For Quick Alerts
ALLOW NOTIFICATIONS  
For Daily Alerts

ಪಾಟ್ನಾ-ಬೆಂಗಳೂರು ನಡುವೆ ವಿಶೇಷ ರೈಲು, ಇಲ್ಲಿದೆ ವಿವರ

|

ಪಾಟ್ನಾ ಹಾಗೂ ಬೆಂಗಳೂರು ನಡುವೆ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ ಇದೆ. ಭಾರತೀಯ ರೈಲ್ವೆ ಬೆಂಗಳೂರು ಹಾಗೂ ಪಾಟ್ನಾ ನಡುವೆ ವಿಶೇಷ ರೈಲನ್ನು ಘೋಷಣೆ ಮಾಡಿದೆ, ಡಿಸೆಂಬರ್ 15, 2022ರಿಂದ ಈ ವಿಶೇಷ ರೈಲು ಆರಂಭವಾಗಲಿದೆ.

 

ಎರಡು ನಗರಗಳ ನಡುವೆ ಈ ರೈಲನ್ನು ಆರಂಭ ಮಾಡಲಾಗಿದ್ದು ಜನರಿಗೆ ಓಡಾಟಕ್ಕೆ ಇದು ಸಹಾಯವಾಗಿಲಿದೆ. ಭಾರತೀಯ ರೈಲ್ವೆಯು ಈ ರೈಲುಗಳ ಸಮಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರೈಲು ಯಾವ ಸಂದರ್ಭದಲ್ಲಿ ಓಡಾಟ ಆರಂಭ ಮಾಡಲಿದೆ, ಯಾವಾಗ ತಲುಪಲಿದೆ ಎಂಬ ಬಗ್ಗೆ ವಿವರಣೆಯನ್ನು ಕೂಡಾ ನೀಡಿದೆ.

ಮುಂಜಾನೆ ಪಾಟ್ನಾದಿಂದ ಹೊರಡುವ ಈ ರೈಲು ಬೆಂಗಳೂರಿಗೆ ಸಂಜೆಯ ವೇಳೆಗೆ ತಲುಪಲಿದೆ. ಬೇರೆ ಬೇರೆ ಸಮಯದಲ್ಲಿ ರೈಲು ಇರಲಿದೆ. ಇದರಿಂದಾಗಿ ಪ್ರಯಾಣಿಕರು ತಮಗೆ ಬೇಕಾದ ಸಮಯವನ್ನು ಆಯ್ಕೆ ಮಾಡಿಕೊಂಡು ರೈಲನ್ನು ಏರಬಹುದು. ಭಾರತೀಯ ರೈಲ್ವೇ ಮೂರು ವಿಶೇಷ ರೈಲನ್ನು ಆರಂಭ ಮಾಡಿದೆ. ಈ ಮೂರು ರೈಲುಗಳು ಪಾಟ್ನಾ, ಬರೌನಿ, ಮುಝಾಫರ್, ಸಿಕಂದರ್‌ಬಾದ್, ಹೈದಾರಾಬಾದ್, ಬೆಂಗಳೂರು ನಡುವೆ ಚಲಿಸಲಿದೆ.

 ಪಾಟ್ನಾ-ಬೆಂಗಳೂರು ನಡುವೆ ವಿಶೇಷ ರೈಲು, ಇಲ್ಲಿದೆ ವಿವರ

ರೈಲಿನ ಸಮಯ ಪಟ್ಟಿ ಇಲ್ಲಿದೆ

* ರೈಲು ಸಂಖ್ಯೆ 03252, ಪಾಟ್ನಾ-ಸಿಕಂದರ್ ವಿಶೇಷ ರೈಲು, ಡಿಸೆಂಬರ್‌ 15ರಂದು ಪಾಟ್ನಾದಿಂದ ಮಧ್ಯಾಹ್ನ 2:50 (14.50) ಕ್ಕೆ ಹೊರಟರೆ ಮೂರನೇ ದಿನ ಈ ರೈಲು ಬೆಳ್ಳಿಗ್ಗೆ 9 ಗಂಟೆಗೆ ಸಿಕಂದರ್ ತಲುಪಲಿದೆ.
* ರೈಲು ಸಂಖ್ಯೆ 05232, ಬರೌನಿ-ಹೈದಾರಾಬಾದ್ ವಿಶೇಷ ರೈಲು, ಡಿಸೆಂಬರ್ 16ರಂದು ಸಂಜೆ 4 ಗಂಟೆಗೆ ಹೊರಟರೆ, ಮೂರನೇ ದಿನ ಬೆಳ್ಳಿಗ್ಗೆ 09.30 ಗಂಟೆಗೆ ಹೈದಾರಾಬಾದ್‌ಗೆ ತಲುಪಲಿದೆ.
* ರೈಲು ಸಂಖ್ಯೆ 05227, ಮುಝಾಫರ್-ಬೆಂಗಳೂರು ವಿಶೇಷ ರೈಲು, ಡಿಸೆಂಬರ್ 17ರಂದು ಸಂಜೆ 4 ಗಂಟೆಗೆ ಹೊರಟರೆ, ಮೂರನೇ ದಿನ ಬೆಂಗಳೂರಿಗೆ 6.20 ಗಂಟೆಗೆ (18.20) ತಲುಪಲಿದೆ.

ಈ ವಿಶೇಷ ರೈಲು ಈಸ್ಟ್ ಸೆಂಟ್ರಲ್ ರೈಲ್ವೆ ಆಪರೇಟ್ ಮಾಡುತ್ತದೆ. ಸುಮಾರು 1600 ಕಿಲೋ ಮೀಟರ್ ಸಂಚಾರ ಮಾಡಲಿದೆ. ಈ ರೈಲು ಕೆಲವು ನಿಲ್ದಾಣಗಳಲ್ಲಿ ನಿಲ್ಲಲಿದೆ. ಬಕ್ಸರ್, ಮೊಘಲ್ ಸಾರೈ, ವಾರಾಣಾಸಿ, ಅಲಹಾಬಾದ್, ಕಾನ್ಪುರ, ಝಾನ್ಸಿ, ಬೋಪಲ್, ಇತರ್ಸಿಯಲ್ಲಿ ರೈಲು ನಿಲ್ಲಲಿದೆ. ರೈಲಿನಲ್ಲಿ ಎಸಿ, ನಾನ್ ಎಸ್‌ ಕೋಚ್‌ಗಳು ಇರುತ್ತದೆ. ರೈಲಿನಲ್ಲಿ ಪಾಂಟ್ರಿ ಕಾರು, ಆಹಾರ ಹಾಗೂ ಪಾನೀಯಗಳನ್ನು ಜನರು ಖರೀದಿ ಮಾಡಲು ವ್ಯವಸ್ಥೆಗಳು ನಿಲ್ದಾಣಗಳಲ್ಲಿ ಇರಲಿದೆ.

English summary

Indian Railway announces 'special trains' between Patna and Bengaluru, Details in Kannada

Indian Railway announces 'special trains' between Patna and Bengaluru. time schedule released. Details in Kannada.
Story first published: Wednesday, December 14, 2022, 18:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X