For Quick Alerts
ALLOW NOTIFICATIONS  
For Daily Alerts

ಈ ಜೈಲಲ್ಲಿ ಇರುವ ನಲವತ್ತು ಕೈದಿಗಳಿಗೆ ವರ್ಷಕ್ಕೆ 3,900 ಕೋಟಿ ಖರ್ಚು

|

ಜೈಲಲ್ಲಿ ಕೈದಿಗಳಿಗೆ ಶಿಕ್ಷೆ ನೀಡುವುದು ಇಷ್ಟೊಂದು ದುಬಾರಿ ಬಾಬತ್ತಾ? ಕೈದಿಗಳಿಗೆ ಭದ್ರತೆ, ಅಲ್ಲಿನ ವ್ಯವಸ್ಥೆ, ಊಟ ಮತ್ತು ಜೈಲೊಳಗೆ ಆ ಕೈದಿಗಳ ಜೀವನಶೈಲಿ ಇವೆಲ್ಲದರ ಒಂದು ವರದಿ ಇದೆ. ಈ ಜೈಲು ಇರುವುದು ಕ್ಯೂಬಾ ದೇಶದಲ್ಲಿ. ಈ ಜೈಲಿನಲ್ಲಿ ಪ್ರತಿ ಕೈದಿಗೆ ಆಗುತ್ತಿರುವ ವಾರ್ಷಿಕ ವೆಚ್ಚ ನೂರು ಕೋಟಿ ರುಪಾಯಿಗೆ ಏಳು ಕೋಟಿ ಕಡಿಮೆ ಅಷ್ಟೇ. ಅಯ್ಯೋ, ನೀವು ಸರಿಯಾಗಿಯೇ ಓದುತ್ತಾ ಇದ್ದೀರಿ.

ಪ್ರತಿ ಕೈದಿಗೆ ತೊಂಬತ್ಮೂರು ಕೋಟಿ ಖರ್ಚಾಗುತ್ತಿದೆ. ಆ ಕಾರಣಕ್ಕೆ ಈ ಜೈಲು ಜಗತ್ತಿನಲ್ಲೇ ಅತ್ಯಂತ ದುಬಾರಿ ಎಂಬ ಹಣೆಪಟ್ಟಿ ಹಚ್ಚಿಕೊಂಡಿದೆ. ಈ ಕ್ಯಾಂಪ್ ಆರಂಭಿಸಿದ್ದು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಕಾಲದಲ್ಲಿ. 2002ರಲ್ಲಿ ಅಮೆರಿಕವು ಭಯೋತ್ಪಾದಕರ ವಿರುದ್ಧ ಯುದ್ಧ ಸಾರಿತಲ್ಲ, ಆ ವೇಳೆಯಲ್ಲಿ ಶುರು ಮಾಡಲಾಯಿತು.

ಇದರ ಹೆಸರು ಗ್ವಾಂಟನಮೋ ಬೇ ಜೈಲು. ಇದಕ್ಕೆ ಏಕೆ ಈ ಹೆಸರು ಅಂದರೆ, ಗ್ವಾಂಟನಮೋ ಬೇ ಕಡಲ ತೀರದಲ್ಲಿ ಈ ಜೈಲು ಇರುವುದರಿಂದ ಇದಕ್ಕೆ ಈ ಹೆಸರು. ವರದಿಗಳ ಪ್ರಕಾರ, ಇಲ್ಲಿರುವ ಕೈದಿಗಳ ಸಂಖ್ಯೆ ಬಹಳ ಕಡಿಮೆಯೇ. ಆದರೆ ಪ್ರತಿ ಕೈದಿಗೆ ವರ್ಷಕ್ಕೆ 93 ಕೋಟಿ ರುಪಾಯಿ ಖರ್ಚು ಬರುತ್ತದೆ.

ಈ ಜೈಲಲ್ಲಿ ಇರುವ ನಲವತ್ತು ಕೈದಿಗಳಿಗೆ ವರ್ಷಕ್ಕೆ 3,900 ಕೋಟಿ ಖರ್ಚು

ನಿಮಗೆ ಆಶ್ಚರ್ಯ ಅನಿಸಬಹುದು. ಈ ಜೈಲಲ್ಲಿ 1800 ಸೈನಿಕರನ್ನು ನಿಯೋಜಿಸಲಾಗಿದೆ. ಅಂದರೆ, ಒಬ್ಬ ಕೈದಿಗೆ 45 ಸೈನಿಕರ ಕಾವಲು. ಜೈಲಿನ ಭದ್ರತೆಗಾಗಿ ಒಟ್ಟಾರೆಯಾಗಿ ಇಲ್ಲಿರುವ ಸೈನಿಕರಿಗಾಗಿ ಪ್ರತಿ ವರ್ಷ 3,900 ಕೋಟಿ ರುಪಾಯಿ ಪ್ರತಿ ವರ್ಷ ಖರ್ಚಾಗುತ್ತದೆ. ಸರಿ, ನಲವತ್ತು ಕೈದಿಗಳಿಗೆ ಇಷ್ಟೆಲ್ಲ ಭದ್ರತೆ ಏಕೆ ಎಂಬ ಮತ್ತೊಂದು ಪ್ರಶ್ನೆ ಉದ್ಭವಿಸಬಹುದು.

ಏಕೆಂದರೆ, ಇಲ್ಲಿರುವವರೆಲ್ಲ ಅಂಥ ಭಯಂಕರ ಅಪಾಯಕಾರಿಗಳೇ. ಬಂಧಿಸುವ ವೇಳೆ ಅಲ್ ಕೈದಾ ಉಗ್ರ ಸಂಘಟನೆಯ ನಂಬರ್ 3 ಎನ್ನಲಾದ ಖಾಲೀದ್ ಷೇಕ್ ಮೊಹ್ಮದ್ ಇಲ್ಲೇ ಇದ್ದಾನೆ. ಆತನನ್ನು 2003ರಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಯಿತು. ಇನ್ನು ಸೆಪ್ಟೆಂಬರ್ 11, 2001ರ ಹೈಜಾಕರ್ ರಮ್ಜಿ ಬಿನ್ ಅಲ್- ಶಿಬಾ ಮತ್ತು ಒಸಾಮಾ ಬಿನ್ ಲಾಡೆನ್ ಜತೆ ನಂಟಿದ್ದ ಅಬು ಝುಬೇದ್ ಮತ್ತು ಇತರ ಅಲ್ ಕೈದಾ ಉಗ್ರರನ್ನು ಮಾರ್ಚ್ 2002ರಲ್ಲಿ ಪಾಕಿಸ್ತಾನದಲ್ಲಿ ಬಂಧಿಸಿ, ಈ ಜೈಲಲ್ಲಿ ಇರಿಸಲಾಗಿದೆ.

ಈ 40 ಕೈದಿಗಳಿಗೆ ಹಲಾಲ್ ಮಾಡಿದ ಆಹಾರ ನೀಡಲಾಗುತ್ತದೆ. ಸ್ಯಾಟಲೈಟ್ ಸುದ್ದಿ, ಕ್ರೀಡಾ ಚಾನೆಲ್ ನೋಡುವ ಅವಕಾಶ್ಶ್, ವರ್ಕೌಟ್ ಸಲಕರಣೆಗಳು ಮತ್ತು ಪ್ಲೇ ಸ್ಟೇಷನ್ ಗಳು ಇವೆ. ಇದ್ದದ್ದರಲ್ಲಿ ನಡತೆ ಸುಧಾರಿಸಿದೆ ಅನ್ನೋರಿಗೆ ಸಾಮೂಹಿಕ ಭೋಜನ, ಗುಂಪಿನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಇದೆ. ಮತ್ತು ಕೆಲವರು ಕಲೆ ಹಾಗೂ ತೋಟಗಾರಿಕೆ ತರಗತಿಗಳಲ್ಲಿ ಭಾಗಿಯಾಗುತ್ತಿದ್ದಾರೆ.

English summary

Costliest Jail In The World, Spend 93 Crore On Each Prisoner

Cuba's Guantanamo Bay jail is the world's costliest jail. Here 3,900 crore spend for security of prisoners annually.
Story first published: Sunday, December 8, 2019, 14:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X