For Quick Alerts
ALLOW NOTIFICATIONS  
For Daily Alerts

ಜೈಪುರಲ್ಲಿ ಐ.ಟಿ. ಇಲಾಖೆ ಭರ್ಜರಿ ಬೇಟೆ; 1400 ಕೋಟಿ ರು. ಲೆಕ್ಕಕ್ಕೆ ನೀಡದ ಆಸ್ತಿ ಪತ್ತೆ

|

ಆದಾಯ ತೆರಿಗೆ ಇಲಾಖೆಯಿಂದ ಭಾರೀ ದೊಡ್ಡ ಕಾರ್ಯಾಚರಣೆ ನಡೆಸಲಾಗಿದೆ. ಲೆಕ್ಕಕ್ಕೆ ನೀಡದ ವಹಿವಾಟು 1400 ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು ಪತ್ತೆ ಮಾಡಲಾಗಿದೆ. ಜೈಪುರ ಮೂಲದ ಜ್ಯುವೆಲ್ಲರಿ ಸಂಸ್ಥೆ ಮತ್ತು ಎರಡು ರಿಯಲ್ ಎಸ್ಟೇಟ್ ಡೆವಲಪರ್ಸ್ ಮೇಲೆ ದಾಳಿ ನಡೆಸಿದ ಮೇಲೆ ಈ ಮೊತ್ತವು ಪತ್ತೆಯಾಗಿದೆ.

 

ಈ ಸಂಸ್ಥೆಗಳಿಗೆ ಸೇರಿದ ಒಟ್ಟಾರೆ 31 ಸ್ಥಳಗಳಲ್ಲಿ ಜನವರಿ 21ನೇ ತಾರೀಕು ಸಮೀಕ್ಷೆ ಮತ್ತು ಶೋಧ ನಡೆಸಲಾಗಿದೆ. ಕಳೆದ ಆರೇಳು ವರ್ಷಗಳಿಂದ ಲೆಕ್ಕಕ್ಕೆ ನೀಡದ ವಹಿವಾಟುಗಳ "ಸಂಪೂರ್ಣ ಮಾಹಿತಿ"ಯು ಮುಖ್ಯ ಕಚೇರಿ ಆವರಣದ ನೆಲಮಹಡಿಯಲ್ಲಿ ಮುಚ್ಚಿಡಲಾಗಿತ್ತು.

 

"ಬೇನಾಮಿ ಆಸ್ತಿ ಬಗ್ಗೆ ಆನ್ ಲೈನ್ ದೂರು ನೀಡಿ, ಬಹುಮಾನ ಪಡೆಯಿರಿ"

ಶೋಧ ನಡೆಸುವ ವೇಳೆಯಲ್ಲಿ ಆರೋಪಕ್ಕೆ ಸಂಬಂಧಿಸಿದ ಸಿಕ್ಕಾಪಟ್ಟೆ ದಾಖಲೆಗಳು ಮತ್ತು ಡಿಜಿಟಲ್ ಡೇಟಾ ಸಿಕ್ಕಿವೆ. ಆ ಪೈಕಿ ಲೆಕ್ಕಕ್ಕೆ ನೀಡದಿದ್ದ ಸ್ವೀಕೃತಿ, ವಿವರಣೆ ನೀಡದ ಅಭಿವೃದ್ಧಿ ವೆಚ್ಚಗಳು, ವಿವರಣೆ ನೀಡ ಆಸ್ತಿಗಳು, ನಗದು ಸಾಲಗಳು, ಮುಂಗಡ, ಹಣ ಸ್ವೀಕಾರ ಕಂಡುಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

IT ಇಲಾಖೆ ಬೇಟೆ; 1400 ಕೋಟಿ ರು. ಲೆಕ್ಕಕ್ಕೆ ನೀಡದ ಆಸ್ತಿ ಪತ್ತೆ

ಈ ಸಮೂಹದಲ್ಲಿ ಲೆಕ್ಕಕ್ಕೆ ತೋರಿಸದ 650 ಕೋಟಿ ರುಪಾಯಿಯ ವಹಿವಾಟನ್ನು ಈ ತನಕ ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮತ್ತೊಂದು ರಿಯಲ್ ಎಸ್ಟೇಟ್ ಸಮೂಹವು ಕಮರ್ಷಿಯಲ್ ಕೇಂದ್ರಗಳು, ಫಾರ್ಮ್ ಹೌಸ್ ಗಳು, ಟೌನ್ ಷಿಪ್ ಮತ್ತು ರೆಸಿಡೆನ್ಷಿಯಲ್ ಎನ್ ಕ್ಲೇವ್ ಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ.

ಈ ಸಮೂಹವು ವಿಮಾನ ನಿಲ್ದಾಣ ಪ್ಲಾಜಾದಲ್ಲಿ ರಿಯಲ್ ಎಸ್ಟೇಟ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದಕ್ಕಾಗಿ 1 ಲಕ್ಷ ರುಪಾಯಿ ಮಾತ್ರ ಹೂಡಿಕೆ ಎಂದು ತೋರಿಸಲಾಗಿದೆ. ಆದರೆ ವರ್ಕ್ ಇನ್ ಪ್ರೊಗ್ರೆಸ್ (ಕ್ಲೋಸಿಂಗ್ ಸ್ಟಾಕ್) ಎಂದು ಬ್ಯಾಲೆನ್ಸ್ ಶೀಟ್ ನಲ್ಲಿ ರು. 133 ಕೋಟಿ ರುಪಾಯಿ ಪತ್ತೆಯಾಗಿದೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ.

ಕೈಗೆಟುಕುವ ದರದ ವಿವಿಧ ಹೌಸಿಂಗ್ ಸ್ಕೀಮ್ ಗಳನ್ನು ಸಾಕಷ್ಟು ಆದಾಯ ಇದ್ದು, ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಬಯಲು ಮಾಡಿಲ್ಲ. ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳಲ್ಲಿ ಶೋಧ ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ.

ಈ ಸಮೂಹದಿಂದ ವಿವಿಧ ವ್ಯಕ್ತಿಗಳಿಗೆ 19 ಕೋಟಿ ರುಪಾಯಿ ನಗದು ಸಾಲವನ್ನು ನೀಡಲಾಗಿದೆ. ಇದಕ್ಕಾಗಿ ಲೆಕ್ಕಕ್ಕೆ ತೋರಿಸದ ಬಡ್ಡಿಯನ್ನು ಸಹ ಗಳಿಸಿದ್ದಾರೆ. ಈ ತನಕ 225 ಕೋಟಿ ರುಪಾಯಿ ಮೊತ್ತದ ವಹಿವಾಟನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಇನ್ನು ಜ್ಯುವೆಲ್ಲರಿ ವ್ಯವಹಾರ ನಡೆಸುತ್ತಿದ್ದು, ಲೆಕ್ಕಕ್ಕೆ ನೀಡದ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ತಯಾರಿಕೆ ಕಳೆದ ಆರು ವರ್ಷದ ಮಾಹಿತಿಯನ್ನು ಶೋರೂಮ್ ನಲ್ಲಿ ಮುಚ್ಚಿಡಲಾಗಿತ್ತು. ಅದನ್ನು ಸಹ ವಶಕ್ಕೆ ಪಡೆಯಲಾಗಿದೆ. ರಹಸ್ಯ ಸ್ಥಳದಿಂದ 15 ಕೋಟಿ ರುಪಾಯಿ ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಮಾಡಲಾಗಿದೆ.

ಲೆಕ್ಕಕ್ಕೆ ತೋರಿಸದ ಮೊತ್ತವನ್ನು ಉದ್ಯೋಗಿಗಳು ಮತ್ತು ಕಾರ್ಮಿಕರ ಬ್ಯಾಂಕ್ ಖಾತೆಗಳ ಮೂಲಕ ವ್ಯವಹರಿಸುತ್ತಿತ್ತು. ಒಟ್ಟಾರೆಯಾಗಿ ಲೆಕ್ಕಕ್ಕೆ ನೀಡದ ಮೊತ್ತ ರು. 525 ಕೋಟಿಯನ್ನು ಈ ತನಕ ಪತ್ತೆ ಹಚ್ಚಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

English summary

IT Detected Rs 1400 Crore Worth Of Unaccounted Assets In Jaipur

Unaccounted assets worth Rs 1400 crore detected in Jaipur by Income Tax department on January 21, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X