For Quick Alerts
ALLOW NOTIFICATIONS  
For Daily Alerts

ಭಾರತದ ಉದ್ಯೋಗಿಗಳು ಬಯಸುವ ಟಾಪ್ ಬ್ರ್ಯಾಂಡ್ ಮೈಕ್ರೋಸಾಫ್ಟ್ ಇಂಡಿಯಾ

|

ದೇಶದಲ್ಲೇ ಅತ್ಯಂತ ಆಕರ್ಷಕ ಉದ್ಯೋಗದಾತ ಬ್ರ್ಯಾಂಡ್ ಎಂಬ ಅಗ್ಗಳಿಕೆಗೆ ಮೈಕ್ರೋಸಾಫ್ಟ್ ಇಂಡಿಯಾ ಪಾತ್ರವಾಗಿದೆ. ಆ ನಂತರದ ಎರಡು ಸ್ಥಾನಗಳು ಕ್ರಮವಾಗಿ ಸ್ಯಾಮ್ಸಂಗ್ ಇಂಡಿಯಾ ಹಾಗೂ ಅಮೆಜಾನ್ ಇಂಡಿಯಾಗೆ ಲಭಿಸಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ರಾಂಡ್ ಸ್ಟಾಡ್ ಎಂಪ್ಲಾಯರ್ ಬ್ರ್ಯಾಂಡ್ ರೀಸರ್ಚ್ (REBR) 2020 ಈ ಸಮೀಕ್ಷೆಯನ್ನು ಮಾಡಿದೆ.

 

ಆರ್ಥಿಕ ಆರೋಗ್ಯ, ಪ್ರಬಲವಾದ ವಚಸ್ಸು ಹಾಗೂ ಈಚಿನ ತಂತ್ರಜ್ಞಾನಗಳ ಬಳಕೆಯಲ್ಲಿ ಮೈಕ್ರೋಸಾಫ್ಟ್ ಇಂಡಿಯಾಗೆ ಹೆಚ್ಚಿನ ಅಂಕ ಬಂದಿದೆ. ಉದ್ಯೋಗಿಗಳು ಪ್ರಮುಖವಾಗಿ ಮೌಲ್ಯವಾಗಿ ಪರಿಗಣಿಸಿರುವುದು ಉದ್ಯೋಗ- ಜೀವನ ಸಮತೋಲನವನ್ನು (ವರ್ಕ್ ಲೈಫ್ ಬ್ಯಾಲೆನ್ಸ್). ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 43% ಮಂದಿ ವರ್ಕ್- ಲೈಫ್ ಬ್ಯಾಲೆನ್ಸ್ ಮುಖ್ಯವಾಗಿ ಗಣನೆಗೆ ತೆಗೆದುಕೊಂಡಿದ್ದಾರೆ.

1,85,000ಕ್ಕೂ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು

1,85,000ಕ್ಕೂ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು

41% ಮಂದಿ ಆಕರ್ಷಕ ವೇತನ ಹಾಗೂ ಉದ್ಯೋಗಿಗಳಿಗೆ ಸಿಗುವ ಅನುಕೂಲಗಳನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಂಡಿದ್ದರೆ, 40% ಮಂದಿ ಉದ್ಯೋಗ ಭದ್ರತೆಯನ್ನು ಮುಖ್ಯ ಎಂದಿದ್ದಾರೆ. REBR ಸಮೀಕ್ಷೆಯಲ್ಲಿ 33 ದೇಶಗಳ 6,136 ಕಂಪೆನಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. 1,85,000ಕ್ಕೂ ಹೆಚ್ಚು ಮಂದಿ (18ರಿಂದ 65 ವಯಸ್ಸಿನ ಮಧ್ಯೆ ಸಾರ್ವಜನಿಕರು) ಭಾಗಿಯಾಗಿದ್ದರು.

ಭಾರತದಲ್ಲಿ ಟಾಪ್ ಟೆನ್ ಬ್ರ್ಯಾಂಡ್ ಗಳಿವು

ಭಾರತದಲ್ಲಿ ಟಾಪ್ ಟೆನ್ ಬ್ರ್ಯಾಂಡ್ ಗಳಿವು

2020ರಲ್ಲಿ ಭಾರತದಲ್ಲಿ ಉದ್ಯೋಗದಾತರ ಟಾಪ್ ಬ್ರ್ಯಾಂಡ್ ಹೀಗಿದೆ: ಇನ್ಫೋಸಿಸ್ ಟೆಕ್ನಾಲಜಿ (4ನೇ ಸ್ಥಾನ), ಮರ್ಸಿಡೀಸ್ ಬೆಂಜ್ (5ನೇ ಸ್ಥಾನ), ಸೋನಿ (6ನೇ ಸ್ಥಾನ), ಐಬಿಎಂ (7ನೇ ಸ್ಥಾನ), ಡೆಲ್ ಟೆಕ್ನಾಲಜೀಸ್ ಲಿಮಿಟೆಡ್ (8ನೇ ಸ್ಥಾನ), ಐಟಿಸಿ ಸಮೂಹ (9ನೇ ಸ್ಥಾನ) ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (10ನೇ ಸ್ಥಾನ).

ಹಣಕಾಸು ಹೊರತಾದ ಅನುಕೂಲಗಳು ಗಣನೆಗೆ
 

ಹಣಕಾಸು ಹೊರತಾದ ಅನುಕೂಲಗಳು ಗಣನೆಗೆ

ಕಂಪೆನಿ ಒದಗಿಸುವ ಹಣಕಾಸು ಹೊರತಾದ ಅನುಕೂಲಗಳಾದ ಕಂಪೆನಿ ಫೋನ್/ಕಾರು, ಮಕ್ಕಳ ಕಾಳಜಿ ಸೇವೆ ಹಾಗೂ ಬೆಂಬಲ, ಅನುಕೂಲಕರವಾದ ಕಾರ್ಯ ನಿರ್ವಹಿಸುವ ಅವಧಿ ಕೂಡ ಮುಖ್ಯವಾಗುತ್ತದೆ. ಉದ್ಯೋಗದಾತ ಕಂಪೆನಿಗಳಿಂದ ಉತ್ತಮ ತರಬೇತಿ, ಭವಿಷ್ಯದ ಅವಕಾಶಗಳು ಹಾಗೂ ತಂತ್ರಜ್ಞಾನದ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿ ಇರುವುದನ್ನು ಗಮನಿಸಿ ಉತ್ತಮ ಬ್ರ್ಯಾಂಡ್ ಎಂದು ನಿರ್ಧರಿಸಿರುವುದಾಗಿ ಸಮೀಕ್ಷೆಯಲ್ಲಿ ಭಾಗಿ ಆಗಿದ್ದವರು ಅಭಿಪ್ರಾಯ ಪಟ್ಟಿದ್ದಾರೆ.

ಆದ್ಯತೆ ಕ್ಷೇತ್ರಗಳ ಪಟ್ಟಿ ಹೀಗಿದೆ

ಆದ್ಯತೆ ಕ್ಷೇತ್ರಗಳ ಪಟ್ಟಿ ಹೀಗಿದೆ

ಭಾರತದ ಉದ್ಯೋಗಿಗಳು ತಾವು ಕೆಲಸ ಮಾಡಲು ಬಯಸುವ ಕ್ಷೇತ್ರಗಳ ವಿಚಾರದಲ್ಲೂ ಆದ್ಯತೆ ಹೊಂದಿದ್ದಾರೆ. ಐಟಿ, ITeS ಮತ್ತು ಟೆಲಿಕಾಂ, ಆಟೋಮೋಟಿವ್, ಎಫ್ ಎಂಸಿಜಿ, ರೀಟೇಲ್- ಇ ಕಾಮರ್ಸ್ ಹಾಗೂ ಬಿಎಫ್ ಎಸ್ ಐ ಹೀಗೆ ಕೆಲಸ ಮಾಡುವುದಕ್ಕೆ ಈ ಕ್ಷೇತ್ರಗಳ ಕಂಪೆನಿಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

English summary

10 Most Attractive Employer Brands in India for 2020

Microsoft India has emerged as India's most attractive employer brand, Samsung India and Amazon India in second- third place.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X