For Quick Alerts
ALLOW NOTIFICATIONS  
For Daily Alerts

ದೆಹಲಿ ಸರ್ಕಾರದಿಂದ 40,000 ಕಾರ್ಮಿಕರಿಗೆ ತಲಾ 5,000 ರುಪಾಯಿ

|

ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಹಣದ ಕೊರತೆಯಿಂದ ಬಳಲುತ್ತಿರುವ ಕಾರ್ಮಿಕರಿಗೆ ಪರಿಹಾರ ನೀಡಲು ಮುಂದಾಗಿರುವ ದೆಹಲಿ ಸರ್ಕಾರ ದೆಹಲಿಯ ನಿರ್ಮಾಣ ಕಾರ್ಯಗಳಿಗೆ ಸಂಬಂಧಿಸಿದ ನೋಂದಾಯಿತ ಕಾರ್ಮಿಕರಿಗೆ ತಲಾ 5 ಸಾವಿರ ರುಪಾಯಿ ಪರಿಹಾರ ನೀಡಲು ನಿರ್ಧರಿಸಿದೆ.

ಈ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಮಾತನಾಡಿದ ದೆಹಲಿ ಕಾರ್ಮಿಕ ಸಚಿವ ಗೋಪಾಲ್ ರೈ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ನಿರ್ಮಾಣ ಕಾರ್ಮಿಕರ ಖಾತೆಗೆ ಈ ತಿಂಗಳು ಮತ್ತೆ 5 ಸಾವಿರ ರುಪಾಯಿಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ದೆಹಲಿ ಸರ್ಕಾರದಿಂದ 40,000 ಕಾರ್ಮಿಕರಿಗೆ ತಲಾ 5,000 ರುಪಾಯಿ

ದೆಹಲಿ ಸರ್ಕಾರದ ಈ ನಿರ್ಧಾರದಿಂದ ಅಲ್ಲಿರುವ ಸುಮಾರು 40 ಸಾವಿರ ನೋಂದಾಯಿತ ಕಾರ್ಮಿಕರಿಗೆ ಪರಿಹಾರ ಸಿಗುತ್ತದೆ. ಕಳೆದ ತಿಂಗಳು ಸಹ ಕಾರ್ಮಿಕರಿಗೆ ದೆಹಲಿ ಸರ್ಕಾರವು 5 ಸಾವಿರ ರುಪಾಯಿಗಳ ಸಹಾಯವನ್ನು ನೀಡಿತ್ತು.

ದೆಹಲಿಯೊಳಗೆ ಹೆಚ್ಚಿನ ಸಂಖ್ಯೆಯ ಕಟ್ಟಡ ನಿರ್ಮಾಣ ಕಾರ್ಮಿಕರು ವಾಸಿಸುತ್ತಿದ್ದಾರೆ. ಲಾಕ್‌ಡೌನ್ ಕಾರಣ ಎಲ್ಲಾ ವ್ಯವಹಾರಗಳನ್ನು ಮುಚ್ಚಲಾಗಿದೆ. ಆದ್ದರಿಂದ ಈ ಮೊತ್ತವನ್ನು ನಾಳೆಯಿಂದ ಕಾರ್ಮಿಕರ ಖಾತೆಗೆ ಕಳುಹಿಸಲಾಗುವುದು ಎನ್ನಲಾಗಿದೆ. ದೆಹಲಿಯಲ್ಲಿ ಸುಮಾರು 39600 ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ, ಅವರ ಖಾತೆಗೆ ಹಣವನ್ನು ಕಳುಹಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ಹಿಂದೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ಮಾಣ ಕಾರ್ಮಿಕರ ಖಾತೆಗೆ ಹಣವನ್ನು ಕಳುಹಿಸುವಂತೆ ಆದೇಶ ನೀಡಿತ್ತು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸುಮಾರು 52 ಸಾವಿರ ಕೋಟಿ ರುಪಾಯಿಗಳನ್ನು ಸೆಸ್ ನಿಧಿಯಲ್ಲಿ ಠೇವಣಿ ಇಡಲಾಗಿದೆ ಎಂದು ಸರ್ಕಾರ ಹೇಳಿದೆ.

English summary

Delhi Govt To Give Rs 5000 For 40000 Construction Workers

The Delhi government decided on Monday to provide another financial assistance of Rs 5,000 to the construction workers in the wake of the extended coronavirus lockdown.
Story first published: Tuesday, May 12, 2020, 14:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X