ನಾಲ್ಟ್

ಕೊರೊನಾ ವೈರಸ್ ಹಾವಳಿಯಿಂದಾಗಿ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಹಣ ಕಳೆದುಕೊಂಡಿರುವ ವ್ಯಕ್ತಿ ಯಾರೆಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಜಾಗತಿಕವಾಗಿ ಎಲ್ಲ ಉದ್ಯಮಿಗಳೂ ಹಣ ಕಳೆದುಕೊಂಡಿದ್ದರೂ, ಈ ಉದ್ಯಮಿ ಕಳೆದುಕೊಂಡಿರುವ ಹಣದ ಪ್ರಮಾಣ ಅಷ್ಟಿಷ್ಟಲ್ಲ.

ಇಡೀ ವಿಶ್ವದಲ್ಲೇ ಅತಿ ಹೆಚ್ಚು ಹಣ ಕಳೆದುಕೊಂಡಿರುವುದು ಫ್ರಾನ್ಸ್‌ನ LVMH ಸಂಸ್ಥೆಯ ಮುಖ್ಯಸ್ಥ ಬರ್ನಾಲ್ಡ್ ಅರ್ನಾಲ್ಟ್‌. ವಿಶ್ವದ ಅತೀ ಶ್ರೀಮಂತರುಗಳಲ್ಲಿ ಒಬ್ಬರಾಗಿರುವ ಬರ್ನಾಲ್ಡ್‌ ಕೊರೊನಾವೈರಸ್‌ನಿಂದಾಗಿ ಅತಿ ಹೆಚ್ಚು ಸಂಪತ್ತನ್ನು ಕಳೆದುಕೊಂಡ ವ್ಯಕ್ತಿ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.

 

LVMH ಸಂಸ್ಥೆಯ ಷೇರುಗಳು 19 ಪರ್ಸೆಂಟ್ ಕುಸಿತ

LVMH ಸಂಸ್ಥೆಯ ಷೇರುಗಳು 19 ಪರ್ಸೆಂಟ್ ಕುಸಿತ

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ LVMH ಸಂಸ್ಥೆಯ ಷೇರುಗಳು 19 ಪರ್ಸೆಂಟ್ ಕುಸಿತ ಕಂಡಿವೆ. ಇದರಿಂದಾಗಿ ಬರ್ನಾಲ್ಡ್ ಅರ್ನಾಲ್ಟ್‌ ಅವರ ನಿವ್ವಳ ಆದಾಯವು 30 ಬಿಲಿಯನ್ ಅಮೆರಿಕನ್ ಡಾಲರ್‌ ಕುಸಿತ ಕಂಡಿದೆ. ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 2 ಲಕ್ಷದ 26 ಸಾವಿರ ಕೋಟಿ.

ಜೆಫ್‌ ಬೇಜೋಸ್ ಗಳಿಸಿದಷ್ಟು ಹಣ ಬರ್ನಾಲ್ಡ್‌ಗೆ ನಷ್ಟ

ಜೆಫ್‌ ಬೇಜೋಸ್ ಗಳಿಸಿದಷ್ಟು ಹಣ ಬರ್ನಾಲ್ಡ್‌ಗೆ ನಷ್ಟ

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ವರದಿಯಂತೆ ಮೇ.6ರವೆರೆಗೆ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ, ಜೆಫ್ ಬೆಜೋಸ್ ಎಷ್ಟು ಹಣ ಗಳಿಸಿದ್ದಾರೋ, ಬರ್ನಾರ್ಡ್ ಅರ್ನಾಲ್ಟ್ ಅಷ್ಟೇ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದಾರೆ.

ಬರ್ನಾರ್ಡ್ ಅರ್ನಾಲ್ಟ್ ಈ ಹಿಂದೆಯೂ ತಮ್ಮ ಹಲವು ವರ್ಷಗಳ ಅನುಭವದಲ್ಲಿ ವ್ಯಾಪಾರದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಆದರೆ ಕೊರೊನಾವೈರಸ್ ಕೊಟ್ಟಿರುವ ಆಘಾತವು ಬರ್ನಾಲ್ಡ್‌ರನ್ನ ಅಕ್ಷರಶಃ ಕಂಗಾಲಾಗಿಸಿವೆ.

 

ಬರ್ನಾಲ್ಡ್‌ ಅರ್ನಾಲ್ಟ್‌ ಬಿಜಿನೆಸ್ ಏನು?

ಬರ್ನಾಲ್ಡ್‌ ಅರ್ನಾಲ್ಟ್‌ ಬಿಜಿನೆಸ್ ಏನು?

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ ನಾಲ್ಕನೇ ಸ್ಥಾನ ಪಡೆದಿದೆ. ವಿಶ್ವದಲ್ಲಿ 70 ಬ್ರ್ಯಾಂಡ್ ಗಳ ಮಾಲೀಕರಾಗಿರುವ ಇವರು ಐಷಾರಾಮಿ ಸರಕುಗಳ ಕಂಪನಿ LVMH ಮಾಲೀಕರು ಹೌದು. ಕೊರೊನಾ ಹಾವಳಿಗೂ ಮೊದಲು ಇವರ ಒಟ್ಟು ಸಂಪತ್ತು 76 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 5 ಲಕ್ಷದ 44,749 ಕೋಟಿ)ನಷ್ಟಿತ್ತು.

ಆದರೆ ಕೊರೊನಾದಿಂದ LVMHನ ಫ್ಯಾಶನ್ ಮಳಿಗೆಗಳು ಹಲವು ವಾರಗಳಿಂದ ಮುಚ್ಚಲ್ಪಟ್ಟಿದ್ದು, ಇದೇ ಕಾರಣಕ್ಕೆ ಬರ್ನಾರ್ಡ್ ಅರ್ನಾಲ್ಟ್ ಆದಾಯವು ಕುಗ್ಗಿ ಹೋಗಿದ್ದು, ಸಾಕಷ್ಟು ಸಂಪತ್ತು ಕರಗಿ ಹೋಗಿದೆ.

 

English summary

Corona Impact This Man Who Lost More Money Than Anyone In The World

The Man Who Lost more money than anyone in the world in coronavirus crisis
Story first published: Friday, May 8, 2020, 17:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X