For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, 83ಕ್ಕೆ ಇಳಿಕೆ

|

ರೂಪಾಯಿಯು ಬುಧವಾರದಂದು ಡಾಲರ್ ವಿರುದ್ಧ 83.02 ರ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಈ ಬೆನ್ನಲ್ಲೇ ಮತ್ತೆ ಕೇಂದ್ರ ಬ್ಯಾಂಕ್ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ರೆಪೋ ದರವನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಜನರಿಗೆ ಮತ್ತೆ ಇಎಂಐ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ.

82.3062ರಲ್ಲಿ ವಹಿವಾಟು ಪ್ರಾರಂಭ ಮಾಡಿದ ರೂಪಾಯಿ ಡಾಲರ್ ಎದುರು ಎದುರು 83ಕ್ಕೆ ಇಳಿದಿದೆ. ಈ ಹಿಂದೆ ಸಾರ್ವಕಾಲಿಕವಾಗಿ ರೂಪಾಯಿ ಮೌಲ್ಯ ಕುಸಿತವಾದಾಗ 82.36 ಕ್ಕೆ ಕುಸಿತ ಕಂಡಿತ್ತು.

Explainer: ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತಕ್ಕೆ ಯಾಕೆ ಬಾಧೆ?Explainer: ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತಕ್ಕೆ ಯಾಕೆ ಬಾಧೆ?

ಪಿಟಿಐ ವರದಿಯ ಪ್ರಕಾರ ರೂಪಾಯಿ ಬುಧವಾರ ವಹಿವಾಟಿನ ಕೊನೆಯಲ್ಲಿ 61 ಪೈಸೆ ಕುಸಿದು 83ಕ್ಕಿಂತ ಕೆಳಕ್ಕೆ ಇಳಿದೆ. ಯುಎಸ್ ಡಾಲರ್ ವಿರುದ್ಧ 83.01 ರ ಹೊಸ ದಾಖಲೆಯ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ ಮಾಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, 83ಕ್ಕೆ ಇಳಿಕೆ

ಈ ಹಿಂದಿನ ಸೆಷನ್

ಈ ಹಿಂದಿನ ಸೆಷನ್‌ನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು 10 ಪೈಸೆ ಕುಸಿತವಾಗಿ ರೂಪಾಯಿ 82.40ಕ್ಕೆ ತಲುಪಿದೆ. ಇನ್ನು ಆರು ಕರೆನ್ಸಿಗಳ ಎದುರು ಡಾಲರ್ ಬಲಗೊಂಡಿದೆ. ಶೇಕಡ 0.31ರಷ್ಟು ಏರಿಕೆಯಾಗಿ 112.48ಕ್ಕೆ ತಲುಪಿದೆ. 30 ಷೇರುಗಳ ಸೆನ್ಸೆಕ್ಸ್ 146.59 ಅಂಕ ಅಥವಾ ಶೇಕಡ 0.25ರಷ್ಟು ಏರಿಕೆಯಾಗಿ 59,107.19ರಲ್ಲಿ ವಹಿವಾಟು ಅಂತ್ಯ ಮಾಡಿದ್ದರೆ ಎನ್‌ಎಸ್‌ಇ ನಿಫ್ಟಿ 25.30 ಅಂಕ ಅಥವಾ ಶೇಕಡ 0.14ರಷ್ಟು ಏರಿಕೆಯಾಗಿ 17,512.25ಕ್ಕೆ ಸ್ಥಿರವಾಗಿದೆ.

ಡಾಲರ್‌ಗೆ ಸಮವಾಗಿದ್ದ ರುಪಾಯಿ ಭಾರೀ ಕುಸಿತ ಕಂಡ ಪ್ರಮುಖ ಕಾಲಘಟ್ಟಗಳಿವುಡಾಲರ್‌ಗೆ ಸಮವಾಗಿದ್ದ ರುಪಾಯಿ ಭಾರೀ ಕುಸಿತ ಕಂಡ ಪ್ರಮುಖ ಕಾಲಘಟ್ಟಗಳಿವು

ಮತ್ತೆ ರೆಪೋ ದರ ಏರಿಕೆ ಸಾಧ್ಯತೆ

ಈ ಹಣದುಬ್ಬರದ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಸತತ ಮೂರು ಬಾರಿ ಏರಿಕೆ ಮಾಡಿದೆ. ಕಳೆದ ಮೇ ತಿಂಗಳಿನಿಂದ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸುತ್ತಿದೆ. ಸಾಮಾನ್ಯವಾಗಿ ಕೇಂದ್ರ ಬ್ಯಾಂಕ್ ವಿತ್ತೀಯ ದರ ಪರಿಷ್ಕರಣೆ ಮಾಡಿದರೆ ಬ್ಯಾಂಕುಗಳು ಸಾಲದ ಹಾಗೂ ಎಫ್‌ಡಿ ಬಡ್ಡಿದರ ಬದಲಾವಣೆ ಮಾಡುತ್ತದೆ. ಅದರಂತೆಯೇ ಹಲವಾರು ಬ್ಯಾಂಕುಗಳು ಸಾಲದ ಹಾಗೂ ಎಫ್‌ಡಿ ಬಡ್ಡಿದರವನ್ನು ಹೆಚ್ಚಿಸಿದೆ. ಈಗ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕವಾಗಿ ಕುಸಿತ ಕಂಡಿರುವುದರಿಂದಾಗಿ ಆರ್‌ಬಿಐ ಮತ್ತೆ ರೆಪೋ ದರ ಏರಿಸುವ ಸಾಧ್ಯತೆ ಇದೆ. ಇದರಿಂದಾಗಿ ಇಎಂಐ ಹೊರೆ ಮತ್ತಷ್ಟು ಹೆಚ್ಚಾಗಬಹುದು.

English summary

Indian Rupee Hits New All-time Low; Crosses 83 Mark Against USD

Indian Rupee Hits New All-time Low. The rupee closed at a new record low of 83.02 against the dollar on Wednesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X