For Quick Alerts
ALLOW NOTIFICATIONS  
For Daily Alerts

ಆರ್ಥಿಕ ಸಚಿವಾಲಯದಿಂದ #ArthShastri ಅಭಿಯಾನ; ಏನಿದರ ವಿಶೇಷ?

|

ಬಜೆಟ್ ಬಗ್ಗೆ ಸಾಮಾನ್ಯ ಜನರಿಗೂ ಅರಿವು ಮೂಡಿಸುವ ಉದ್ದೇಶದಿಂದ ಆರ್ಥಿಕ ಸಚಿವಾಲಯದಿಂದ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಜನವರಿ ಇಪ್ಪತ್ತೆರಡರಿಂದ ಆರಂಭಿಸಲಾಗುವುದು. '#ArthShastri' ಅಭಿಯಾನದ ಮೂಲಕ ಆರ್ಥಿಕತೆಯ ಪದಗಳನ್ನು ಆಸಕ್ತಿಕರ ಅನಿಮೇಟೆಡ್ ವಿಡಿಯೋಗಳ ಮೂಲಕ ವಿತರಿಸಲಾಗುತ್ತದೆ.

 

ಬಜೆಟ್ ಬಗ್ಗೆ ಜನ ಸಾಮಾನ್ಯರು ಮತ್ತು ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥ ಮಾಡಿಸುವುದೇ ಈ ಅಭಿಯಾನದ ಉದ್ದೇಶ. ಕಳೆದ ವರ್ಷ ಕೂಡ ಬಜೆಟ್ ಗೆ ಮುನ್ನ ಇಂಥ ಪ್ರಯತ್ನ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2020ರ ಪ್ರಮುಖ ದಿನಾಂಕ, ಸಮಯ ಮತ್ತು ನಿರೀಕ್ಷೆಗಳುಕೇಂದ್ರ ಬಜೆಟ್ 2020ರ ಪ್ರಮುಖ ದಿನಾಂಕ, ಸಮಯ ಮತ್ತು ನಿರೀಕ್ಷೆಗಳು

ಟ್ಯಾಗ್ ಲೈನ್ '#HamaraBharosa' ಜತೆಗೆ ಸಚಿವಾಲಯದಿಂದ ಮತ್ತೊಂದು ಅಭಿಯಾನ ಆರಂಭಿಸಿದ್ದು, ಬಜೆಟ್ ಭರವಸೆಗಳು ಮತ್ತು ಈಡೇರಿಸಿರುವುದರ ವಿವರ ಇರಲಿದೆ. ಈ ಅಭಿಯಾನದಲ್ಲಿ ಭರವಸೆ ಮತ್ತು ಅವುಗಳನ್ನು ಈಡೇರಿಸಿರುವುದರ ಮಾಹಿತಿಯನ್ನು ಪ್ರಮುಖ 12 ಪ್ರಾದೇಶಿಕ ಭಾಷೆಗಳಲ್ಲಿ ನೀಡಲಾಗುವುದು. ಆರೋಗ್ಯ ವಲಯ, ಸರ್ವರಿಗೂ ಸೂರು ಸೇರಿದಂತೆ ಎಲ್ಲದರ ಬಗ್ಗೆ ಮಾಹಿತಿ ದೊರೆಯುತ್ತದೆ.

ಆರ್ಥಿಕ ಸಚಿವಾಲಯದಿಂದ #ArthShastri ಅಭಿಯಾನ; ಏನಿದರ ವಿಶೇಷ?

ಹಣಕಾಸು ಸಚಿವಾಲಯವು ನ್ಯಾಷನಲ್ ಇನ್ ಫ್ರಾಸ್ಟ್ರಕ್ಚರ್ ಪೈಪ್ ಲೈನ್ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದೆ. ಎರಡೂ ಅಭಿಯಾನವು ಜನವರಿ ಇಪ್ಪತ್ತೊಂಬತ್ತರಿಂದ ಆರಂಭವಾಗಲಿದೆ. ಫೆಬ್ರವರಿ ಒಂದನೇ ತಾರೀಕಿನಂದು ಈ ಬಾರಿಯ ಬಜೆಟ್ ಮಂಡನೆ ಆಗಲಿದೆ.

English summary

Finance Ministry Will Launch #ArthShastri Campaign

Finance ministry will launch #ArthShashtri and #HamaraBharosa campaign to understand Budget by common man and students.
Story first published: Sunday, January 19, 2020, 18:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X