For Quick Alerts
ALLOW NOTIFICATIONS  
For Daily Alerts

2019ರಲ್ಲಿ ಅತಿ ಹೆಚ್ಚು ಓದುಗರು ಲೈಕ್ ಮಾಡಿದ ಬಿಜಿನೆಸ್ ಸುದ್ದಿಗಳು

|

ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಕಾತುರರಾಗಿದ್ದಾರೆ. 2019ಕ್ಕೆ ಇನ್ನೇನು ಬೈ ಬೈ ಹೇಳಲಿದ್ದಾರೆ. ಗುಡ್‌ರಿಟರ್ನ್ಸ ಕನ್ನಡದ ಎಲ್ಲಾ ಓದುಗರಿಗೂ ಹೊಸ ವರ್ಷದ ಶುಭಾಶಯಗಳು.

 

2019ರಲ್ಲೂ ನೂರಾರು ಸುದ್ದಿಗಳನ್ನು ಓದುಗರಿಗೆ ತಲುಪಿಸಿದ್ದೇವೆ. ಅದರಲ್ಲಿ ಅತಿ ಹೆಚ್ಚು ಜನರಿಗೆ ತಲುಪಿರುವ ಮತ್ತು ಅತಿ ಹೆಚ್ಚು ಜನರು ಓದಿರುವ ಸುದ್ದಿಗಳನ್ನು ನಾವು ಆಯ್ದು ಒಂದು ಗೊಂಚಲಿನ ಮೂಲಕ ನಿಮ್ಮ ಮುಂದೆ ಅರ್ಪಿಸುವುದೇ ಈ ಲೇಖನದ ಹಿಂದಿನ ಉದ್ದೇಶ. 2019ರಲ್ಲಿ ಅತಿ ಹೆಚ್ಚು ಜನರು ಓದಿದ ಸುದ್ದಿಗಳು ಹಾಗೂ ಅತಿ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾದ ಲೇಖನಗಳ ಗೊಂಚಲು ಈ ಕೆಳಗಿವೆ ಓದಿ.

1. ವಿಶ್ವದ ಅರ್ಧದಷ್ಟು ಸಂಪತ್ತು ಈ 10 ವ್ಯಕ್ತಿಗಳ ಬಳಿ ಇದೆ!

1. ವಿಶ್ವದ ಅರ್ಧದಷ್ಟು ಸಂಪತ್ತು ಈ 10 ವ್ಯಕ್ತಿಗಳ ಬಳಿ ಇದೆ!

ವಿಶ್ವದ ಅರ್ಧದಷ್ಟು ಸಂಪತ್ತು ಕೇವಲ 10 ವ್ಯಕ್ತಿಗಳ ಬಳಿಯಲ್ಲಿ ಇದೆ ಎಂದರೆ ಯಾರಿಗಾದರೂ ಆಶ್ಚರ್ಯ ಆಗದೇ ಇರದು! ಜಗತ್ತಿನ ಹೆಚ್ಚಿನ ಸಂಪತ್ತು ಕೆಲವರ ಬಳಿಯಲ್ಲಿರುವುದರಿಂದಲೇ ಆದಾಯ ಅಸಮಾನತೆ ಮಹಾ ಪಿಡುಗಾಗಿ ಜಗತ್ತನ್ನು ಕಾಡುತ್ತಿದೆ. ವಿಶ್ವದ ಅರ್ಧದಷ್ಟು ಸಂಪತ್ತುಹೊಂದಿರುವ ಅವರೇಲ್ಲರೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಮಹಾಪುರುಷರು. ಇವರಲ್ಲಿ ಹೆಚ್ಚಿನವರು ಅಮೆರಿಕಾದವರು, ಒಬ್ಬರು ಯೂರೋಪಿಯನ್, ಇನ್ನೊಬ್ಬರು ಮೆಕ್ಸಿಕನ್ ಹಾಗು ಭಾರತದವರನ್ನು ಸೇರಿಸುವುದಾದರೆ ಮುಕೇಶ್ ಅಂಬಾನಿ. ಇವರುಗಳು ಸಂಪತ್ತು ಹೊಂದಿರುವುದರ ಜೊತೆಗೆ ದಾನಧರ್ಮ ಮಾಡುವುದರಲ್ಲು ಮುಂದಿದ್ದಾರೆ.

ಜಗತ್ತಿನ ಅರ್ಧದಷ್ಟು ಸಂಪತ್ತು ಹೊಂದಿರುವ ಆ ಮಹಾಪುರುಷರು ಯಾರು ಎಂಬ ಕುತೂಹಲ ನಿಮ್ಮಲ್ಲಿ ಖಂಡಿತವಾಗಿಯೂ ಇರುತ್ತದೆ. ಆ ಶತಕೋಟ್ಯಾಧಿಪತಿಗಳ ಕುತೂಹಲಕಾರಿ ನೋಟ ಇಲ್ಲಿದೆ ಓದಿ...

 

2. ಮಾತೃಶ್ರಿ ಯೋಜನೆ: ರೂ. 12,000 ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
 

2. ಮಾತೃಶ್ರಿ ಯೋಜನೆ: ರೂ. 12,000 ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಈ ವರ್ಷ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಅವಧಿಯ ಎರಡನೇ ಬಜೆಟ್ ನಲ್ಲಿ ರೈತರು, ಬಡವರು, ಹಿಂದುಳಿದವರು, ಎಸ್ಸಿ-ಎಸ್ಟಿ, ಕಾರ್ಮಿಕ ವರ್ಗದವರು, ವಿದ್ಯಾರ್ಥಿಗಳು ಒಳಗೊಂಡಂತೆ ಹಲವು ವಲಯಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಜೊತೆಗೆ ಮಹಿಳೆಯರಿಗಾಗಿ ಕೂಡ ಅನೇಕ ಯೋಜನೆಗಳನ್ನು ಘೋಷಿಸಿದ್ದು, ಮುಖ್ಯವಾಗಿ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಪ್ರಕಟಿಸಿದ್ದಾರೆ. ಕಳೆದ ಬಾರಿ ಬಜೆಟ್ ನಲ್ಲಿ ಪ್ರಕಟಿಸಿರುವ ಈ ಯೋಜನೆಯಲ್ಲಿ ಹಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ. 'ಉದ್ಯೋಗಿನಿ ಯೋಜನೆ' ಅಡಿಯಲ್ಲಿ 3 ಲಕ್ಷ ಸಾಲ, 90 ಸಾವಿರ ಸಬ್ಸಿಡಿ ಪಡೆಯಿರಿ

ಮಾತೃಶ್ರೀ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಬೇಕಾಗುವ ದಾಖಲಾತಿ, ಸಿಗುವ ಸಹಾಯಧನ ಇತ್ಯಾದಿ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

 

3. ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ?

3. ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ?

ನಮ್ಮಲ್ಲಿ ಹೆಚ್ಚಿನ ಕುಟುಂಬಗಳು ಎಲ್ಪಿಜಿ ಗ್ಯಾಸ್ ಸಂಪರ್ಕ ಹೊಂದಿದ್ದು, ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಸೇವೆ ಪಡೆಯುತ್ತಿದ್ದಾರೆ. ಸಬ್ಸಿಡಿ ಸಿಲಿಂಡರ್ ಹಣ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಆದರೆ ಕೆಲವೊಮ್ಮೆ ಬ್ಯಾಂಕ್ ಸಿಬ್ಬಂದಿಗಳ ತಪ್ಪಿನಿಂದಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ. ಸಬ್ಸಿಡಿ ಹಣ ಖಾತೆಗೆ ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಹಚ್ಚುವುದು ತುಂಬಾ ಸುಲಭ

ಎಲ್ಪಿಜಿ ಸಬ್ಸಿಡಿ ಖಾತೆಗೆ ಬರುತ್ತಿದೆಯೇ ಎಂಬುದನ್ನು ಚೆಕ್ ಮಾಡೋದು ಹೇಗೆ ಎಂಬುದನ್ನು ತಿಳಿಯಲಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಲೇಖನ ಓದಿ

 

4. ತಪ್ಪು ಖಾತೆಗೆ ವರ್ಗಾವಣೆಯಾದ ಹಣ ಹಿಂತೆಗೆದುಕೊಳ್ಳುವುದು ಹೇಗೆ?

4. ತಪ್ಪು ಖಾತೆಗೆ ವರ್ಗಾವಣೆಯಾದ ಹಣ ಹಿಂತೆಗೆದುಕೊಳ್ಳುವುದು ಹೇಗೆ?

ನಮ್ಮಿಂದ ತಪ್ಪುಗಳಾಗುವುದು ಸಹಜವಾಗಿದ್ದು, ಆನ್ಲೈನ್, ಇ-ಕಾಮರ್ಸ್, ನೆಟ್ ಬ್ಯಾಂಕಿಂಗ್, ಇ-ವ್ಯಾಲೆಟ್ ಸೇವೆಗಳು ಬಂದ ನಂತರ ಹೆಚ್ಚು ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವ ತಪ್ಪುಗಳು ಕೂಡ ಸಂಭವಿಸುತ್ತವೆ. ಒಂದು ವೇಳೆ ತಪ್ಪು ಖಾತೆಗೆ ಹಣ ವರ್ಗಾವಣೆಯಾದ ನಂತರ, ಸ್ವೀಕರಿಸಿದವರನ್ನು ಹೇಗೆ ಸಂಪರ್ಕಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಉದ್ಭವವಾಗುತ್ತವೆ. ಮನಿ ಬ್ಯಾಂಕ್ ಪಡೆಯಲು ಸಾಧ್ಯವಾಗುತ್ತದೆಯೇ? ತಪ್ಪು ಖಾತೆಗೆ ಹೋದ ಹಣ ಬ್ಯಾಂಕುಗಳಿಗೆ ಹಿಂದಿರುಗಿಸುವ ಅಧಿಕಾರವಿದೆಯೇ? ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸುವುಉದ ಸಾಮಾನ್ಯ. ಈ ಲೇಖನದಲ್ಲಿ, ತಪ್ಪು ಖಾತೆಗೆ ವರ್ಗಾವಣೆಯಾದ ಹಣವನ್ನು ಹಿಂಪಡೆಯುವಾಗ ಈ ಪ್ರಶ್ನೆಗಳನ್ನು, ಕಾರ್ಯವಿಧಾನವನ್ನು ಮತ್ತು ಕಾನೂನುಬದ್ಧತೆಯನ್ನು ನೋಡುತ್ತೇವೆ ಬನ್ನಿ ತಿಳಿಯೋಣ..

5. ಈ ಬಿಜಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ರುಪಾಯಿ ಗಳಿಸಿ

5. ಈ ಬಿಜಿನೆಸ್ ಆರಂಭಿಸಿ ವರ್ಷಕ್ಕೆ 97 ಲಕ್ಷ ರುಪಾಯಿ ಗಳಿಸಿ

ದಿನದಿಂದ ದಿನಕ್ಕೆ ಬದಲಾದ ಸಮಯಕ್ಕೆ ಜನರ ಜೀವನ ಶೈಲಿ, ಬೇಕು ಬೇಡಿಕೆ ಹಾಗು ಅಭಿರುಚಿಗಳು ಬದಲಾಗುತ್ತಾ ಹೋಗುತ್ತವೆ. ಜೀವನ ಶೈಲಿಯ ಬದಲಾವಣೆಯೊಂದಿಗೆ ವಸ್ತುಗಳ ಮೇಲಿನ ಬೇಡಿಕೆಯಲ್ಲಿ ಕೂಡ ಬದಲಾವಣೆಯಾಗುತ್ತಾ ಹೋಗುತ್ತದೆ. ಅದೇ ರೀತಿ ಜನರ ಅಭಿರುಚಿ ಹಾಗು ಅನುಕೂಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಹೊಸ ಹೊಸ ವಸ್ತುಗಳು ಬರುತ್ತವೆ. ಬದಲಾದ ಜೀವನಶೈಲಿಯ ಪರಿಣಾಮ ನ್ಯಾಪ್ಕಿನ್, ಟಿಶ್ಯೂ ಪೇಪರ್ ಬೇಡಿಕೆ ಕೂಡ ಹೆಚ್ಚುತ್ತಿದೆ.

ಹೊಟೇಲ್, ಮನೆ, ರೆಸ್ಟೋರೆಂಟ್, ರಿಟೇಲ್ ಮಳಿಗೆ, ಗೂಡಂಗಡಿ ಸೇರಿದಂತೆ ಈಗ ಟಿಶ್ಯೂ ಪೇಪರ್ ಗೆ ಬೇಡಿಕೆ ಹೆಚ್ಚಾಗಿದೆ. ಟಿಶ್ಯೂ ಪೇಪರ್ ಬಿಸಿನೆಸ್ ಆರಂಭಿಸಿ ಕೈತುಂಬ ಹಣ ಗಳಿಸಬಹುದು. ಇದರ ಬಗ್ಗೆ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

6. 2 ಲಕ್ಷದಲ್ಲಿ ಈ ಬಿಜಿನೆಸ್ ಆರಂಭಿಸಿ, ಪ್ರತಿ ತಿಂಗಳು 25 ಸಾವಿರ ಗಳಿಸಿ

6. 2 ಲಕ್ಷದಲ್ಲಿ ಈ ಬಿಜಿನೆಸ್ ಆರಂಭಿಸಿ, ಪ್ರತಿ ತಿಂಗಳು 25 ಸಾವಿರ ಗಳಿಸಿ

ಭಾರತದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಪೂಜೆ-ಪುರಸ್ಕಾರ, ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಧೂಪ,‌ ಅಗರಬತ್ತಿಯನ್ನು ಬಳಸುತ್ತಾರೆ. ಎಲ್ಲರೂ ದೇವರ ಪೂಜೆಗೆ ಅಗತ್ಯವಾಗಿ ಅಗರಬತ್ತಿ, ಧೂಪ ಹಚ್ಚುತ್ತಾರೆ. ಮನೆ ಪರಿಸರವನ್ನು ಪವಿತ್ರಗೊಳಿಸಲು ಧೂಪದ್ರವ್ಯ ಸ್ಥಾನ ಪಡೆದಿದೆ. ಅಗರಬತ್ತಿ ಬಿಸಿನೆಸ್ ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾಗಿರುವುದರಿಂದ ಯಾವುದೇ ಒಬ್ಬ ವ್ಯಕ್ತಿಯೂ ಅಗರಬತ್ತಿ-ಧೂಪದ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಬಹುದು. ಭಾರತದಲ್ಲಿ ಅಗರಬತ್ತಿ, ಧೂಪಗಳಿಗೆ ಅತಿಹೆಚ್ಚು ಬೇಡಿಕೆ ಇರುವುದರಿಂದ ಭಾರೀ ಯಶಸ್ಸನ್ನು ಹೊಂದಬಹುದು. ಇದರ ಮಾರಾಟ ಕೂಡ ಸುಲಭ.

7. ಈ ಬಿಜಿನೆಸ್‌ನಿಂದ 2 ಲಕ್ಷ ಆದಾಯ ಗ್ಯಾರೆಂಟಿ

7. ಈ ಬಿಜಿನೆಸ್‌ನಿಂದ 2 ಲಕ್ಷ ಆದಾಯ ಗ್ಯಾರೆಂಟಿ

ಕಂಪನಿಗಳಲ್ಲಿ ಅಥವಾ ಇನ್ನೊಬ್ಬರ ಕೈಕೆಳಗೆ ದುಡಿಮೆ ಮಾಡಲು ತುಂಬಾ ಜನರು ಇಷ್ಟ ಪಡುವುದಿಲ್ಲ. ಕಂಪನಿಗಳು ನೀಡುವ ಸಂಬಳಕ್ಕೆ ಅವಲಂಬನೆಯಾಗದೇ ಸ್ವಂತ ಬಿಜಿನೆಸ್ ಅಥವಾ ಸ್ವಂತ ದುಡಿಮೆ ಮಾಡಲು ಇಷ್ಟ ಪಡುತ್ತಾರೆ. ಹಾಗಂತ ಸ್ವಂತ ಉದ್ಯಮ ಆರಂಭಿಸುವುದು ಸುಲಭದ ಕೆಲಸ ಕೂಡ ಅಲ್ಲ. ಸ್ವಂತ ಉದ್ಯಮ ಆರಂಭಿಸಿ ಒಳ್ಳೆ ಗಳಿಕೆ ಮಾಡಬೇಕೆಂದು ಬಯಸುವವರಿಗೆ ಇಲ್ಲೊಂದು ಉಪಯುಕ್ತ ಬಿಸಿನೆಸ್ ಸಲಹೆ ನೀಡಲಾಗಿದೆ. ಬಳಸಿ ಬಿಸಾಡಬಹುದಾದ ಕಪ್ (disposel cup), ಪ್ಲೇಟ್, ಬಟ್ಟಲುಗಳಂತಹ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದ್ದು, ಈ ಬಿಸಿನೆಸ್ ಆರಂಭಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

8. ಪೋಸ್ಟ್‌ ಆಫೀಸ್‌ ಯೋಜನೆಯಲ್ಲಿ 5,000, 10,000, 1ಲಕ್ಷ ಡಬಲ್ ಮಾಡುವುದು ಹೇಗೆ?

8. ಪೋಸ್ಟ್‌ ಆಫೀಸ್‌ ಯೋಜನೆಯಲ್ಲಿ 5,000, 10,000, 1ಲಕ್ಷ ಡಬಲ್ ಮಾಡುವುದು ಹೇಗೆ?

ಹೂಡಿಕೆ ಮಾಡುವ ಹಣ ಅಲ್ಪಾವಧಿಯಲ್ಲಿ ಡಬಲ್ ಮಾಡಬೇಕೆಂಬ ಬಯಕೆ ಹೆಚ್ಚಿನ ಹೂಡಿಕೆದಾರರಲ್ಲಿ ಇರುತ್ತದೆ. ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆ ಹೂಡಿಕೆ ಲೆಕ್ಕಾಚಾರದ ಪ್ರಕಾರ ಅಲ್ಪಾವಧಿಯಲ್ಲಿ ಹಣ ಡಬಲ್ ಮಾಡಲು ಅವಕಾಶ ಕಲ್ಪಿಸುತ್ತದೆ.

ನಿಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸಲು ಬಯಸುವಿರಾ? ಪ್ರಸ್ತುತ ಅಂಚೆ ಕಚೇರಿಗಿಂತ ನಿಮ್ಮ ಹೂಡಿಕೆ ಮೊತ್ತವನ್ನು ದ್ವಿಗುಣಗೊಳಿಸಲು ಖಾತರಿಪಡಿಸುವ ದೊಡ್ಡ ಹಣಕಾಸು ಸಂಸ್ಥೆ ಇನ್ನೊಂದಿಲ್ಲ. ಬ್ಯಾಂಕ್ ಸ್ಥಿರ ಠೇವಣಿಗಳು ಇದಕ್ಕೆ ಪರ್ಯಾಯವಾಗಿ ಆಯ್ಕೆಗಳಲ್ಲಿ ಒಂದಾಗಿ ಕಾಣಬಹುದು. ಇದು ಆದಾಯದ ಮೇಲೆ ಒಂದು ರೀತಿಯ ಖಾತರಿಯೊಂದಿಗೆ ಬರುತ್ತದೆ. ಪೋಸ್ಟ್ ಆಫೀಸ್ ಗೆ ಹೋಲಿಸಿದರೆ ಪ್ರಮುಖ ಬ್ಯಾಂಕುಗಳಾದ ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ನೀಡುವ ಬಡ್ಡಿದರ ಕಡಿಮೆ.ಇದರ ಬಗ್ಗೆ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

9. ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ. ನಿಮ್ಮಲ್ಲಿ ಇವೆಯೆ ನೋಡಿ!

9. ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ. ನಿಮ್ಮಲ್ಲಿ ಇವೆಯೆ ನೋಡಿ!

ಸಮುದ್ರ ದಂಡೆಯಲ್ಲೊಂದು ಸುಂದರವಾದ ಮನೆ ಕಟ್ಟಿಕೊಳ್ಳುವುದು, ಜಗತ್ತಿನ ಸುಂದರ ಸ್ಥಳಗಳಿಗೆ ಭೇಟಿ ನೀಡುವುದು ಹೀಗೆ ಒಟ್ಟಾರೆಯಾಗಿ ಸುಂದರವಾದ ಜೀವನ ನಡೆಸುವುದು ಬಹುತೇಕ ಎಲ್ಲರ ಇಷ್ಟದ ಸಂಗತಿಯಾಗಿರುತ್ತದೆ. ಆದರೆ ಈ ಎಲ್ಲ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ನಮ್ಮ ಬಳಿ ಸಾಕಷ್ಟು ಹಣವೂ ಇರಬೇಕಾಗುತ್ತದೆ. ಅಂದರೆ ಜೀವನದಲ್ಲಿ ಶ್ರೀಮಂತಿಕೆಯನ್ನು ನಮ್ಮದಾಗಿಸಿಕೊಳ್ಳಬೇಕಾಗುತ್ತದೆ.

ಕೋಟ್ಯಧೀಶರಾಗಿರುವವರು ಶ್ರೀಮಂತಿಕೆ ಸಂಪಾದಿಸುವ ದಾರಿಯಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಭವಿಷ್ಯದಲ್ಲಿ ಸಿರಿವಂತರಾಗುವವರ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿಯುವುದು ಕುತೂಹಲಕರ ಸಂಗತಿಯಾಗಿದೆ. ನಿಮ್ಮಲ್ಲಿಯೂ ಈ ಲಕ್ಷಣಗಳಿವೆಯಾ ಹಾಗೂ ನೀವೂ ಶ್ರೀಮಂತರಾಗುವ ದಾರಿಯಲ್ಲಿ ಮುನ್ನಡೆಯುತ್ತಿದ್ದೀರಾ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ ತಿಳಿದುಕೊಳ್ಳಿ.

10. ಕನ್ನಡ ನಟರ ಮಾರ್ಕೆಟ್, ರೇಟ್ ಇವತ್ತಿಗೆ ಎಷ್ಟು?

10. ಕನ್ನಡ ನಟರ ಮಾರ್ಕೆಟ್, ರೇಟ್ ಇವತ್ತಿಗೆ ಎಷ್ಟು?

ಚಿತ್ರರಂಗ ಆನ್ನೋದು ಚಿತ್ರೋದ್ಯಮವಾಗಿ ಬಹಳ ಕಾಲವಾಗಿದೆ. ಈಗೆಲ್ಲ ಯಾವ ಡೈರೆಕ್ಟರ್, ನಟ- ನಟಿಯರ ಸಿನಿಮಾಗೆ ಎಷ್ಟು 'ಡಿಮ್ಯಾಂಡ್' ಇದೆ ಅನ್ನೋದರ ಮೇಲೆ ಸಂಭಾವನೆ ಫಿಕ್ಸ್ ಮಾಡಲಾಗುತ್ತದೆ. ಥಿಯೇಟರ್ ಗಳಲ್ಲಿ ಸಿನಿಮಾದ ಕಲೆಕ್ಷನ್ ಎಷ್ಟು ಎಂಬುದಕ್ಕಿಂತ ಹೆಚ್ಚಾಗಿ ಸ್ಯಾಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ (ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಇತ್ಯಾದಿ), ಡಬ್ಬಿಂಗ್ ರೈಟ್ಸ್ (ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಮಾಡುವ ಹಕ್ಕು) ಎಷ್ಟಕ್ಕೆ ಸೇಲ್ ಆಗುತ್ತದೆ ಅನ್ನೋದೇ ಮುಖ್ಯ.

ಬಹುತೇಕ ಟಾಪ್ ಹೀರೋಗಳು ಹೀಗೆ ಪರ್ಸೆಂಟೇಜ್ ತೆಗೆದುಕೊಂಡರೆ ದರ್ಶನ್ ಈ ವಿಚಾರದಲ್ಲಿ ಭಿನ್ನ. ಅವರು ಸಂಭಾವನೆಯನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಈ ಪರ್ಸೆಂಟೇಜ್ ಗೊಡವೆಗೆ ಹೋಗಲ್ಲ ಅನ್ನೋದು ಇಂಡಸ್ಟ್ರಿ ಟಾಕ್. ಹಾಗಿದ್ದರೆ ಈಗಿನ ಸನ್ನಿವೇಶದಲ್ಲಿ ಯಾವ ಸಿನಿಮಾ ನಟರ ಸಂಭಾವನೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡ್ ಗಳಲ್ಲಿ ನೋಡಿ.

English summary

Good Returns Kannada Top 10 Stories In 2019

These are the Good returns kannada's 2019 best stories, which was reached more viewers and get reaction.
Story first published: Saturday, December 21, 2019, 15:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X