For Quick Alerts
ALLOW NOTIFICATIONS  
For Daily Alerts

ಭಾರತದ ಸರಕು ರಫ್ತು ಸತತ 2ನೇ ತಿಂಗಳು ಏರಿಕೆ

|

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ತತ್ತರಿಸಿದ್ದ ಭಾರತವು ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದ್ದು, ಸತತ ಎರಡನೇ ತಿಂಗಳು ದೇಶದ ಸರಕು ರಫ್ತು ಏರಿಕೆಗೊಂಡಿದೆ. ಇದೇ ಸಮಯದಲ್ಲಿ ವ್ಯಾಪಾರ ಕೊರತೆಯು ಕಡಿಮೆಯಾಗಿದೆ.

ಆರ್ಥಿಕ ಚಟುವಟಿಕೆಗೆಳ ಪುನರುಜ್ಜೀವನದಿಂದಾಗಿ ಭಾರತದಲ್ಲಿ ಸರಕು ರಫ್ತು ವರ್ಷದಿಂದ ವರ್ಷಕ್ಕೆ ಶೇಕಡಾ 5.37 ರಷ್ಟು ಏರಿಕೆಯಾಗಿ 2021 ರ ಜನವರಿಯಲ್ಲಿ 27.24 ಬಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 25.85 ಬಿಲಿಯನ್ ಡಾಲರ್‌ಗಳಷ್ಟಿತ್ತು. ಔಷಧೀಯ ವಸ್ತುಗಳು, ಕಬ್ಬಿಣದ ಅದಿರು ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿನ ಬೆಳವಣಿಗೆಯಿಂದಾಗಿ ಇದು ಸಾಧ್ಯವಾಗಿದೆ.

ಆದಾಗ್ಯೂ, 2020-21ರ ಏಪ್ರಿಲ್-ಜನವರಿ ಅವಧಿಯಲ್ಲಿ ಒಟ್ಟು ರಫ್ತು ಶೇಕಡಾ 13.66 ರಷ್ಟು ನಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 264.13 ಬಿಲಿಯನ್ ಡಾಲರ್‌ಗೆ ಹೋಲಿಸಿದರೆ 228.04 ಬಿಲಿಯನ್ ಆಗಿತ್ತು.

ಭಾರತದ ಸರಕು ರಫ್ತು ಸತತ 2ನೇ ತಿಂಗಳು ಏರಿಕೆ

ಮರ್ಚಂಡೈಸ್ ಆಮದು ಸಹ ಸತತ ಎರಡನೇ ತಿಂಗಳಲ್ಲಿ ಸಕಾರಾತ್ಮಕವಾಗಿ ಉಳಿದಿದೆ. ಇದು 2020 ರ ಜನವರಿಯಲ್ಲಿ 41.15 ಬಿಲಿಯನ್ ಡಾಲರ್‌ಗೆ ಹೋಲಿಸಿದರೆ ಶೇಕಡಾ 2.05ರಷ್ಟು ಏರಿಕೆಯಾಗಿ 41.99 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಒಂಬತ್ತು ತಿಂಗಳ ನಂತರ ಆಮದು ಶೇಕಡಾ 7.6ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿ 42.6 ಬಿಲಿಯನ್ ಡಾಲರ್‌ಗೆ ತಲುಪಿದೆ.

ಳೆದ ವರ್ಷದ ಇದೇ ಅವಧಿಯಲ್ಲಿ ಇದು 405.33 ಬಿಲಿಯನ್ ಡಾಲರ್‌ಗಳಿಗೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜನವರಿ ಅವಧಿಯಲ್ಲಿ ಆಮದು 25.92 ರಷ್ಟು ಇಳಿದು 300.26 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

English summary

India's Export Rise 5.37% In January: Trade Deficit Narrows To 14.75 Billion

India's merchandise exports rose for the second consecutive month in January, while the trade deficit narrowed during the same period.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X