For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ ಇವಿ ರಿಜಿಸ್ಟ್ರೇಷನ್ ಶೇ.1,500ರಷ್ಟು ಏರಿಕೆ, ಬೆಂಗಳೂರು ಟಾಪ್

|

ಕರ್ನಾಟಕ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ರಿಜಿಸ್ಟ್ರೇಷನ್‌ನಲ್ಲಿ ಕಳೆದ ಮೂರು ವರ್ಷದಲ್ಲಿ ಸುಮಾರು ಶೇಕಡ 1,500ರಷ್ಟು ಏರಿಕೆ ಕಂಡುಬಂದಿದೆ ಎಂದು ಸಾರಿಗೆ ಸಚಿವಾಲಯವು ತಿಳಿಸಿದೆ. 2019ರಲ್ಲಿ ಸುಮಾರು 6,150 ಇವಿ ರಿಜಿಸ್ಟ್ರೇಷನ್‌ ಆಗಿದ್ದರೆ, 2022ರಲ್ಲಿ 95,856 ಇವಿ ರಿಜಿಸ್ಟ್ರೇಷನ್‌ ಆಗಿದೆ.

ಕಳೆದ ವರ್ಷ ಮಾಸಿಕವಾಗಿ ಇವಿ ರಿಜಿಸ್ಟ್ರೇಷನ್ ಅಕ್ಟೋಬರ್‌ನಲ್ಲಿ 10 ಸಾವಿರವನ್ನು ದಾಟಿದೆ. ಅಂದರೆ ಅಕ್ಟೋಬರ್‌ನಲ್ಲಿ 10,787 ಮಂದಿ ಇವಿ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ. ಇನ್ನು ನವೆಂಬರ್‌ನಲ್ಲಿ 10,960 ಇವಿ ರಿಜಿಸ್ಟ್ರೇಷನ್ ಆಗಿದೆ. ರಾಜ್ಯದಲ್ಲಿ 2.9 ಕೋಟಿ ವಾಹನಗಳು ಇದ್ದು, ಈ ಪೈಕಿ 1.5 ಲಕ್ಷ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿದೆ. ಈ ಪೈಕಿ 1.3 ಲಕ್ಷ ದ್ವಿಚಕ್ರ ವಾಹನ, 9,831 ಕಾರುಗಳಾಗಿದೆ.

1.5 ಕೋಟಿ ರೂ.ಯ ಇವಿ ಖರೀದಿಸಿದ ತನ್ನ ಪುತ್ರಿಯರಿಗೆ ಎಆರ್ ರೆಹಮಾನ್ ಶಭಾಸ್!1.5 ಕೋಟಿ ರೂ.ಯ ಇವಿ ಖರೀದಿಸಿದ ತನ್ನ ಪುತ್ರಿಯರಿಗೆ ಎಆರ್ ರೆಹಮಾನ್ ಶಭಾಸ್!

ಇಂಧನ ಬೆಲೆ ಏರಿಕೆ, ಇವಿಯಲ್ಲಿನ ನಿರ್ವಹಣಾ ವೆಚ್ಚ ಕಡಿಮೆ, ಜನರಲ್ಲಿ ಪರಿಸರ ಜಾಗೃತಿ ಹೆಚ್ಚಳ ಹಾಗೂ ಉತ್ಪಾದಕರಿಂದ ಬೇರೆ ಬೇರೆ ಮಾದರಿಯ ಇವಿಗಳು ಲಭ್ಯವಿರುವುದರಿಂದ ಜನರು ಈಗ ಹೆಚ್ಚಾಗಿ ಇವಿ ಖರೀದಿ ಮಾಡುತ್ತಿದ್ದಾರೆ. ಅದರಿಂದಾಗಿ ಇವಿ ರಿಜಿಸ್ಟ್ರೇಷನ್ ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

 ಬೆಂಗಳೂರಿನಲ್ಲಿ ಹೊಸ ತಂತ್ರಜ್ಞಾನದ ಬಳಕೆ ಹೆಚ್ಚಳ

ಬೆಂಗಳೂರಿನಲ್ಲಿ ಹೊಸ ತಂತ್ರಜ್ಞಾನದ ಬಳಕೆ ಹೆಚ್ಚಳ

ಈ ಬಗ್ಗೆ ಮಾಹಿತಿ ನೀಡಿದ ಎನ್‌ಜಿಒ ಆದ ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ ಇಂಡಿಯಾದ ನಿರ್ದೇಶಕರು ಪವನ್ ಮುಲುಕುಟ್ಲ, "ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಹೊಸ ತಂತ್ರಜ್ಞಾನವನ್ನು ಜನರು ಹೆಚ್ಚಾಗಿ ಬಳಸುತ್ತಾರೆ. ಬೆಂಗಳೂರು ಸ್ಟಾರ್ಟ್‌ ಅಪ್ ಹಬ್ ಆಗಿದೆ. ಜನರು ಹೆಚ್ಚಾಗಿ ಪರಿಸರದ ಕಾಳಜಿ ಹೊಂದಿದ್ದಾರೆ. ಹಾಗೆಯೇ ಪೆಟ್ರೋಲ್‌ಗಿಂತ ಕಡಿಮೆ ವೆಚ್ಚದಲ್ಲಿ ಬ್ಯಾಟರಿ ವಾಹನ ಬಳಸಬಹುದಾದ ಕಾರಣದಿಂದಾಗಿ ಜನರು ಹೆಚ್ಚು ಇವಿಯನ್ನು ಖರೀದಿ ಮಾಡುತ್ತಿದ್ದಾರೆ," ಎಂದು ಅಭಿಪ್ರಾಯಿಸಿದ್ದಾರೆ.

ಎಲೆಕ್ಟ್ರಿಕ್ ವಾಹನ ವ್ಯಾಪಾರ: ವಿಧ, ಹೂಡಿಕೆ, ಏನೆಲ್ಲ ಅಗತ್ಯ?ಎಲೆಕ್ಟ್ರಿಕ್ ವಾಹನ ವ್ಯಾಪಾರ: ವಿಧ, ಹೂಡಿಕೆ, ಏನೆಲ್ಲ ಅಗತ್ಯ?

 ಆಟೋ ಡ್ರೈವರ್‌ಗಳೂ ಇವಿ ಬಳಸಬೇಕು

ಆಟೋ ಡ್ರೈವರ್‌ಗಳೂ ಇವಿ ಬಳಸಬೇಕು

ಸರ್ಕಾರವು ಆಟೋ ಡ್ರೈವರ್‌ಗಳಿಗೆ ಇವಿ ಖರೀದಿಸಲು ಹೆಚ್ಚು ಪ್ರೋತ್ಸಾಹವನ್ನು ನೀಡಬೇಕು ಎಂದು ಪವನ್ ಮುಲುಕುಟ್ಲ ಹೇಳಿದ್ದಾರೆ. ಆಟೋ ಚಾಲಕರು ಕೂಡಾ ಇವಿ ಬಳಸಿದರೆ ಪ್ರಕೃತಿ ಸಮತೋಲನ ಕೊಂಚ ಸರಿಹೊಂದಬಹುದು ಎಂದಿದ್ದಾರೆ. 2016ರ ಮಾರ್ಚ್‌ನಿಂದ ರಾಜ್ಯ ಸರ್ಕಾರವು ಇವಿ ವಾಹನಗಳು ರಸ್ತೆ ಸುಂಕ ವಿನಾಯಿತಿ ನೀಡಲಾಗುವುದು ಎಂದು ಹೇಳಿದೆ. ಬೇರೆ ರಾಜ್ಯಗಳಲ್ಲಿ ಸಬ್ಸಿಡಿಗಳನ್ನು ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಶೇಕಡ 100ರಷ್ಟು ರಸ್ತೆ ತೆರಿಗೆಯನ್ನು ವಿನಾಯಿತಿ ನೀಡಲು ಮುಂದಾಗುವ ಸಾಧ್ಯತೆಯಿದೆ. ಶೇಕಡ 100ರಷ್ಟು ರಸ್ತೆ ತೆರಿಗೆ ವಿನಾಯಿತಿ ಅನುಮೋದನೆಯಾದರೆ, ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ದುಬಾರಿಯಾಗುವ ಸಾಧ್ಯತೆಯಿದೆ.

 ಇವಿ ರಿಜಿಸ್ಟ್ರೇಷನ್ ಶುಲ್ಕ ಮನ್ನಾ
 

ಇವಿ ರಿಜಿಸ್ಟ್ರೇಷನ್ ಶುಲ್ಕ ಮನ್ನಾ

ಈಗಾಗಲೇ ದೇಶದಲ್ಲಿ ಇವಿ ರಿಜಿಸ್ಟ್ರೇಷನ್ ಶುಲ್ಕವನ್ನು ಮನ್ನಾ ಮಾಡಲಾಗಿದೆ. 2021ರ ಆಗಸ್ಟ್‌ನಲ್ಲಿ ಸಚಿವಾಲಯವು ಈ ಬಗ್ಗೆ ಘೋಷಣೆ ಮಾಡಿದೆ. ಎಲ್ಲ ಬ್ಯಾಟರಿ ವಾಹನಗಳು ರಿಜಿಸ್ಟ್ರೇಷನ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಿದೆ. ಎಲೆಕ್ಟ್ರಿಕಲ್ ವಾಹನ ಹಾಗೂ ಎನರ್ಜಿ ಸ್ಟೋರೇಜ್ ಪಾಲಿಸಿ 2017 ಅನ್ನು ಭಾರತದಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿದೆ. ಇವಿಗೆ ತೆರಿಗೆ ವಿಧಿಸುವುದರಿಂದ ಖರೀದಿದಾರರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

 4ನೇ ಸ್ಥಾನದಲ್ಲಿ ಕರ್ನಾಟಕ

4ನೇ ಸ್ಥಾನದಲ್ಲಿ ಕರ್ನಾಟಕ

ದೇಶದಲ್ಲಿ ಪ್ರಸ್ತುತ 19.3 ಲಕ್ಷ ಇವಿಗಳು ಇದೆ. ಉತ್ತರ ಪ್ರದೇಶದಲ್ಲಿ ಅಧಿಕ ಇವಿ ಬಳಕೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ 4.9 ಲಕ್ಷ ಎಲೆಕ್ಟ್ರಿಕ್ ವಾಹನ ಬಳಸಲಾಗುತ್ತಿದೆ. ಇನ್ನು ಮಹಾರಾಷ್ಟ್ರವು ಎರಡನೇ ಸ್ಥಾನದಲ್ಲಿದ್ದು, ಈ ರಾಜ್ಯದಲ್ಲಿ 1.94 ಲಕ್ಷ ಇವಿ ಬಳಕೆಯಲ್ಲಿದೆ. ಇನ್ನು ದೇಶದಲ್ಲೇ ಅತೀ ವಾಯು ಮಾಲಿನ್ಯ ಹೊಂದಿರುವ ದೆಹಲಿಯು ಇವಿ ಬಳಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ದೇಶದ ರಾಜಧಾನಿಯಲ್ಲಿ 1.91 ಲಕ್ಷ ಇವಿ ಬಳಸಲಾಗುತ್ತಿದೆ. ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿದ್ದು ರಾಜ್ಯದಲ್ಲಿ 1.5 ಲಕ್ಷ ಇವಿ ಬಳಸಲಾಗುತ್ತಿದೆ. ಈ ಪೈಕಿ 1.3 ಲಕ್ಷ ದ್ವಿಚಕ್ರ ವಾಹನ, 9,831 ಕಾರುಗಳಾಗಿದೆ. 2019ರಲ್ಲಿ ಎಲ್ಲ ವಾಹನಗಳ ರಿಜಿಸ್ಟ್ರೇಷನ್ ಪೈಕಿ ಇವಿ ರಿಜಿಸ್ಟ್ರೇಷನ್ ಶೇಕಡ 0.4ರಷ್ಟಿತ್ತು. ಆದರೆ ಈಗ 2022ರಲ್ಲಿ ಇವಿ ರಿಜಿಸ್ಟ್ರೇಷನ್ ಶೇಕಡ 6.3ಕ್ಕೆ ತಲುಪಿದೆ.

English summary

Electric Vehicle Registrations See a Big Jump in Karnataka, Details in Kannada

The state has seen a nearly 1,500% increase in e-vehicle registrations in three years, as per statistics from the ministry of road transport and highways (MoRTH).
Story first published: Wednesday, January 4, 2023, 11:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X