For Quick Alerts
ALLOW NOTIFICATIONS  
For Daily Alerts

ಭವಿಷ್ಯದ ಹೂಡಿಕೆ ಬಗ್ಗೆ ಗೌತಮ್ ಅದಾನಿ ಹೇಳುವುದು ಹೀಗೆ

|

ಅದಾನಿ ಗ್ರೂಪ್ಸ್‌ನ ವಾರ್ಷಿಕ ಷೇರುದಾರರ ಸಭೆಯು ನಡೆದಿದೆ. ಈ ಸಭೆಯಲ್ಲಿ ಮಾತನಾಡಿದ ದೇಶದ ಅತೀ ದೊಡ್ಡ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಸಂಸ್ಥೆಯ ಭವಿಷ್ಯದ ಹೂಡಿಕೆಗಳ ವಿಚಾರವನ್ನು ಮಾತನಾಡಿದ್ದಾರೆ.

ಅದಾನಿ ಗ್ರೂಪ್ಸ್‌ ಭವಿಷ್ಯದಲ್ಲಿ ಎನರ್ಜಿ ಉದ್ಯಮದಲ್ಲಿ ಸುಮಾರು 70 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತದೆ ಎಂದು ಗೌತಮ್ ಅದಾನಿ ಹೇಳಿದ್ದಾರೆ. ಇದರಿಂದಾಗಿ ಭಾರತವು ಅತೀ ಅಧಿಕ ತೈಲ ಆಮದಿನ ಬದಲಾಗಿ ಅತೀ ಅಧಿಕ ಗ್ರೀನ್ ಹೈಡ್ರೋಜನ್ ರಫ್ತು ಮಾಡುವ ದೇಶವಾಗಿ ಬದಲಾವಣೆ ಆಗಲಿದೆ ಎಂದು ನುಡಿದಿದ್ದಾರೆ.

 ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ! ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!

ಭಾರತದಲ್ಲಿ ಶಕ್ತಿ ಉದ್ಯಮದಿಂದ ಹಿಡಿದು ಈಗ ಟೆಲಿಕಾಂ ಉದ್ಯಮದವರೆಗೂ ಹೂಡಿಕೆ ಮಾಡುತ್ತಾ ಬಂದಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಈಗ 5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗಿಯಾಗುತ್ತಿದೆ. ಈ ಮಧ್ಯೆ ಅದಾನಿ ಗ್ರೂಪ್ಸ್‌ನ ವಾರ್ಷಿಕ ಷೇರುದಾರರ ಸಭೆಯಲ್ಲಿ ಗೌತಮ್ ಅದಾನಿ ಏನು ಹೇಳಿದ್ದಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಭವಿಷ್ಯದ ಹೂಡಿಕೆ ಬಗ್ಗೆ ಗೌತಮ್ ಅದಾನಿ ಹೇಳುವುದು ಹೀಗೆ

ಗೌತಮ್ ಅದಾನಿ ಹೇಳುವುದು ಏನು?

  • ನಾವು ಭಾರತದಲ್ಲಿ ಹೂಡಿಕೆ ಮಾಡುವುದರಿಂದ ಎಂದೂ ಕೂಡಾ ಹಿಂದೆ ಸರಿದಿಲ್ಲ
  • ಭಾರತದಲ್ಲಿ ಅದಾನಿ ಗ್ರೂಪ್ ಅತೀ ದೊಡ್ಡ ಏರ್‌ಪೋರ್ಟ್ ನಿರ್ವಾಹಕ ಸಂಸ್ಥೆಯಾಗಿದೆ. ಹಾಗೆಯೇ ಸಿಮೆಂಟ್ ಉದ್ಯಮಕ್ಕೂ ಅದಾನಿ ಸಂಸ್ಥೆ ಕಾಲಿರಿಸಿದೆ.
  • ಭಾರತದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ನಾವು ಎಂದಿಗೂ ಹಿಂದೆ ಸರಿದಿಲ್ಲ. ನಾವು ಶಕ್ತಿ ಉದ್ಯಮದಲ್ಲಿ ಸುಮಾರು 70 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದ್ದೇವೆ.
  • ಕೋವಿಡ್ ಬಿಕ್ಕಟ್ಟು ಹಾಗೂ ಶಕ್ತಿಯ ಕೊರತೆಯ ಸಂದರ್ಭದಲ್ಲೂ ನಾವು ಉದ್ಯಮವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದೇವೆ. ಶಕ್ತಿಯನ್ನು ಮರುಉತ್ಪಾದನೆ ಮಾಡುವವರೆಗೂ ಕೆಲವು ಉದ್ಯಮವನ್ನು ಕೆಲವು ದೇಶಗಳು ಸ್ಥಗಿತ ಮಾಡಿದೆ. ಆದರೆ ಭಾರತದಲ್ಲಿ ಇದನ್ನು ಸಮರ್ಥವಾಗಿ ನಿರ್ವಹಣೆ ಮಾಡಲಾಗಿದೆ.
  • ಡೇಟಾ ಸೆಂಟರ್, ಡಿಜಿಟಲ್ ಸೂಪರ್ ಆಪ್, ಇಂಡಸ್ಟ್ರಿಯಲ್ ಕ್ರೌಡ್‌ನಂತಹ ಕ್ಷೇತ್ರಗಳನ್ನು ಸೇರಿದಂತೆ ರಕ್ಷಣೆ, ವಾಯು ಮಾರ್ಗ, ಮೆಟಲ್ ಮೊದಲಾದ ಕ್ಷೇತ್ರದಲ್ಲಿ ಭಾರತದ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಜೊತೆಯಾಗಿದ್ದೇವೆ.
  • ನಮ್ಮ ಗ್ರೂಪ್ ಮಾರುಕಟ್ಟೆ ಬಂಡವಾಳವು ಈ ವರ್ಷ 200 ಬಿಲಿಯನ್ ಡಾಲರ್ ಮೀರಿದೆ.
  • ಗ್ರೀನ್ ಹೈಡ್ರೋಜನ್ ಭವಿಷ್ಯದ ಇಂಧನವಾಗಿದೆ
  • ಭಾರತದ ಅಭಿವೃದ್ಧಿಯ ಮೇಲೆ ಅದಾನಿ ಗ್ರೂಪ್‌ನ ಯಶಸ್ಸಿ ನಿಂತಿದೆ ಎಂದು ನಾವು ನಂಬಿದ್ದೇವೆ. ನಾವು ಭಾರತದಲ್ಲಿ ಹೂಡಿಕೆಯ ವಿಚಾರದಲ್ಲಿ ಎಂದಿಗೂ ಹಿಂದೆ ಸರಿದಿಲ್ಲ
  • ಭಾರತದ ಮೂಲಭೂತ ಸೌಕರ್ಯದಲ್ಲಿ ನಾವು ಹೂಡಿಕೆ ಮಾಡಿದ್ದೇವೆ. ರೋಡ್ ಕಾಂಟ್ರಾಕ್ಟ್‌ಗಳನ್ನು ನಾವು ಗೆಲ್ಲುತ್ತಿದ್ದೇವೆ. ಸಾರಿಗೆ, ವಿತರಣೆ, ಗ್ಯಾಸ್, ನೈಸರ್ಗಿಕ ಅನಿಲದಲ್ಲಿ ಷೇರು ಅಧಿಕವಾಗುತ್ತಿದೆ.
  • ನಾವು Holcim's ಅನ್ನು ಖರೀದಿ ಮಾಡಿದ ಬಳಿಕ ದೇಶದ ಎರಡನೇ ಅತೀ ದೊಡ್ಡ ಸಿಮೆಂಟ್ ಉದ್ಯಮ ಮಾಡುವ ಸಂಸ್ಥೆಯಾಗಿದ್ದೇವೆ.
  • ಈ ವರ್ಷ ನನಗೆ 60 ವರ್ಷ ವಯಸ್ಸಾಗುತ್ತದೆ. ಹಾಗೆಯೇ ನನ್ನ ತಂದೆ ಶಾಂತಿಲಾಲ್ ಅದಾನಿಯವರ ನೂರು ವರ್ಷದ ಹುಟ್ಟು ಹಬ್ಬವೂ ಈ ವರ್ಷವೇ ಆಗಿದೆ. ಈ ಮೈಲಿಗಲ್ಲನ್ನು ನಾವು ನೆನಪಿಸುವ ನಿಟ್ಟಿನಲ್ಲಿ ನಮ್ಮ ಅದಾನಿ ಕುಟುಂಬ ಜೊತೆಯಾಗಿ 60,000 ಕೋಟಿ ರೂಪಾಯಿಯನ್ನು ಆರೋಗ್ಯ ಕ್ಷೇತ್ರ, ಶಿಕ್ಷಣ, ಅಭಿವೃದ್ಧಿಗಾಗಿ ದಾನ ಮಾಡಲಿದ್ದೇವೆ

ಎಸ್‌ಬಿಐನಿಂದ ಅದಾನಿ ಗ್ರೂಪ್ 14,000 ಕೋಟಿ ರೂ. ಸಾಲ ಕೇಳಿದ್ದು ಯಾಕೆ?

ಇನ್ನು ಭಾರತದ 5ಜಿ ಸ್ಪೆಕ್ಟ್ರಮ್‌ ಹರಾಜು ಪ್ರಕ್ರಿಯೆ ಮಂಗಳವಾರ(ಜುಲೈ 26) ಬೆಳಗ್ಗೆ ಆರಂಭವಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಅದಾನಿ ಡೇಟಾ ನೆಟ್‌ವರ್ಕ್‌ ನಡುವೆ ತೀವ್ರ ಪೈಪೋಟಿ ಇದೆ. ಅದಾನಿ ಸಂಸ್ಥೆಯೇ ಈ ಬಿಡ್ ಅನ್ನು ಗೆಲ್ಲಬಹುದು ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

English summary

From Green Hydrogen to Future Investments, Here's What Gautam Adani Said

Speaking at the group's annual shareholders meeting, richest Indian Gautam Adani said the group is investing $70 billion in a new energy business.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X