For Quick Alerts
ALLOW NOTIFICATIONS  
For Daily Alerts

ಒಂದೇ ಒಂದು ಟ್ವೀಟ್, ಕೆಲವೇ ಗಂಟೆಯಲ್ಲಿ 'ಒಂದು' ಲಕ್ಷ ಕೋಟಿ ರುಪಾಯಿಯನ್ನ ನುಂಗಿ ಹಾಕಿತು!

|

ಕಾರು ತಯಾರಿಕಾ ಕಂಪನಿ ಟೆಸ್ಲಾ ಕಂಪನಿಯ ಷೇರುಗಳು ಕೇವಲ ಒಂದೇ ಒಂದು ಟ್ವೀಟ್‌ನಿಂದಾಗಿ ರಕ್ತದೋಕುಳಿಯನ್ನೇ ಕಂಡಿವೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟೆಸ್ಲಾ ಷೇರುಗಳ ಬೆಲೆ 'ತುಂಬಾ ಹೆಚ್ಚಾಗಿದೆ' ಎಂದು ಟ್ವೀಟ್ ಮಾಡಿದ ನಂತರ ಟೆಸ್ಲಾ ಷೇರುಗಳು 10 ಪರ್ಸೆಂಟ್‌ಗಿಂತಲೂ ಹೆಚ್ಚಿನ ಕುಸಿತ ಕಂಡಿವೆ.

141 ಬಿಲಿಯನ್  ಡಾಲರ್ 127 ಬಿಲಿಯನ್‌ಗೆ ಕುಸಿತ

141 ಬಿಲಿಯನ್ ಡಾಲರ್ 127 ಬಿಲಿಯನ್‌ಗೆ ಕುಸಿತ

ಶುಕ್ರವಾರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ' ನನ್ನ ಅಭಿಪ್ರಾಯದ ಪ್ರಕಾರ ಟೆಸ್ಲಾ ಷೇರುಗಳು ತುಂಬಾ ಹೆಚ್ಚಾಗಿದೆ' ಎಂದು ಆಶ್ಚರ್ಯಕರ ರೀತಿಯಲ್ಲಿ ಟ್ವೀಟ್ ಮಾಡಿದ್ದರು. ಈ ವಿವಾದಾತ್ಮಕ ಟ್ವೀಟ್‌ ಹೊರಬಿದ್ದು ಕೆಲವೇ ಗಂಟೆಗಳಲ್ಲಿ ಟೆಸ್ಲಾ ಮಾರುಕಟ್ಟೆಯ ಮಾಲ್ಯಮಾಪನವು ಸುಮಾರು 141 ಬಿಲಿಯನ್‌ ಇದ್ದಿದ್ದು ದಿಢೀರ್ ಎಂದು ಸುಮಾರು 127 ಬಿಲಿಯನ್‌ಗೆ ತಲುಪಿತು.

ಕೆಲವೇ ಗಂಟೆಯಲ್ಲಿ ಒಂದು ಲಕ್ಷ ಕೋಟಿ ರುಪಾಯಿ ನಷ್ಟ

ಕೆಲವೇ ಗಂಟೆಯಲ್ಲಿ ಒಂದು ಲಕ್ಷ ಕೋಟಿ ರುಪಾಯಿ ನಷ್ಟ

ಮಾರುಕಟ್ಟೆಯಲ್ಲಿ ಟೆಸ್ಲಾ ಷೇರುಗಳ ಈ ದಿಢೀರ್ ಕುಸಿತದಿಂದಾಗಿ ಸುಮಾರು 14 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತದ ರುಪಾಯಿಗಳಲ್ಲಿ ಸುಮಾರು 1 ಲಕ್ಷ ಕೋಟಿ ರುಪಾಯಿ ನಷ್ಟ ಕಂಡಿತು.

ಎಲೋನ್ ಮಸ್ಕ್‌ ಟ್ವೀಟ್‌ಗೆ ಭಾರೀ ಟೀಕೆ

ಎಲೋನ್ ಮಸ್ಕ್‌ ಟ್ವೀಟ್‌ಗೆ ಭಾರೀ ಟೀಕೆ

ಎಲೋನ್ ಮಸ್ಕ್‌ ಟ್ವೀಟ್‌ಗೆ ಬಳಕೆದಾರರೊಬ್ಬರು ನಿಮಗೆ ಹಣದ ಅಗತ್ಯವಿರುವುದರಿಂದ ನೀವು ಇದನ್ನು ಮಾಡುತ್ತಿದ್ದೀರಾ ಅಥವಾ ಜಗತ್ತನ್ನು ಸುಡುವುದನ್ನು ಪ್ರತಿಭಟಿಸುವುದೇ? ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಮಸ್ಕ್ ನನಗೆ ಹಣ ಅಗತ್ಯವಿಲ್ಲ. ಮಂಗಳ ಮತ್ತು ಭೂಮಿಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ, ಸ್ವಾಧೀನವು ನಿಮ್ಮನ್ನು ತೂಗುತ್ತದೆ' ಎಂದು ಉತ್ತರಿಸಿದ್ದರು.

ಈ ಬೆಳವಣಿಗೆಯಿಂದಾಗಿ ಎಲೋನ್ ಮಸ್ಕ್‌ ಹೆಚ್ಚು ದಿನಗಳು ಟೆಸ್ಲಾ ಕಂಪನಿಯ ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂದು ಕಂಪನಿಯ ಬೋರ್ಡ್ ನಿರ್ಧರಿಸಿದೆ.

 

English summary

Elon Musk Bizarre Tweet Wipes 14 Billion Dollar Of Tesla Market Value

Elon Musk bizarre tweet that brought Tesla's market value down by $14 billion in hours.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X