For Quick Alerts
ALLOW NOTIFICATIONS  
For Daily Alerts

ಹಿಂದಿನ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಿದ್ದರೆ ಎಷ್ಟು ಲಾಭವಾಗಿದೆ ಗೊತ್ತಾ?

|

ಕಳೆದ ವರ್ಷ ಅಕ್ಷಯ ತೃತೀಯಕ್ಕೆ ನೀವೇನಾದರೂ ಚಿನ್ನ ಖರೀದಿ ಮಾಡಿದ್ದರೆ ಈ ದಿನಕ್ಕೆ (ಒಂದು ವರ್ಷದ ನಂತರ ಅಕ್ಷಯ ತೃತೀಯಕ್ಕೆ) 40 ಪರ್ಸೆಂಟ್ ಗೂ ಹೆಚ್ಚೂ ಲಾಭದಲ್ಲಿ ಇರುತ್ತಿದ್ದಿರಿ. ಕೊರೊನಾ ಬಿಕ್ಕಟ್ಟು, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ತೈಲ ಬೆಲೆಯಲ್ಲಿನ ಭಾರೀ ಇಳಿಕೆ, ವಿಶ್ವದಾದ್ಯಂತ ಕೇಂದ್ರ ಬ್ಯಾಂಕ್ ಗಳು ಘೋಷಣೆ ಮಾಡಿರುವ ಆರ್ಥಿಕ ಉತ್ತೇಜನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ.

ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿದೆ. ಹಾಗಂತ ಇದು ಇಲ್ಲಿಗೆ ಕೊನೆ ಅಂತಲ್ಲ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತದ ಭೀತಿ ಇರುವ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಬಗ್ಗೆ ಸಕಾರಾತ್ಮಕವಾದ ಮಾತುಗಳನ್ನೇ ಆಡುತ್ತಾರೆ ತಜ್ಞರು. ಅಂದರೆ ಈಗಿನ ದರದಲ್ಲೂ ಚಿನ್ನದ ಹೂಡಿಕೆ ಲಾಭದಾಯಕವೇ ಎನ್ನುತ್ತಾರೆ.

ಚಿನ್ನದ ಬೆಲೆಯಲ್ಲಿ 43% ಗೂ ಹೆಚ್ಚು ಏರಿಕೆ

ಚಿನ್ನದ ಬೆಲೆಯಲ್ಲಿ 43% ಗೂ ಹೆಚ್ಚು ಏರಿಕೆ

ಡಾಲರ್ ಲೆಕ್ಕದಲ್ಲಿ ಹೇಳಬೇಕು ಅಂದರೆ, ಈ ವರ್ಷದಲ್ಲಿ ಜನವರಿ 1, 2020ರಿಂದ ಇಲ್ಲಿಯ ತನಕ 14% ಬೆಲೆ ಏರಿಕೆ ಆಗಿದೆ. ಕಳೆದ ಹನ್ನೆರಡು ತಿಂಗಳ ಅವಧಿಯಲ್ಲಿ 34%ಗೂ ಹೆಚ್ಚು ಏರಿಕೆ ಕಂಡಿದೆ. ಅದನ್ನೇ ರುಪಾಯಿ ಲೆಕ್ಕದಲ್ಲಿ ನೋಡುವುದಾದರೆ 2019ರ ಅಕ್ಷಯ ತೃತೀಯದ ನಂತರ ಇಲ್ಲಿಯವರೆಗೆ 43% ಗೂ ಹೆಚ್ಚು ಏರಿಕೆ ಕಂಡಿದೆ. ಜ್ಯುವೆಲ್ಲರ್ ಗಳ ಬಳಿ ಹಾಗೂ ಮನೆಗಳಲ್ಲಿ ಇರುವ ಚಿನ್ನದ ಮೌಲ್ಯವು ಅದ್ಭುತ ಏರಿಕೆ ಕಂಡಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಮ್ ಗೆ 3200/3300 ರುಪಾಯಿ ಇತ್ತು. ಸದ್ಯಕ್ಕೆ 4600 ರುಪಾಯಿ ಮಟ್ಟದಲ್ಲಿ ಇದೆ. ವರ್ಷದ ಹಿಂದೆ ಚಿನ್ನದ ಮೇಲೆ ಹೂಡಿಕೆ ಮಾಡಿದವರ ಹಣದಲ್ಲಿ 43 ಪರ್ಸೆಂಟ್ ಏರಿಕೆಯಾಗಿದೆ.

ಈ ವರ್ಷದ ಕೊನೆಗೆ 50 ಸಾವಿರ ರುಪಾಯಿ ತಲುಪುವ ನಿರೀಕ್ಷೆ

ಈ ವರ್ಷದ ಕೊನೆಗೆ 50 ಸಾವಿರ ರುಪಾಯಿ ತಲುಪುವ ನಿರೀಕ್ಷೆ

ಆದರೆ, ಈ ವರ್ಷ ಲಾಕ್ ಡೌನ್ ನ ಕಾರಣಕ್ಕೆ ಅಕ್ಷಯ ತೃತೀಯದಂದು ಚಿನ್ನದ ಬೇಡಿಕೆ ಗಣನೀಯವಾಗಿ ಇಳಿಕೆ ಆಗಿದೆ. ಕೊರೊನಾ ವೈರಾಣು ತಂದಿರುವ ಬಿಕ್ಕಟ್ಟು ಆಭರಣ ವ್ಯಾಪಾರಿಗಳಿಗೆ ಇನ್ನಿಲ್ಲದಂತೆ ಪೆಟ್ಟು ನೀಡಿದೆ. ಇನ್ನು ಬೆಲೆ ವಿಪರೀತ ಹೆಚ್ಚಾಗಿರುವುದರಿಂದ ಫಿಸಿಕಲ್ ಚಿನ್ನಕ್ಕೆ ಬೇಡಿಕೆ ಕೂಡ ಕಡಿಮೆ ಆಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ದೇಶೀಯ ಚಿನ್ನದ ಬೇಡಿಕೆಯಲ್ಲಿ ಮಹತ್ತರವಾದ ಇಳಿಕೆಯಾಗಿದೆ ಎನ್ನುತ್ತಾರೆ ಆಭರಣ ಮಾರಾಟಗಾರರು. ಆದರೆ ಇಷ್ಟೆಲ್ಲ ನಕಾರಾತ್ಮಕ ಅಂಶಗಳನ್ನು ಪ್ರಸ್ತಾವ ಮಾಡಿದರೂ ಈ ವರ್ಷದ ಕೊನೆಯ ಹೊತ್ತಿಗೆ ಹತ್ತು ಗ್ರಾಮ್ ಚಿನ್ನದ ಬೆಲೆ 50 ಸಾವಿರ ರುಪಾಯಿ ತಲುಪುತ್ತದೆ ಎಂಬ ನಿರೀಕ್ಷೆ ಇದೆ.

ಆನ್ ಲೈನ್ ಖರೀದಿಗೆ ಅವಕಾಶ

ಆನ್ ಲೈನ್ ಖರೀದಿಗೆ ಅವಕಾಶ

ಕೇಂದ್ರ ಗೃಹ ಸಚಿವಾಲಯವು ಶುಕ್ರವಾರದಂದು ಲಾಕ್ ಡೌನ್ ನಿಂದ ಸ್ವಲ್ಪ ಮಟ್ಟಿಗಿನ ವಿನಾಯಿತಿ ನೀಡಿ, ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ವಿನಾಯಿತಿ ನೀಡುವ ನಿರ್ಧಾರ ಆಯಾ ರಾಜ್ಯ ಸರ್ಕಾರಕ್ಕೆ ಬಿಡಲಾಗಿದೆ. 2020ರ ಅಕ್ಷಯ ತೃತೀಯ ಏಪ್ರಿಲ್ 26ನೇ ತಾರೀಕು ಭಾನುವಾರ ಇದೆ. ಕೆಲವು ಜ್ಯುವೆಲ್ಲರ್ ಗಳು ಗ್ರಾಹಕರಿಗೆ ಆನ್ ಲೈನ್ ಖರೀದಿ ಅವಕಾಶ ಮಾಡಿಕೊಟ್ಟಿವೆ. ಆದರೆ ಲಾಕ್ ಡೌನ್ ನಿರ್ಬಂಧ ಹಾಗೂ ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಿರುವುದರಿಂದ ದೊಡ್ಡ ಮಟ್ಟದ ಬೇಡಿಕೆ ಬರಬಹುದು ಎಂಬ ನಿರೀಕ್ಷೆ ಇಲ್ಲ. ಕಳೆದ ವರ್ಷ ಅಕ್ಷಯ ತೃತೀಯಕ್ಕೆ 23 ಟನ್ ಚಿನ್ನವನ್ನು ಮಾರಾಟ ಮಾಡಲಾಗಿತ್ತಂತೆ. ಆದರೆ ಈ ಬಾರಿ ಆ ಸಂಖ್ಯೆಯ ಹತ್ತಿರ ಕೂಡ ಸುಳಿಯಲು ಸಾಧ್ಯವಿಲ್ಲ ಎಂಬುದು ವರ್ತಕರ ಅಭಿಪ್ರಾಯ.

English summary

How Much Profit For A Person Who Bought Gold On Last Year Akshaya Tritiya?

Here is the calculation on percentage of profit to a person who bought gold for last year Akshaya Tritiya.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X