For Quick Alerts
ALLOW NOTIFICATIONS  
For Daily Alerts

ಅಮೆಜಾನ್ ನಿಂದ ಒಂದು ಲಕ್ಷ ಮಂದಿಯ ನೇಮಕ

|

ಆನ್ ಲೈನ್ ಆರ್ಡರ್ ಗಳಲ್ಲಿ ಭಾರೀ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ಲಕ್ಷ ಮಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಅಮೆಜಾನ್ ಸೋಮವಾರ ತಿಳಿಸಿದೆ. ಹೊಸದಾಗಿ ನೇಮಿಸಿಕೊಳ್ಳುವವರು ಪ್ಯಾಕಿಂಗ್, ಶಿಪ್ ಮೆಂಟ್ ಅಥವಾ ಆರ್ಡರ್ ವಿಂಗಡಣೆಯಲ್ಲಿ ಅರೆಕಾಲಿಕ ಅಥವಾ ಪೂರ್ಣಾವಧಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದು ರಜಾ ಸಮಯದಲ್ಲಿ ನೇಮಕ ಮಾಡಿಕೊಳ್ಳುವಂಥದಲ್ಲ ಎಂದು ಅಮೆಜಾನ್ ತಿಳಿಸಿದೆ.

 

ಸೀಟಲ್ ಮೂಲದ ಅಮೆಜಾನ್ ಆನ್ ಲೈನ್ ವ್ಯವಹಾರದಲ್ಲಿ ಭರ್ಜರಿ ಬೆಳವಣಿಗೆ ಆಗುತ್ತಿದೆ. ಏಪ್ರಿಲ್ ಹಾಗೂ ಜೂನ್ ಮಧ್ಯೆ ಆದಾಯ ಹಾಗೂ ಲಾಭದಲ್ಲಿ ದಾಖಲೆಯನ್ನು ಬರೆದಿದೆ. ಕೊರೊನಾ ಅವಧಿಯಲ್ಲಿ ಹೆಚ್ಚು ಮಂದಿ ದಿನಸಿ ಮತ್ತಿತರ ವಸ್ತುಗಳ ಖರೀದಿಗೆ ಆನ್ ಲೈನ್ ವ್ಯವಹಾರವನ್ನು ಅವಲಂಬಿಸಿದ್ದರಿಂದ ಇಂಥ ಫಲಿತಾಂಶ ಬಂದಿದೆ.

 

ವಿಶ್ವದ ನಂಬರ್ ಒನ್ ಶ್ರೀಮಂತನ ಮೇಲೆ ತೆರಿಗೆ ವಿಧಿಸಲು ಹೆಚ್ಚಿದ ಪ್ರತಿಭಟನೆವಿಶ್ವದ ನಂಬರ್ ಒನ್ ಶ್ರೀಮಂತನ ಮೇಲೆ ತೆರಿಗೆ ವಿಧಿಸಲು ಹೆಚ್ಚಿದ ಪ್ರತಿಭಟನೆ

ಅಮೆಜಾನ್ ನಿಂದ ಈಗಾಗಲೇ 1.75 ಲಕ್ಷ ಉದ್ಯೋಗ ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನು ಕಳೆದ ವಾರ ಹೇಳಿದ ಪ್ರಕಾರ, 33 ಸಾವಿರ ಕಾರ್ಪೊರೇಟ್ ಹಾಗೂ ಟೆಕ್ ಉದ್ಯೋಗ ಭರ್ತಿ ಮಾಡಬೇಕಿತ್ತು ಎಂದಿದೆ. ಈ ಬಾರಿ ಅಮೆಜಾನ್ ಗೆ ನೂರು ಹೊಸ ವೇರ್ ಹೌಸ್ ಗಳು, ಪ್ಯಾಕೇಜ್ ವಿಂಗಡಣೆ ಕೇಂದ್ರಗಳು ಮತ್ತು ಹೊಸದಾಗಿ ಆರಂಭ ಆಗಲಿರುವ ಇತರ ಕೇಂದ್ರಗಳಿಗೆ ಕೆಲಸಕ್ಕೆ ಜನರ ಅಗತ್ಯ ಇದೆ.

ಅಮೆಜಾನ್ ನಿಂದ ಒಂದು ಲಕ್ಷ ಮಂದಿಯ ನೇಮಕ

ಅಮೆಜಾನ್ ವೇರ್ ಹೌಸ್ ಗಳನ್ನು ನೋಡಿಕೊಳ್ಳುವ ಅಲಿಸಿಯಾ ಬೋಲರ್ ಡೇವಿಸ್ ಮಾತನಾಡಿ, ಕೆಲವು ನಗರಗಳಲ್ಲಿ ಉದ್ಯೋಗಕ್ಕೆ ಸೇರ್ಪಡೆ ಆಗುವಾಗಲೇ 1 ಸಾವಿರ ಅಮೆರಿಕನ್ ಡಾಲರ್ ಬೋನಸ್ ನೀಡಲಾಗುತ್ತದೆ. ಏಕೆಂದರೆ ಅಲ್ಲಿ ಕೆಲಸಗಾರರನ್ನು ಹುಡುಕುವುದು ಕಷ್ಟ. ಡೆಟ್ರಾಯಿಟ್, ನ್ಯೂಯಾರ್ಕ್, ಫಿಲಿಡೆಲ್ಫಿಯಾ ಮತ್ತು ಲೂಸಿವಿಲ್ಲೆ, ಕೆಂಟುಕಿಯಲ್ಲಿ ಸ್ಥಿತಿ ಹೀಗಿದೆ. ಇನ್ನು ಅಮೆಜಾನ್ ನಲ್ಲಿ ಆರಂಭಿಕವಾಗಿ ಗಂಟೆಗೆ 15 ಡಾಲರ್ ನೀಡಲಾಗುತ್ತದೆ.

ಇನ್ನು ರಜಾ ದಿನಗಳಿಗಾಗಿ ಇನ್ನೂ ಹೆಚ್ಚು ಮಂದಿಯನ್ನು ನೇಮಿಸಕೊಳ್ಳಬೇಕೆ ಎಂಬ ಬಗ್ಗೆ ಆಲೋಚನೆ ಮಾಡುತ್ತಿದೆ. ಆದರೆ ಈ ತನಕ ಯಾವುದೇ ಘೋಷಣೆ ಮಾಡಿಲ್ಲ ಎಂದು ಬೋಲರ್ ಡೇವಿಸ್ ತಿಳಿಸಿದ್ದಾರೆ. ಕಳೆದ ವರ್ಷ ರಜಾ ದಿನಗಳಿಗೆ ಮುಂಚಿತವಾಗಿ ಎರಡು ಲಕ್ಷ ಮಂದಿಯನ್ನು ಅಮೆಜಾನ್ ನೇಮಕ ಮಾಡಿಕೊಂಡಿತ್ತು.

ಒಂದು ಕಂಪೆನಿಯು ಈಗಾಗಲೇ ಆರ್ಡರ್ ನಲ್ಲಿ ಹೆಚ್ಚಳ ಆಗಬಹುದು ಎಂದು ಸಿದ್ಧತೆ ನಡೆಸುತ್ತಿದೆ. ಕಳೆದ ವಾರ ಯುಪಿಎಸ್ ಮಾತನಾಡಿ, ರಜಾ ಸಂದರ್ಭದಲ್ಲಿ ಪ್ಯಾಕೇಜ್ ಗಳ ಡೆಲಿವರಿಗಾಗಿ ಒಂದು ಲಕ್ಷ ಮಂದಿಯನ್ನು ತೆಗೆದುಕೊಳ್ಳುವ ಆಲೋಚನೆ ಇದೆ ಎಂದಿದೆ.

English summary

E Commerce Giant Amazon To Hire 1 Lakh Workforce

Due to surge in online order e commerce giant amazon to hire 1 lakh people.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X