For Quick Alerts
ALLOW NOTIFICATIONS  
For Daily Alerts

ಕರ್ನಾಟದಲ್ಲಿ 3 ವರ್ಷದಲ್ಲಿ 30 ಸಾವಿರ ಕೋಟಿ ರು. ಮೊಬೈಲ್ ಉತ್ಪಾದನೆ, 1.2 ಲಕ್ಷ ಉದ್ಯೋಗ ಸೃಷ್ಟಿ

|

ಕರ್ನಾಟಕದ ಹೊಸ ಕೈಗಾರಿಕೆ ನೀತಿಯಿಂದಾಗಿ 2023ರ ಹೊತ್ತಿಗೆ ರಾಜ್ಯದಲ್ಲಿ 30 ಸಾವಿರ ಕೋಟಿ ರುಪಾಯಿಯಷ್ಟು ಮೊಬೈಲ್ ಫೋನ್ ಉತ್ಪಾದನೆ ಮತ್ತು 1.2 ಲಕ್ಷ ಉದ್ಯೋಗ ಸೃಷ್ಟಿಸುತ್ತದೆ ಎಂದು ಮೊಬೈಲ್ ಹ್ಯಾಂಡ್ ಸೆಟ್ ಅಂಡ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ICEA ಭಾನುವಾರ ಹೇಳಿದೆ.

ಆಗಸ್ಟ್ ನಲ್ಲಿ ಹೊಸ ಕೈಗಾರಿಕೆ ನೀತಿಯನ್ನು (NIP) 2020- 25 ಕರ್ನಾಟಕ ಘೋಷಿಸಿತು. ಅದರಲ್ಲಿ ಮೊಬೈಲ್ ಉತ್ಪಾದನೆಗೆ ಪ್ರೋತ್ಸಾಹಧನ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಇಂಡಿಯಾ ಸೆಲ್ಯುಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್(ICEA)ಗೆ ಆಪಲ್, ವಿನ್ ಸ್ಟ್ರನ್, ಲಾವಾ ಮತ್ತಿತರ ಕಂಪೆನಿಗಳು ಸದಸ್ಯವಾಗಿವೆ.

ಮೇಕ್ ಇನ್ ಕರ್ನಾಟಕ: 6 ತಿಂಗಳಲ್ಲಿ 487 ಹೊಸ ಉತ್ಪಾದನಾ ಘಟಕಗಳ ಕಾರ್ಯಾಚರಣೆ ಪ್ರಾರಂಭಮೇಕ್ ಇನ್ ಕರ್ನಾಟಕ: 6 ತಿಂಗಳಲ್ಲಿ 487 ಹೊಸ ಉತ್ಪಾದನಾ ಘಟಕಗಳ ಕಾರ್ಯಾಚರಣೆ ಪ್ರಾರಂಭ

ಕಂಪೆನಿಗಳ ವಾರ್ಷಿಕ ವಹಿವಾಟಿನ ಒಂದು ಪರ್ಸೆಂಟ್ ನಷ್ಟನ್ನು ಪ್ರೋತ್ಸಾಹಧನ ನೀಡಲಾಗುತ್ತದೆ. ಅದು ಕೂಡ ಐದು ವರ್ಷದ ಅವಧಿಗೆ. ಇದು ಕರ್ನಾಟಕ ಸರ್ಕಾರದ ಸ್ವಾಗತಾರ್ಹ ಹಾಗೂ ದಿಟ್ಟ ನಡೆ ಎಂದು ICEA ಹೇಳಿದೆ.

ಕರ್ನಾಟಕದಲ್ಲಿ 2500 ಕೋಟಿ ಮೌಲ್ಯದ ಮೊಬೈಲ್ ಉತ್ಪಾದನೆ

ಕರ್ನಾಟಕದಲ್ಲಿ 2500 ಕೋಟಿ ಮೌಲ್ಯದ ಮೊಬೈಲ್ ಉತ್ಪಾದನೆ

ಇಂಥ ಆರಂಭದ ಪ್ರಯತ್ನಗಳು ಎಲೆಕ್ಟ್ರಾನಿಕ್ಸ್ ಸಿಸೃಮ್ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ (ESDM) ವಲಯ ಬೆಳೆಯಲು ಪ್ರೋತ್ಸಾಹ ನೀಡುತ್ತವೆ. ಸದ್ಯಕ್ಕೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು 1ರಿಂದ 1.5% (2500 ಕೋಟಿ ರುಪಾಯಿ) ಇದೆ. ಇದು 2023ರ ಹೊತ್ತಿಗೆ 7% ಅಥವಾ 30,000 ಕೋಟಿ ರುಪಾಯಿ ದಾಟುತ್ತದೆ ಎಂಬ ನಿರೀಕ್ಷೆ ಇದೆ ಎಂದು ICEA ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ.

2023ರ ಹೊತ್ತಿಗೆ 1.2 ಲಕ್ಷ ಉದ್ಯೋಗ ಸೃಷ್ಟಿ

2023ರ ಹೊತ್ತಿಗೆ 1.2 ಲಕ್ಷ ಉದ್ಯೋಗ ಸೃಷ್ಟಿ

ಇನ್ನು ಇದರಿಂದ ಉದ್ಯೋಗ ಸೃಷ್ಟಿಗೆ ಸಹಾಯ ಆಗುತ್ತದೆ. 2023ರ ಹೊತ್ತಿಗೆ 1.2 ಲಕ್ಷ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ (SGDP) 16 ಲಕ್ಷ ಕೋಟಿ ರುಪಾಯಿ ಇದೆ. ಭಾರತದ ಚಿಪ್ ಡಿಸೈನರ್ಸ್ ಗಳಲ್ಲಿ 70ರಷ್ಟು ರಾಜ್ಯದಲ್ಲಿ ಇದೆ.

ಹೊಸ ಕೈಗಾರಿಕೆ ನೀತಿಯಡಿ ಹಲವು ಸೌಲಭ್ಯ

ಹೊಸ ಕೈಗಾರಿಕೆ ನೀತಿಯಡಿ ಹಲವು ಸೌಲಭ್ಯ

ಹೊಸ ಕೈಗಾರಿಕೆ ನೀತಿ ಅಡಿಯಲ್ಲಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ, ಭೂ ಪರಿವರ್ತನೆ ಶುಲ್ಕ, ವಿದ್ಯುತ್ ಶುಲ್ಕದಿಂದ ಮರುಪಾವತಿ ಆಗುತ್ತದೆ. 2020ರ ಮೇ ತಿಂಗಳಲ್ಲಿ ಎರಡು ಸಾವಿರದಷ್ಟಿರುವ ಸಿಬ್ಬಂದಿಯನ್ನು ಮುಂದಿನ ಆರ್ಥಿಕ ವರ್ಷದ ಕೊನೆಗೆ ಇಪ್ಪತ್ತು ಸಾವಿರಕ್ಕೆ ಆಲೋಚಿಸುವ ಯೋಜನೆ ಹಾಕಿಕೊಂಡಿದೆ.

English summary

Govt New Industrial Policy To Push Mobile Production In Karnataka To 30000 Cr

The new industrial policy of Karnataka government is expected to push mobile production in value terms in the state to Rs 30,000 crore and also more than 1 lakh jobs by 2023, ICEA said on Sunday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X