For Quick Alerts
ALLOW NOTIFICATIONS  
For Daily Alerts

ಎಲ್ ಪಿಜಿ ಸಿಲಿಂಡರ್ ವಿತರಣೆಯಲ್ಲಿ ನವೆಂಬರ್ 1ರಿಂದ ಮಹತ್ತರ ಬದಲಾವಣೆ

|

ಎಲ್ ಪಿಜಿ ಸಿಲಿಂಡರ್ ಮನೆಗೆ ವಿತರಣೆ ಮಾಡುವ ಪದ್ಧತಿಯಲ್ಲಿ ನವೆಂಬರ್ 1, 2020ರಿಂದ ಪ್ರಮುಖವಾದ ಬದಲಾವಣೆ ಆಗಲಿದೆ. ಹಿಂದೂಸ್ತಾನ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದ್ದು, ಮನೆ ಬಾಗಿಲಿಗೆ ಎಲ್ ಪಿಜಿ ಸಿಲಿಂಡರ್ ಡೆಲಿವರ್ ಮಾಡುವುದಕ್ಕೆ ಒನ್ ಟೈಮ್ ಪಾಸ್ ವರ್ಡ್ (OTP) ಅಗತ್ಯ ಎನ್ನಲಾಗಿದೆ.

OTP ಆಧಾರಿತ ಎಲ್ ಪಿಜಿ ಸಿಲಿಂಡರ್ ಡೆಲಿವರಿಯಲ್ಲಿನ ಪ್ರಮುಖ ಬದಲಾವಣೆಗಳು ಹೀಗಿವೆ:
* ತೈಲ ಕಂಪೆನಿಗಳು ಜಾರಿಗೆ ತರುತ್ತಿರುವ ಈ ಪದ್ಧತಿಯನ್ನು ಡೆಲಿವರಿ ಅಥೆಂಟಿಕೇಷನ್ ಕೋಡ್ (ಡಿಎಸಿ) ಎಂದು ಕರೆಯಲಾಗುತ್ತದೆ. ಈ ಪದ್ಧತಿಯಿಂದ ಕಳುವು ತಡೆಯಬಹುದು ಹಾಗೂ ಸರಿಯಾದ ಗ್ರಾಹಕರನ್ನು ಗುರುತಿಸಲು ನೆರವಾಗುತ್ತದೆ.

* ಆರಂಭದಲ್ಲಿ ಈ ಡಿಎಸಿಯನ್ನು ನೂರು ಸ್ಮಾರ್ಟ್ ಸಿಟಿಯಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ಪ್ರಾಯೋಗಿಕ ಯೋಜನೆಯನ್ನು ರಾಜಸ್ಥಾನದ ಜೈಪುರದಲ್ಲಿ ಆರಂಭಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ಎಲ್‌ಪಿಜಿ ಬಳಕೆಯಲ್ಲಿ ಮತ್ತಷ್ಟು ಹೆಚ್ಚಳಲಾಕ್‌ಡೌನ್ ಎಫೆಕ್ಟ್: ಎಲ್‌ಪಿಜಿ ಬಳಕೆಯಲ್ಲಿ ಮತ್ತಷ್ಟು ಹೆಚ್ಚಳ

* ಸಿಲಿಂಡರ್ ಡೆಲಿವರಿ ಮಾಡುವುದಕ್ಕೆ ಬರುವ ವ್ಯಕ್ತಿಗೆ ಗ್ರಾಹಕರ ಮೊಬೈಲ್ ನಂಬರ್ ಗೆ ಬರುವ ಕೋಡ್ ತೋರಿಸುವ ತನಕ ಪ್ರಕ್ರಿಯೆ ಪೂರ್ಣ ಆಗುವುದಿಲ್ಲ. ಆ ಕೋಡ್ ಅನ್ನು ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಎಲ್ ಪಿಜಿ ಸಿಲಿಂಡರ್ ವಿತರಣೆಯಲ್ಲಿ ನವೆಂಬರ್ 1ರಿಂದ ಮಹತ್ತರ ಬದಲಾವಣೆ

* ಒಂದು ವೇಳೆ ಗ್ರಾಹಕರು ಗ್ಯಾಸ್ ಏಜೆನ್ಸಿಯವರ ಬಳಿ ನೋಂದಣಿಯಾದ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಿಸಿದಲ್ಲಿ ಅದನ್ನು ತಕ್ಷಣವೇ ಅಪ್ ಡೇಟ್ ಮಾಡಿಸಬೇಕು. ಹಾಗೊಂದು ವೇಳೆ ಮಾಡಿಸದಿದ್ದಲ್ಲಿ ಎಲ್ ಪಿಜಿ ಸಿಲಿಂಡರ್ ಡೆಲಿವರಿ ನಿಂತುಹೋಗುತ್ತದೆ.

* ಒಂದು ವೇಳೆ ವಿಳಾಸ ಬದಲಾವಣೆ ಆದಲ್ಲಿ ಕೂಡ ಅದನ್ನೂ ತಕ್ಷಣ ಅಪ್ ಡೇಟ್ ಮಾಡಿಸಬೇಕು.

* ಈ ಡಿಎಸಿ ಕೋಡ್ ಕಮರ್ಷಿಯಲ್ ಸಿಲಿಂಡರ್ ಗೆ ಅನ್ವಯ ಆಗುವುದಿಲ್ಲ.

ವುಡ್ ಮೆಕ್ ಕೆಂಜಿ ಹೇಳಿರುವ ಪ್ರಕಾರ, 2030ರ ಹೊತ್ತಿಗೆ ಭಾರತವು ಚೀನಾವನ್ನು ಹಿಂದಿಕ್ಕಿ, ಮನೆಗಳಲ್ಲಿ ಅತಿ ಹೆಚ್ಚು ಎಲ್ ಪಿಜಿ ಅಡುಗೆ ಅನಿಲವನ್ನು ವಿಶ್ವದ ದೊಡ್ಡ ಮಾರುಕಟ್ಟೆ ಆಗಿರುತ್ತದೆ.

English summary

Major Change In LPG Delivery System From November 1, 2020

LPG (Liquid Petroleum Gas) cooking cylinder delivery system will be changed from November 1, 2020. Here is the major details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X