For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ 4ನೇ ತ್ರೈಮಾಸಿಕ ಹಣಕಾಸು ವರದಿ: ಕಂಪನಿಯ ಲಾಭ 6 ಪರ್ಸೆಂಟ್ ಏರಿಕೆ

|

ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್‌ನ ಜನವರಿ-ಮಾರ್ಚ್‌ನ ಅವಧಿಯ ಒಟ್ಟು ಏಕೀಕೃತ ಲಾಭವು 6.10 ಪರ್ಸೆಂಟ್ ಏರಿಕೆಯಾಗಿ 4,321 ಕೋಟಿ ರುಪಾಯಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇನ್ಫೋಸಿಸ್ 4,074 ಕೋಟಿ ರುಪಾಯಿ ಗಳಿಸಿತ್ತು.

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಇನ್ಫೋಸಿಸ್ ಲಾಭವು ಇಳಿಕೆಯಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ 4,321 ಕೋಟಿ ರುಪಾಯಿ ಗಳಿಸಿದ್ದರೆ, ಹಿಂದಿನ ತ್ರೈಮಾಸಿಕದಲ್ಲಿ(3ನೇ) ಇನ್ಫೋಸಿಸ್ ನಿವ್ವಳ ಲಾಭವು 4,457 ಕೋಟಿ ರುಪಾಯಿಗಳಷ್ಟಿತ್ತು.

ಇನ್ಫೋಸಿಸ್ Q4 ವರದಿ: ಕಂಪನಿಯ ಲಾಭ 6 ಪರ್ಸೆಂಟ್ ಏರಿಕೆ

2019-20ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಒಟ್ಟು ಆದಾಯವು 8 ಪರ್ಸೆಂಟ್ ಏರಿಕೆಯಾಗಿ 23,267 ಕೋಟಿ ರುಪಾಯಿಗಳಿಗೆ ತಲುಪಿದೆ ಎಂದು ಕಂಪನಿ ಷೇರು ವಿನಿಮಯ ದಾಖಲೆಯಲ್ಲಿ ತಿಳಿಸಿದೆ.

ಕೊರೊನಾವೈರಸ್ ಕಾರಣ ವ್ಯವಹಾರ ಅನಿಶ್ಚಿತತೆಯನ್ನು ಪರಿಗಣಿಸಿ, ಈ ಹಂತದಲ್ಲಿ 2021ರ ಹಣಕಾಸು ವರ್ಷದಲ್ಲಿ ಆದಾಯ ಮತ್ತು ಮಾರ್ಜಿನ್ ಕುರಿತು ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ ಎಂದಿದೆ.

English summary

Infosys Q4 Result Profit Rises 6 Percent

IT major Infosys on Monday reported a 6.10 per cent Profit in the march quarter at Rs 4,321 Crore
Story first published: Monday, April 20, 2020, 18:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X