For Quick Alerts
ALLOW NOTIFICATIONS  
For Daily Alerts

ಆಧುನಿಕ ತೇಜಸ್ ಸ್ಲೀಪರ್ ಬೋಗಿಗಳನ್ನು ಪರಿಚಯಿಸಲಿದೆ ಭಾರತೀಯ ರೈಲ್ವೆ

|

ಅಗರ್ತಲಾ-ಆನಂದ್ ವಿಹಾರ್ ಟರ್ಮಿನಲ್ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್‌ ಅನ್ನು ತೇಜಸ್ ಸ್ಲೀಪರ್ ಬೋಗಿಗಳಾಗಿ ನವೀಕರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಪ್ರಯಾಣಿಕರಿಗೆ ಉತ್ತಮ ರೀತಿಯ ಪ್ರಯಾಣದ ಅನುಭವ ನೀಡುವ ಸಲುವಾಗಿ ಸ್ಲೀಪರ್ ಬೋಗಿಗಳನ್ನು ನವೀಕರಿಸುತ್ತಿದ್ದು, ಫೆಬ್ರವರಿ 15ರಿಂದ ಅಧಿಕೃತವಾಗಿ ಸಂಚಾರ ನಡೆಸಲಿವೆ.

"ತೇಜಸ್ ಸ್ಲೀಪರ್ ಬೋಗಿಗಳಲ್ಲಿ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ ಮತ್ತು ಇದು ಎಲ್ಲಾ ವರ್ಗ ಪ್ರಯಾಣದ ಅನುಭವಕ್ಕೆ ಅತ್ಯುತ್ತಮವಾದದ್ದನ್ನು ನೀಡುತ್ತದೆ" ಎಂದು ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಆಧುನಿಕ ತೇಜಸ್ ಸ್ಲೀಪರ್ ಬೋಗಿಗಳನ್ನು ಪರಿಚಯಿಸಲಿದೆ ಭಾರತೀಯ ರೈಲ್ವೆ

ದೂರದ ಪ್ರಯಾಣಕ್ಕಾಗಿ ಈ ಆಧುನಿಕ ಮಾದರಿಯ ತೇಜಸ್ ಸ್ಲೀಪರ್ ರೈಲು ಪರಿಚಯಿಸುತ್ತಿದ್ದು, ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಪ್ರಯಾಣದ ಅನುಭವದಲ್ಲಿ ಒಂದು ಮಾದರಿ ಬದಲಾವಣೆಯನ್ನು ಮಾಡುತ್ತಿದೆ. ವರ್ಧಿತ ಸೌಕರ್ಯದೊಂದಿಗೆ ರೈಲು ಪ್ರಯಾಣದ ಅನುಭವದ ಹೊಸ ರೀತಿಯಲ್ಲಿ ಪರಿಚಯಿಸಲಾಗುತ್ತಿದೆ .

2021-22ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳಾದ ಇಂಟಿಗ್ರಾಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಮಾಡರ್ನ್ ಕೋಚ್ ಫ್ಯಾಕ್ಟರಿ (ಎಂಸಿಎಫ್) ನಲ್ಲಿ ಇಂತಹ 500 ತೇಜಸ್ ಮಾದರಿಯ ಸ್ಲೀಪರ್ ಬೋಗಿಗಳನ್ನು ತಯಾರಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ.

English summary

Indian Railways to introduce modern Tejas AC sleeper coaches

Agartala Rajdhani Special train will run with newly-launched special Tejas sleeper type coaches from February 15
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X