For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾ ವಿಮಾನ ಹಾರಾಟ 15 ದಿನ ಅಮಾನತು ಮಾಡಿದ ಹಾಂಕಾಂಗ್ ಸರ್ಕಾರ

|

ಏರ್ ಇಂಡಿಯಾ ವಿಮಾನದ ಹಾರಾಟವನ್ನು ಹಾಂಕಾಂಗ್ ಹದಿನೈದು ದಿನ ಅಮಾನತು ಮಾಡಿದೆ. ಕೊರೊನಾ ಬಾಧಿತ ಪ್ರಯಾಣಿಕರನ್ನು ವಿಪರೀತ ಸಂಖ್ಯೆಯಲ್ಲಿ ಕರೆದೊಯ್ದ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆಗಸ್ಟ್ 18ರಿಂದ 31ನೇ ತಾರೀಕಿನ ತನಕ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಹಾಂಕಾಂಗ್ ಸರ್ಕಾರ ಅಮಾನತು ಮಾಡಿದೆ.

 

ಕಾಯಿಲೆ ನಿಯಂತ್ರಣ ಹಾಗೂ ತಡೆ ನಿಯಮಾವಳಿಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಮಾಡಿರುವ ವರದಿಯನ್ನು ಸರ್ಕಾರದ ಮೂಲಗಳು ಉದಾಹರಿಸಿವೆ. ವಿಮಾನಕ್ಕೆ ಪ್ರಯಾಣಿಕರು ಹತ್ತುವ ಮುನ್ನ ಸರಿಯಾಗಿ ಕೊರೊನಾ ಪರೀಕ್ಷೆ ಮಾಡಿಸಿಲ್ಲ. ಆದ್ದರಿಂದ ಆಗಸ್ಟ್ 14ನೇ ತಾರೀಕು ದೆಹಲಿಯಿಂದ ಹಾಂಕಾಂಗ್ ಗೆ ಬಂದವರಲ್ಲಿ ಹನ್ನೊಂದು ಮಂದಿಗೆ ಕೊರೊನಾ ಇತ್ತು ಎಂದು ಹಾಂಕಾಂಗ್ ಸರ್ಕಾರ ಹೇಳಿದೆ.

 

ಏರ್ ಇಂಡಿಯಾ ಸಿಬ್ಬಂದಿಗೆ ಸಂಬಳ ಇಲ್ಲದೆ ಐದು ವರ್ಷದ ತನಕ ಕಡ್ಡಾಯ ರಜಾಏರ್ ಇಂಡಿಯಾ ಸಿಬ್ಬಂದಿಗೆ ಸಂಬಳ ಇಲ್ಲದೆ ಐದು ವರ್ಷದ ತನಕ ಕಡ್ಡಾಯ ರಜಾ

ತುರ್ತು ಸಾರ್ವಜನಿಕ ಆರೋಗ್ಯ ನಿಯಮಾವಳಿ ಅಡಿಯಲ್ಲಿ ಇದೇ ಮೊದಲ ಬಾರಿಗೆ ಏರ್ ಲೈನ್ ವೊಂದಕ್ಕೆ ಹಾಂಕಾಂಗ್ ನಿಂದ ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳು ಸಂಪರ್ಕಿಸಿದಾಗ ಏರ್ ಇಂಡಿಯಾದ ವಕ್ತಾರರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಏರ್ ಇಂಡಿಯಾ ವಿಮಾನ ಹಾರಾಟ 15 ದಿನ ಅಮಾನತು ಮಾಡಿದ ಹಾಂಕಾಂಗ್ ಸರ್ಕಾರ

ಆದರೆ, ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ತಿಳಿಸಿರುವಂತೆ, ಮುಂದಿನ ದಿನಗಳಲ್ಲಿ ವೇಳಾಪಟ್ಟಿಯಂತೆ ಹಾಂಕಾಂಗ್ ಗೆ ತೆರಳಬೇಕಿದ್ದ ಕೆಲವು ವಿಮಾನಗಳು ರದ್ದಾಗಿವೆ.

English summary

Hong Kong Government Suspends Air India Flights For 15 Days

Due to poor pre Covid test of passengers, Hong Kong government suspends Air India fly for 15 days.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X