For Quick Alerts
ALLOW NOTIFICATIONS  
For Daily Alerts

SAILನಲ್ಲಿನ 5% ಸರ್ಕಾರದ ಪಾಲನ್ನು ಮಾರಲು ಯೋಜನೆ: ಸಾವಿರ ಕೋಟಿ ಸಂಗ್ರಹದ ಗುರಿ

|

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)ನ 5% ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ಕೇಂದ್ರ ಸರ್ಕಾರವು ಯೋಜನೆ ರೂಪಿಸಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಒಂದು ಸಾವಿರ ಕೋಟಿ ರುಪಾಯಿ ಆದಾಯ ಬರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

SAILನಲ್ಲಿ ಇರುವ ಸರ್ಕಾರದ ಪಾಲನ್ನು ಮಾರಾಟ ಮಾಡುವ ಉದ್ದೇಶದಿಂದ ಸಿಂಗಾಪೂರ್ ಮತ್ತು ಹಾಂಕಾಂಗ್ ನಲ್ಲಿ ರೋಡ್ ಶೋ ನಡೆಸಲು ಯೋಜಿಸಲಾಗಿದೆ. ಕೊರೊನಾ ವೈರಾಣು ಭೀತಿ ಇರುವ ಕಾರಣ ಹಾಂಕಾಂಗ್ ನಲ್ಲಿ ರೋಡ್ ಶೋ ನಡೆಸುವುದು ಅನುಮಾನ ಎನ್ನಲಾಗುತ್ತಿದೆ.

ಎಲ್‌ಐಸಿ ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲು ಆದ್ಯತೆ ನೀಡಲಾಗುವುದು: ಅನುರಾಗ್ ಠಾಕೂರ್ಎಲ್‌ಐಸಿ ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲು ಆದ್ಯತೆ ನೀಡಲಾಗುವುದು: ಅನುರಾಗ್ ಠಾಕೂರ್

SAILನಲ್ಲಿ ಸರ್ಕಾರದ ಪಾಲು ಶೇಕಡಾ 75ರಷ್ಟಿದೆ. ಈ ಹಿಂದೆ 2014ರ ಡಿಸೆಂಬರ್ ನಲ್ಲಿ 5% ಪಾಲನ್ನು ಮಾರಾಟ ಮಾಡಿತ್ತು. ಸದ್ಯದ ಮಾರುಕಟ್ಟೆ ಬೆಲೆಯಲ್ಲಿ ಹೇಳುವುದಾದರೆ, ಐದು ಪರ್ಸೆಂಟ್ ನಷ್ಟು ಪಾಲನ್ನು ಮಾರಾಟ ಮಾಡುವ ಮೂಲಕ ಒಂದು ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಬಹುದು. ಈ ಕಂಪೆನಿಯ ಷೇರು ಶುಕ್ರವಾರ ಷೇರು ಮಾರುಕಟ್ಟೆ ವಹಿವಾಟು ಕೊನೆಗೊಳಿಸಿದ ಸಮಯಕ್ಕೆ ಒಂದು ಷೇರಿಗೆ ರು. 48.65 ಇತ್ತು.

SAILನ  5% ಸರ್ಕಾರದ ಪಾಲನ್ನು ಮಾರಲು ಯೋಜನೆ: 1000 ಕೋಟಿ ಸಂಗ್ರಹ ಗುರಿ

ಇದೇ ಆರ್ಥಿಕ ವರ್ಷದಲ್ಲಿ ವ್ಯವಹಾರ ಚುಕ್ತಾ ಮಾಡಲು ಪ್ರಯತ್ನಿಸಬಹುದು. ಏಕೆಂದರೆ 65,000 ಕೋಟಿ ಬಂಡವಾಳ ಹಿಂತೆಗೆತದ ಗುರಿ ಹಾಕಿಕೊಂಡಿರುವ ಸರ್ಕಾರ, ಅದಕ್ಕೆ ಭಾರೀ ಪ್ರಯತ್ನ ನಡೆಸುತ್ತಿದೆ. 2020-21ನೇ ಸಾಲಿಗೆ 1.20 ಲಕ್ಷ ಕೋಟಿ ರುಪಾಯಿ ಬಂಡವಾಳ ಹಿಂತೆಗೆತದ ಗುರಿ ಹಾಕಿಕೊಂಡಿದೆ ಸರ್ಕಾರ.

ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ ಲಿಮಿಟೆಡ್ ನ ಹತ್ತು ಪರ್ಸೆಂಟ್ ಷೇರನ್ನು ಒಎಫ್ ಎಸ್ ಮೂಲಕ ಸರ್ಕಾರ ಯೋಜನೆ ರೂಪಿಸಿದೆ. ಅದರಲ್ಲಿ ಸರ್ಕಾರದ ಪಾಲು 74.50% ಇದೆ. ಹತ್ತು ಪರ್ಸೆಂಟ್ ಷೇರು ಮಾರಾಟ ಮಾಡಿದರೆ ಅದರಿಂದ ಸರ್ಕಾರಕ್ಕೆ ಇನ್ನೂರು ಕೋಟಿ ರುಪಾಯಿ (ಸದ್ಯದ ಮಾರುಕಟ್ಟೆ ಬೆಲೆಯ ಅಂದಾಜಿನಂತೆ) ಆದಾಯ ಬರಬಹುದು.

English summary

Government Planning To Sell 5 Percent Stake In SAIL

Union government planning to sell SAIL 5% stake and to collect 1,000 crore rupees. Here is the details.
Story first published: Sunday, February 9, 2020, 18:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X