For Quick Alerts
ALLOW NOTIFICATIONS  
For Daily Alerts

ಗೋವಾದ 31 ಪರ್ಸೆಂಟ್ ಐಟಿ ಉದ್ಯೋಗಿಗಳಲ್ಲಿ ಅಧಿಕ ರಕ್ತದೊತ್ತಡ, 40 ಪರ್ಸೆಂಟ್ ಅಧಿಕ ತೂಕ

|

ಗೋವಾದಲ್ಲಿ ಸುಮಾರು 31 ಪರ್ಸೆಂಟ್ ಐಟಿ ಉದ್ಯೋಗಿಗಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು 40 ಪರ್ಸೆಂಟ್‌ಗೂ ಅಧಿಕ ಜನರು ಬೊಜ್ಜು ಸಮಸ್ಯೆ ಹೊಂದಿದ್ದಾರೆ ಎಂದು ಕರಾವಳಿ ರಾಜ್ಯದಲ್ಲಿ ಕೆಲಸ ಮಾಡುವ ಐಟಿ ವೃತ್ತಿಪರರ ಅಧ್ಯಯನವು ಬಹಿರಂಗಪಡಿಸಿದೆ.

118 ಉದ್ಯೋಗಿಗಲಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹುಪಾಲು ಅಂದರೆ 63 (53.4 ಪರ್ಸೆಂಟ್) ಸಾಮಾನ್ಯ ಶ್ರೇಣಿಯ ದೇಹದ ತೂಕ, 7 (5.9 ಪರ್ಸೆಂಟ್) ಕಡಿಮೆ ತೂಕ, 40 (33.9 ಪರ್ಸೆಂಟ್) ಅಧಿಕ ತೂಕ, 6 (5.1 ಪರ್ಸೆಂಟ್) ಕ್ಲಾಸ್ ಒನ್ ಒಬೆಸಿಟಿ, 2 (1.7 ಪರ್ಸೆಂಟ್) ಕ್ಲಾಸ್ 2 ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಗೋವಾದ 31 ಪರ್ಸೆಂಟ್ ಐಟಿ ಉದ್ಯೋಗಿಗಳಲ್ಲಿ ಅಧಿಕ ರಕ್ತದೊತ್ತಡ!

ಮೂವತ್ತೇಳು (31.4 ಪರ್ಸೆಂಟ್) ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ, 50 (42.4 ಪರ್ಸೆಂಟ್) ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು, ಹಾಗೂ 13 (11.2 ಶೇಕಡಾ) ಮಧುಮೇಹ ಮೆಲ್ಲಿಟಸ್ ಮತ್ತು 3 (2.5 ಶೇಕಡಾ) ಮಧುಮೇಹ ಪೂರ್ವದಲ್ಲಿ ಹೊಂದಿದ್ದರು ಎಂದು ಅಧ್ಯಯನ ಗಮನಿಸಲಾಗಿದೆ.

"ಅಧ್ಯಯನದಲ್ಲಿ ಭಾಗವಹಿಸುವವರಲ್ಲಿ ಜೀವನಶೈಲಿ ಕಾಯಿಲೆಗಳ ಗಮನಾರ್ಹ ಹರಡುವಿಕೆಗೆ ಕಾರಣವಾಗುತ್ತಿದೆ. ಎಪಿಡೆಮಿಯಾಲಜಿ ಇಂಟರ್‌ನ್ಯಾಷ್‌ನಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಅಧಿಕ ರಕ್ತದೊತ್ತಡ, ಮಧುಮೇಹ, ಡಿಸ್ಲಿಪಿಡೆಮಿಯಾ ಮತ್ತು ಅಧಿಕ ತೂಕ ಅಥವಾ ಬೊಜ್ಜು ಮುಂತಾದ ಜೀವನಶೈಲಿ ಕಾಯಿಲೆಗಳು ಹೃದಯ ರಕ್ತನಾಳದ ಕಾಯಿಲೆಯ ಬೆಳವಣಿಗೆಗೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ ".

ಪೂರ್ವ-ಅಧಿಕ ರಕ್ತದೊತ್ತಡ ಪ್ರಕರಣಗಳು ಸಂಭವನೀಯ ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಕಳವಳವನ್ನು ಉಂಟುಮಾಡಿದೆ ಎಂದು ಸಂಶೋಧನಾ ಪ್ರಬಂಧದ ಲೇಖಕರು ಗಮನ ಸೆಳೆದಿದ್ದಾರೆ. ಗೋವಾದ ನಾಲ್ಕು ಉನ್ನತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 118 ಐಟಿ ವೃತ್ತಿಪರರ ಆರೋಗ್ಯ ದಾಖಲೆಗಳಿಂದ ಅಧ್ಯಯನದ ಡೇಟಾವನ್ನು ಸಂಗ್ರಹಿಸಲಾಗಿದೆ.

English summary

Goa's 31 Percent IT Workers Battle Hypertension

Nearly 31 per cent of the IT sector workforce in Goa suffers from hypertension cross-sectional study of IT professionals working in the coastal state has revealed.
Story first published: Tuesday, January 21, 2020, 14:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X