For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಟಿಸಿಎಸ್‌ ಅಂದಾಜು ಲಾಭ ಕುಸಿತ, ಆದ್ರೆ 1.25 ಲಕ್ಷ ಉದ್ಯೋಗಿಗಳ ನೇಮಕಾತಿ ಘೋಷಣೆ!

|

ಭಾರತದ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆಯು ಮಂಗಳವಾರ ಸುಮಾರು ಶೇಕಡ 2ರಷ್ಟು ಕುಸಿತವನ್ನು ಕಂಡಿದೆ. ಮೂರನೇ ತ್ರೈಮಾಸಿಕದಲ್ಲಿ ತನ್ನ ಲಾಭದ ಅಂದಾಜಿಗಿಂತ ಕಡಿಮೆ ಲಾಭವನ್ನು ಟಿಸಿಎಸ್ ಪಡೆದಿದೆ. ಪ್ರಮುಖವಾಗಿ ಯುರೋಪ್‌ನಲ್ಲಿ ಲಾಭದಲ್ಲಿ ಕುಸಿತವನ್ನು ಕಂಡಿದೆ. ಆದರೆ ಈ ನಡುವೆ ಸೋಮವಾರ ನೇಮಕಾತಿ ಘೋಷಣೆ ಮಾಡಿದೆ.

ಭಾರತದ ಅತೀ ದೊಡ್ಡ ಐಟಿ ಸೇವಾ ಸಂಸ್ಥೆಯಾದ ಟಿಸಿಎಸ್ ಷೇರುಗಳು ಸುಮಾರು ಶೇಕಡ 2.4ರಷ್ಟು ಕುಸಿದು, 3,241.15 ರೂಪಾಯಿಗೆ ತಲುಪಿದೆ. ಸೋಮವಾರ ತನ್ನ ವರದಿ ಘೋಷಣೆ ಬಳಿಕ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಮಿಂಚಿತ್ತು. ಷೇರುಗಳು ಸುಮಾರು ಶೇಕಡ 3.4ರಷ್ಟು ಏರಿಕೆಯಾಗಿತ್ತು. ಆದರೆ ಮಂಗಳವಾರ ಕುಸಿದಿದೆ. ಈ ಸಮಯಕ್ಕೆ ಟಿಸಿಎಸ್ ಷೇರು ಸುಮಾರು ಶೇಕಡ 1.75ರಷ್ಟು ಕುಸಿದು 3,261.75ಕ್ಕೆ ತಲುಪಿದೆ.

ಸೆನ್ಸೆಕ್ಸ್ ಟಾಪ್-10: 79,798.3 ಕೋಟಿ ರೂ ಮೌಲ್ಯ ಹೆಚ್ಚಳ; ಧರ್ಮರಾಜ್ ಕ್ರಾಪ್ ಗಾರ್ಡ್‌ನ ಐಪಿಒಸೆನ್ಸೆಕ್ಸ್ ಟಾಪ್-10: 79,798.3 ಕೋಟಿ ರೂ ಮೌಲ್ಯ ಹೆಚ್ಚಳ; ಧರ್ಮರಾಜ್ ಕ್ರಾಪ್ ಗಾರ್ಡ್‌ನ ಐಪಿಒ

ಅಂದಾಜು ಮಾಡಿದ ಲಾಭದಲ್ಲಿ ಕುಸಿತವೇ ಕಂಡಿದ್ದರೂ ಕೂಡಾ ಟಿಸಿಎಸ್‌ ತಮ್ಮ ಸಂಸ್ಥೆಯಲ್ಲಿ ನೇಮಕಾತಿಯನ್ನು ಘೋಷಣೆ ಮಾಡಿದೆ. ಹೌದು, ಟಿಸಿಎಸ್ ಸೋಮವಾರ ತ್ರೈಮಾಸಿಕ ವರದಿ ಮಂಡನೆ ವೇಳೆ ಹಣಕಾಸು ವರ್ಷ 2024ರಲ್ಲಿ ಸುಮಾರು 1.25 ಲಕ್ಷ ಉದ್ಯೋಗಿಗಳ ನೇಮಕಾತಿಯನ್ನು ಘೋಷಣೆ ಮಾಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಡಿಸೆಂಬರ್ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿತ

ಡಿಸೆಂಬರ್ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿತ

ಟಿಸಿಎಸ್ ಸಂಸ್ಥೆಯು ಸೋಮವಾರ ತಮ್ಮ ತ್ರೈಮಾಸಿಕ ವರದಿಯನ್ನು ಮಂಡಿಸಿದೆ. ಈ ವರದಿಯಲ್ಲಿ ಡಿಸೆಂಬರ್ 2022ರ ತ್ರೈಮಾಸಿಕದಲ್ಲಿ ತಮ್ಮ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು ಇಳಿಕೆಯಾಗಿದೆ ಎಂದು ಸಂಸ್ಥೆಯು ಉಲ್ಲೇಖಿಸಿದೆ. ಅದಕ್ಕಾಗಿ ಹಣಕಾಸು ವರ್ಷ 2024ರಲ್ಲಿ ಸುಮಾರು 1.25 ಲಕ್ಷ ಉದ್ಯೋಗಿಗಳ ನೇಮಕಾತಿಯನ್ನು ಸಂಸ್ಥೆಯು ಘೋಷನೆ ಮಾಡಿದೆ. ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಘೋಷಣೆ ಮಾಡುತ್ತಿರುವಾಗ ಟಿಸಿಎಸ್ ನೇಮಕಾತಿಯನ್ನು ಘೋಷಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಸಂಸ್ಥೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ಸುಮಾರು 2,197 ಉದ್ಯೋಗಿಗಳ ಇಳಿಕೆ ಕಂಡು ಬಂದಿದ್ದು ಉದ್ಯೋಗಿಗಳ ಸಂಖ್ಯೆಯು 6.13 ಲಕ್ಷಕ್ಕೆ ತಲುಪಿದೆ.

6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ6 ಕಂಪನಿಗಳ 78,163 ಕೋಟಿ ರು ಮೌಲ್ಯ ಇಳಿಕೆ; RILಗೆ ಭಾರಿ ನಷ್ಟ

 ಸಂಸ್ಥೆಯ ಅಧಿಕಾರಿಗಳು ಹೇಳುವುದೇನು?

ಸಂಸ್ಥೆಯ ಅಧಿಕಾರಿಗಳು ಹೇಳುವುದೇನು?

"ನೀವು ನಮ್ಮ ಸಂಸ್ಥೆಯಲ್ಲಿ ಆಗುವ ನೇಮಕಾತಿಯನ್ನು ನೋಡಿದಾಗ ನಾವು ಸರಿಸುಮಾರು ಅಷ್ಟೇ ಮಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದೇವೆ ಎಂದು ತಿಳಿಯುತ್ತದೆ. ನಾವು ಮುಂದಿನ ವರ್ಷ 1,25,000-1,50,000 ಮಂದಿಯನ್ನು ನೇಮಕಾತಿ ಮಾಡಬೇಕಾಗುತ್ತದೆ. ಇದು ನಮ್ಮ ಸಂಸ್ಥೆಯ ಮಧ್ಯಮ ಅವಧಿ ಹಾಗೂ ದೀರ್ಘಾವಧಿ ಯೋಜನೆಗಳ ಭಾಗವಾಗಿದೆ," ಎಂದು ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ತಿಳಿಸಿದ್ದಾರೆ. "ನಾವು ಪಾಸಿಟಿವ್ ಕನ್ನೋಟವನ್ನು ಹೊಂದಿದ್ದೇವೆ. ನಾವು ನಮ್ಮ ಉದ್ಯೋಗಿಗಳು ಹಿಂಜರಿಯುವಂತೆ ಮಾಡುವುದಿಲ್ಲ. ನಾವು ಕಳೆದ ವರ್ಷ ಅಧಿಕವಾಗಿ ಹೂಡಿಕೆ ಮಾಡಿದ್ದೇವೆ. ಅದು ನಮಗೆ ಈಗ ಲಾಭ ನೀಡುತ್ತಿದೆ," ಎಂದು ವಿವರಿಸಿದ್ದಾರೆ.

 ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಯ ಬಗ್ಗೆ ಮಾಹಿತಿ

ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಯ ಬಗ್ಗೆ ಮಾಹಿತಿ

ಹಣಕಾಸು ವರ್ಷ 2022ರಲ್ಲಿ ಟಿಸಿಎಸ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆಗೆ ಸುಮಾರು 1.03 ಲಕ್ಷ ಮಂದಿ ಸೇರ್ಪಡೆಯಾದರು. ಹಣಕಾಸು ವರ್ಷ 2023ರಲ್ಲಿ ಮತ್ತೆ ಸುಮಾರು 55 ಸಾವಿರ ಮಂದಿಯನ್ನು ಟಿಸಿಎಸ್ ನೇಮಕಾತಿ ಮಾಡಿದೆ. ಆದರೂ ತಮ್ಮ ಉದ್ಯೋಗಿಗಳ ಸಂಖ್ಯೆಯಲ್ಲಿ ಸುಮಾರು 2197 ಕೊರತೆ ಇದೆ ಎಂದು ಹೇಳಿಕೊಂಡಿದದೆ. ಸಂಸ್ತೆಯ ಎಚ್‌ಆರ್ ಮಿಲಿಂದ್ ಲಕ್ಕಡ್ ಸಂಸ್ಥೆಯಲ್ಲಿ ಉದ್ಯೋಗಿಗಳ ನೇಮಕಾತಿ ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. "ಹಣಕಾಸು ವರ್ಷ 2023ರಲ್ಲಿ ಈವರೆಗೆ 42 ಸಾವಿರ ಮಂದಿಯನ್ನು ನೇಮಿಸಲಾಗಿದೆ. ಅಂದರೆ ಮೂರನೇ ತ್ರೈಮಾಸಿಕದಲ್ಲಿ ಬರೀ 7000 ಮಂದಿಯನ್ನು ನೇಮಿಸಲಾಗಿದೆ. ಮೊದಲ ಅರ್ಧವಾರ್ಷಿಕದಲ್ಲಿ 35 ಸಾವಿರ ಮಂದಿಯನ್ನು ನೇಮಿಸಲಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಇನ್ನೂ ಕೊಂಚ ಮಂದಿಯನ್ನು ನೇಮಿಸಬಹುದು," ಎಂದು ತಿಳಿಸಿದ್ದಾರೆ.

 ಅಂದಾಜು ಲಾಭ ಕುಸಿತ

ಅಂದಾಜು ಲಾಭ ಕುಸಿತ

ಟಿಸಿಎಸ್ ಮೂರನೇ ತ್ರೈಮಾಸಿಕದಲ್ಲಿ ಸುಮಾರು ಶೇಕಡ 11ರಷ್ಟು ಲಾಭವನ್ನು ಗಳಿಸಿದೆ. ಆದರೆ ಸಂಸ್ಥೆಯು ತೆರಿಗೆ ಕಡಿತದ ಬಳಿಕ ಲಭ್ಯವಾಗುವ ಲಾಭದ ಬಗ್ಗೆ ಮಾಡಿದ್ದ ಅಂದಾಜಿಗಿಂತ ಕಡಿಮೆ ಲಾಭವನ್ನು ಪಡೆದಿದೆ. ಟಿಸಿಎಸ್‌ನ ನಿವ್ವಳ ಆದಾಯವು ಕಳೆದ ವರ್ಷದ 9,769 ಕೋಟಿ ರೂಪಾಯಿಯಿಂದ ಈ ವರ್ಷ 10,846 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದರೆ ಸಂಸ್ಥೆಯು ಸುಮಾರು 11,000 ಕೋಟಿ ನಿವ್ವಳ ಆದಾಯವನ್ನು ಗಳಿಸುವ ನಿರೀಕ್ಷೆಯನ್ನು ಹೊಂದಿತ್ತು. ಮೂರನೇ ತ್ರೈಮಾಸಿಕದಲ್ಲಿ ಲಾಭವು ಶೇಕಡ 19.1ರಷ್ಟು ಹೆಚ್ಚಾಗಿ 58,229 ಕೋಟಿಗೆ ತಲುಪಿದೆ. ಕಳೆದ ವರ್ಷದಲ್ಲಿ ಸಂಸ್ಥೆಯು ಶೇಕಡ 15.4ರಷ್ಟು ಬೆಳವಣಿಗೆಯನ್ನು ಕಂಡಿದೆ, ಆದರೆ ಈ ವರ್ಷದಲ್ಲಿ ಶೇಕಡ 13.5ರಷ್ಟು ಬೆಳವಣಿಗೆಯನ್ನು ಕಂಡಿದೆ.

English summary

India’s TCS falls after profit miss, but to hire over 1.25 lakh in FY24

India’s Tata Consultancy Services fell over 2% on Tuesday. meanwhile, tcs announced that it will be hiring over 1.25 lakh staff in FY24.
Story first published: Tuesday, January 10, 2023, 13:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X