For Quick Alerts
ALLOW NOTIFICATIONS  
For Daily Alerts

VSSಗೆ ಒಪ್ಪದ 1,086 ಕಾರ್ಮಿಕರನ್ನ ವಜಾಗೊಳಿಸಿದ ಜಿಎಂ ಇಂಡಿಯಾ

|

ಪುಣೆ ಬಳಿಕ ವಾಹನ ತಯಾರಕ ಸ್ಥಾವರದಲ್ಲಿ ವಿಎಸ್‌ಎಸ್‌ಗೆ ಒಪ್ಪದ 1,086 ಕಾರ್ಮಿಕರನ್ನು ಜಿಎಂ ಇಂಡಿಯಾ ವಜಾಗೊಳಿಸಿದ್ದು, ಕಂಪನಿಯ ವಿರುದ್ಧ ಕಾರ್ಮಿಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

 

ಜಿಎಂ ಇಂಡಿಯಾ ಕಂಪನಿ ವಿರುದ್ಧ ಕೈಗಾರಿಕಾ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ಕಾರ್ಮಿಕರು ನಾಂದಿ ಹಾಡಿದ್ದಾರೆ. ಈ ಹಿಂದೆ ತಲೆಗಾಂವ್ ಸ್ಥಾವರದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಜುಲೈ 4 ರ ಗಡುವಿನೊಳಗೆ ಸ್ವಯಂಪ್ರೇರಿತ ಬೇರ್ಪಡಿಕೆ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸುಮಾರು 1,086 ಕಾರ್ಮಿಕರನ್ನು ಅಮೆರಿಕಾದ ಕಾರು ತಯಾರಕರ ಸ್ಥಳೀಯ ಘಟಕವು ಜುಲೈ 12 ರಂದು ಉದ್ಯೋಗದಿಂದ ವಜಾಗೊಳಿಸಿದೆ.

VSSಗೆ ಒಪ್ಪದ 1,086 ಕಾರ್ಮಿಕರನ್ನ ವಜಾಗೊಳಿಸಿದ ಜಿಎಂ ಇಂಡಿಯಾ

ಸೇವೆಯನ್ನು ಹಿಂಪಡೆಯುವುದನ್ನು ಪ್ರಶ್ನಿಸಿ ಕಾರ್ಮಿಕ ಸಂಘವು ಜುಲೈ 15 ರಂದು ಪುಣೆಯ ಕೈಗಾರಿಕಾ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿತು ಮತ್ತು ಕಾರ್ಖಾನೆಯನ್ನು ಚೀನಾದ ಎಸ್ಯುವಿ ತಯಾರಕ ಗ್ರೇಟ್ ವಾಲ್ ಮೋಟಾರ್ಸ್ ಅಥವಾ ಇನ್ನಾವುದೇ ಕಂಪನಿಗೆ ಮಾರಾಟ ಮಾಡುವುದನ್ನು ತಡೆಹಿಡಿಯಿತು.

ಜಿಎಂ ಇಂಡಿಯಾ 2020 ರ ಡಿಸೆಂಬರ್‌ನಲ್ಲಿ ಕಾರ್ಖಾನೆಯಲ್ಲಿ ವಾಹನ ಉತ್ಪಾದನೆಯನ್ನು ನಿಲ್ಲಿಸಿ ಅದನ್ನು ಗ್ರೇಟ್ ವಾಲ್‌ಗೆ ಮಾರಾಟ ಮಾಡಲು ಒಪ್ಪಿಕೊಂಡಿತು. ಆದರೆ ಇದೀಗ ಕಾರ್ಮಿಕರ ಕಾನೂನು ಹೋರಾಟದಿಂದ ಆ ಒಪ್ಪಂದವೂ ಪೂರ್ಣಗೊಂಡಿಲ್ಲ.

ಜುಲೈ 16 ರಂದು ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಸ್ಥಾವರವನ್ನು ಮಾರಾಟ ಮಾಡುವ ಅಥವಾ ಗುತ್ತಿಗೆ ನೀಡುವಂತಿಲ್ಲ ಅಥವಾ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಸ್ವೀಕರಿಸುವಂತೆ ಜಿಎಂ ಇಂಡಿಯಾವನ್ನು ಕೇಳಿದೆ.

ಆಗಸ್ಟ್ 3, 2021 ರವರೆಗೆ ಯಾವುದೇ ವಹಿವಾಟುಗಳನ್ನು ಮುಂದುವರಿಸುವುದಿಲ್ಲ ಎಂದು ಜಿಎಂ ಇಂಡಿಯಾ ನ್ಯಾಯಾಲಯಕ್ಕೆ ದೃಢಪಡಿಸಿದೆ.

English summary

General Motors India lays off 1,086 workers after non-acceptance of VSS

general motors india has laid off 1,086 workers who have not accepted a voluntary separation package at the automaker’s plant near pune
Story first published: Wednesday, July 21, 2021, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X