For Quick Alerts
ALLOW NOTIFICATIONS  
For Daily Alerts

Gold, Silver Rate: ಇಳಿಜಾರಿನಲ್ಲಿ ಮುಂದುವರಿದ ಚಿನ್ನ, ಬೆಳ್ಳಿ ದರ

By ಅನಿಲ್ ಆಚಾರ್
|

ಭಾರತದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಮೇಲಿನ ಒತ್ತಡ ಸೋಮವಾರ (ಸೆಪ್ಟೆಂಬರ್ 28, 2020) ಕೂಡ ಮುಂದುವರಿದಿದೆ. ಎಂಸಿಎಕ್ಸ್ ಚಿನ್ನದ ಫ್ಯೂಚರ್ಸ್ 0.4% ಇಳಿಕೆ ಕಂಡು, ಪ್ರತಿ 10 ಗ್ರಾಮ್ ಗೆ 49,460 ರುಪಾಯಿಯಂತೆ ವಹಿವಾಟು ನಡೆಸಿತು. ಆ ಮೂಲಕ ಕಳೆದ ವಾರದ ನಷ್ಟವನ್ನು ಮತ್ತಷ್ಟು ವಿಸ್ತರಿಸಿಕೊಂಡಿತು.

ಇತ್ತ ಬೆಳ್ಳಿ ಬೆಲೆಯು 1% ಇಳಿಕೆ ಕಂಡು, ಪ್ರತಿ ಕೇಜಿಗೆ 58,473 ರುಪಾಯಿಯಂತೆ ವಹಿವಾಟು ನಡೆಸಿತು. ಕಳೆದ ವಾರ ಭಾರತದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ 2 ಸಾವಿರ ರುಪಾಯಿ ಇಳಿಕೆ ಕಂಡಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಕೇಜಿಗೆ 9 ಸಾವಿರ ರುಪಾಯಿ ಇಳಿದಿದೆ. ಆಗಸ್ಟ್ 7ನೇ ತಾರೀಕು ಚಿನ್ನದ ಬೆಲೆಯು ಪ್ರತಿ 10 ಗ್ರಾಮ್ ಗೆ ಸಾರ್ವಕಾಲಿಕ ದಾಖಲೆಯ ಎತ್ತರದ 56,200 ರುಪಾಯಿ ಇತ್ತು. ಅಲ್ಲಿಂದ ಪ್ರತಿ ಹತ್ತು ಗ್ರಾಮ್ ಗೆ 6500 ರುಪಾಯಿ ಬೆಲೆ ಕುಸಿದಿದೆ.

ಇಳಿಕೆಯಲ್ಲೂ ದಾಖಲೆ ಬರೆದ ಚಿನ್ನ; ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತಇಳಿಕೆಯಲ್ಲೂ ದಾಖಲೆ ಬರೆದ ಚಿನ್ನ; ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ

ಡಾಲರ್ ಮೌಲ್ಯದಲ್ಲಿ ಹೆಚ್ಚಳ ಆಗಿರುವುದರಿಂದ ಈಚೆಗೆ ಚಿನ್ನದ ಬೆಲೆ ಮೇಲೆ ಭಾರೀ ಒತ್ತಡ ಬಿದ್ದಿದೆ. ಜಾಗತಿಕ ಆರ್ಥಿಕ ಮಾರ್ಕೆಟ್ ನಲ್ಲಿ ಅಪಾಯ ಹಾಗೂ ಅನಿಶ್ಚಿತತೆ ಇರುವುದರಿಂದ ಯುಎಸ್ ಡಾಲರ್ ಮೇಲೆ ಹಣ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡುತ್ತಿದೆ. ಯುರೋಪ್ ಖಂಡದ ಕೆಲ ದೇಶಗಳಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡುವ ಆತಂಕ ಎದುರಾಗಿದೆ. ಕೆಲ ದೇಶಗಳಲ್ಲಂತೂ ಈಗಲೂ ಪೂರ್ಣ ಪ್ರಮಾಣದಲ್ಲಿ ಲಾಕ್ ಡೌನ್ ನಿರ್ಬಂಧ ತೆರವಾಗಿಲ್ಲ.

ಯುಎಸ್ ಡಾಲರ್ ಮೌಲ್ಯ ಏರಿಕೆಗೆ ತಾತ್ಕಾಲಿಕ ತಡೆ

ಯುಎಸ್ ಡಾಲರ್ ಮೌಲ್ಯ ಏರಿಕೆಗೆ ತಾತ್ಕಾಲಿಕ ತಡೆ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಕಳೆದ ವಾರ ಭಾರೀ ಇಳಿಕೆ ಆಗಿತ್ತು. ಸ್ಪಾಟ್ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಿದ್ದು, ಪ್ರತಿ ಔನ್ಸ್ ಗೆ (28.3495 ಗ್ರಾಮ್) $ 1,860.19 ಆಗಿದೆ. ಯುಎಸ್ ಡಾಲರ್ ಮೌಲ್ಯದ ಏರಿಕೆಗೆ ತಾತ್ಕಾಲಿಕ ತಡೆ ಬಂದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಪ್ರತಿಸ್ಪರ್ಧಿ ಕರೆನ್ಸಿಗಳಿಗಿಂತ ಡಾಲರ್ ಸೂಚ್ಯಂಕ 0.14% ಇಳಿಕೆ ಕಂಡಿತ್ತು. ಕಳೆದ ವಾರವಷ್ಟೇ ಎರಡು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಇತರ ಕರೆನ್ಸಿ ಬಳಸಿ, ಚಿನ್ನ ಖರೀದಿ ಮಾಡಬೇಕು ಎಂದಿರುವವರಿಗೆ ಡಾಲರ್ ಮೌಲ್ಯದ ಕುಸಿತವು ಹಳದಿ ಲೋಹದ ಬೆಲೆಯನ್ನು ಸ್ವಲ್ಪ ಅಗ್ಗ ಮಾಡುತ್ತದೆ.

ಬೆಳ್ಳಿ, ಪ್ಲಾಟಿನಂ ಹಾಗೂ ಪಲಾಡಿಯಂ ಸ್ಥಿತಿ ಏನು?

ಬೆಳ್ಳಿ, ಪ್ಲಾಟಿನಂ ಹಾಗೂ ಪಲಾಡಿಯಂ ಸ್ಥಿತಿ ಏನು?

ಇನ್ನು ಬೆಳ್ಳಿ 0.3% ಅಥವಾ ಔನ್ಸ್ ಗೆ 22.93 ಅಮೆರಿಕನ್ ಡಾಲರ್ ಬೆಲೆ ಏರಿಕೆ ಕಂಡಿತು. ಪ್ಲಾಟಿನಂ 0.4% ಅಥವಾ $ 850.74 ತಲುಪಿತು. ಇನ್ನು ಪಲಾಡಿಯಂ 0.1% ಹೆಚ್ಚಳವಾಗಿ, $ 2,217.87 ಮುಟ್ಟಿತು. ಮಂಗಳವಾರದಂದು ಯುಎಸ್ ಅಧ್ಯಕ್ಷೀಯ ಚುನಾವಣೆ ಭಾಗವಾಗಿ ಟ್ರಂಪ್ ಮತ್ತು ಜೋ ಬಿಡೆನ್ ಮಧ್ಯೆ ಸಂವಾದ ಇದ್ದು, ಚಿನ್ನದ ವ್ಯವಹಾರಸ್ಥರು ಖರೀದಿ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದಾರೆ.

ಏಷ್ಯನ್ ಷೇರು ಮಾರ್ಕೆಟ್ ಏರಿಕೆ

ಏಷ್ಯನ್ ಷೇರು ಮಾರ್ಕೆಟ್ ಏರಿಕೆ

ಏಷ್ಯನ್ ಷೇರು ಮಾರ್ಕೆಟ್ ಗಳು ಏರಿಕೆ ಕಂಡಿದ್ದವು. ಚೀನಾದ ಕೈಗಾರಿಕೆ ಕಂಪೆನಿಗಳು ಸತತ ನಾಲ್ಕನೇ ತಿಂಗಳು, ಆಗಸ್ಟ್ ನಲ್ಲಿ ಲಾಭ ತೋರಿಸಿದ್ದರಿಂದ ಮಾರುಕಟ್ಟೆ ಮೇಲೆ ಸಕಾರಾತ್ಮಕ ಬೆಳವಣಿಗೆ ಆಗಿದೆ. ಯುಎಸ್ ನಲ್ಲಿ ಕೊರೊನಾಗೆ ಸಂಬಂಧಿಸಿದ ಆರ್ಥಿಕ ಉತ್ತೇಜನದ ಘೋಷಣೆ ಮಾಡಬಹುದಾ ಎಂದು ಚಿನ್ನದ ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ಇನ್ನೇನು ಮೊತ್ತ ಅಂತಿಮವಾಗಿದೆ, ಆದರೆ ಮಾತುಕತೆ ಮುಂದುವರಿದಿದೆ ಎಂದು ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಳೆದ ವಾರದ ಅಂತ್ಯಕ್ಕೆ ಹೇಳಿದ್ದಾರೆ.

ಇಟಿಎಫ್ ಹೂಡಿಕೆದಾರರು ಕಾದು ನೋಡುತ್ತಿದ್ದಾರೆ

ಇಟಿಎಫ್ ಹೂಡಿಕೆದಾರರು ಕಾದು ನೋಡುತ್ತಿದ್ದಾರೆ

ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದರೂ ಇಟಿಎಫ್ ಹೂಡಿಕೆದಾರರು ಕಾದುನೋಡುತ್ತಿದ್ದಾರೆ. ಶುಕ್ರವಾರದ ಹೊತ್ತಿಗೆ ವಿಶ್ವದ ಅತಿ ದೊಡ್ಡ ಚಿನ್ನದ ಇಟಿಎಫ್ ಫಂಡ್ ವ್ಯವಹಾರ ನಡೆಸುವ ಎಸ್ ಡಿಪಿಆರ್ ಗೋಲ್ಡ್ ಟ್ರಸ್ಟ್ 0.02% ಇಳಿಕೆ ಆಗಿ, 1266.84 ಟನ್ ಹೊಂದಿತ್ತು. ಸೆಪ್ಟೆಂಬರ್ 22ಕ್ಕೆ COMEX ಚಿನ್ನ ಹಾಗೂ ಬೆಳ್ಳಿಯ ಕಾಂಟ್ರ್ಯಾಕ್ಟ್ ಗಳ ಮೇಲೆ ಖರೀದಿ ನಿರೀಕ್ಷೆಯನ್ನು ಕಡಿಮೆ ಮಾಡಿಕೊಳ್ಳಲಾಗಿದೆ ಎಂದು ಯುಎಸ್ ಕಮಾಡಿಟಿ ಫ್ಯೂಚರ್ಸ್ ಟ್ರೇಡಿಂಗ್ ಕಮಿಷನ್ (CFTC) ಶುಕ್ರವಾರ ಹೇಳಿದೆ. ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಿಂದಾಗಿ ರೀಟೇಲ್ ಬೇಡಿಕೆ ಕಳೆದ ವಾರ ಹೆಚ್ಚಾಗಿದೆ ಎಂದು ಡೀಲರ್ಸ್ ಗಳು ತಿಳಿಸಿದ್ದಾರೆ.

English summary

Gold And Silver Rate Continued Down Trend In India

Gold price again fall on September 28, 2020. By this gold rate decreased 6500 rupees from it's high in August first week.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X