For Quick Alerts
ALLOW NOTIFICATIONS  
For Daily Alerts

ಐಎಂಎ ಜ್ಯುವೆಲ್ಲರಿ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಸಿಬಿಐನಿಂದ ಬಂಧನ

|

ಐ- ಮಾನೆಟರಿ ಅಡ್ವೈಸರಿ (ಐಎಂಎ) ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಭಾನುವಾರ ಸಿಬಿಐನಿಂದ ಬಂಧಿಸಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಭಾನುವಾರ ಬೆಳಗ್ಗೆ ಸಂಸ್ಥೆಯ ಕಚೇರಿಗೆ ರೋಷನ್ ಬೇಗ್ ಅವರನ್ನು ಕರೆಸಿಕೊಳ್ಳಲಾಗಿತ್ತು. "ಪುರಾವೆಗಳು ಆಧರಿಸಿ ಅವರನ್ನು ಬಂಧಿಸಲಾಗಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಾಜಿನಗರದ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಮೂಲದ ಐಎಂಎ ಹಾಗೂ ಅದರ ಸಮೂಹ ಸಂಸ್ಥೆಗಳ ಮೇಲ್ ಲಕ್ಷಾಂತರ ಮಂದಿಗೆ ವಂಚನೆ ಮಾಡಿದ ಆರೋಪ ಇದೆ.

ವಾಟ್ಸ್ ಆಪ್ ಕರೆ, ಸಂದೇಶದ ಮೂಲಕ ವಂಚಿಸುವವರ ಬಗ್ಗೆ ಎಸ್ ಬಿಐನಿಂದ ಎಚ್ಚರಿಕೆ

 

ಐಎಂಎ ಜ್ಯುವೆಲ್ಲರಿ ಹಗರಣ 2019ರ ಜೂನ್ ನಲ್ಲಿ ಬಯಲಿಗೆ ಬಿತ್ತು. ಆ ಸಂದರ್ಭದಲ್ಲಿ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ಹೂಡಿಕೆದಾರರ ನೂರಾರು ಕೋಟಿ ರುಪಾಯಿ ವಂಚನೆಯಾದ ಹಿನ್ನೆಲೆಯಲ್ಲಿ ಹಗರಣದ ಪ್ರಮುಖ ಆರೋಪಿ, ಐಎಂಎ ಜ್ಯುವೆಲ್ಲರಿ ಮಾಲೀಕ ಮೊಹ್ಮದ್ ಮನ್ಸೂರ್ ಖಾನ್ ನನ್ನು ಬಂಧಿಸಲಾಯಿತು. ಆತ ತನಗೆ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳು ವಂಚನೆ ಮಾಡಿದ್ದಾರೆ ಹಾಗೂ ಅವರಿಗೆ ಲಂಚ ನೀಡಿದ್ದಾಗಿ ಹೇಳಿದ್ದ.

ಐಎಂಎ ಜ್ಯುವೆಲ್ಲರಿ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಸಿಬಿಐನಿಂದ ಬಂಧನ

ಕರ್ನಾಟಕ ಹೈಕೋರ್ಟ್ ಮನ್ಸೂರ್ ಅಲಿ ಖಾನ್‌ಗೆ ಬುಧವಾರ (ನವೆಂಬರ್ 18, 2020)ಷರತ್ತು ಬದ್ಧ ಜಾಮೀನು ನೀಡಿದೆ. ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಮಾತ್ರ ಜಾಮೀನು ಸಿಕ್ಕಿದ್ದು, ಬಿಡುಗಡೆ ಭಾಗ್ಯವಿಲ್ಲ.

English summary

IMA Multi Crore Scam: Former Minister Roshan Baig Arrested By CBI

Former minister Roshan Baig arrested by CBI on Sunday related to IMA multi crore scam.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X