For Quick Alerts
ALLOW NOTIFICATIONS  
For Daily Alerts

Multibagger stock: 1 ವರ್ಷದಲ್ಲೇ ಶೇ.1000 ರಿಟರ್ನ್ ಪಡೆಯಿರಿ!

|

ಷೇರು ಮಾರುಕಟ್ಟೆಯಲ್ಲಿ ಹಲವಾರು ಸ್ಟಾಕ್‌ಗಳು ಏರಿಳಿತವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಲೇ ಸಾಗುತ್ತಿದೆ. ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್‌ನ ಅದಾನಿ ಸ್ಟಾಕ್‌ಗಳಂತೂ ಭಾರೀ ಇಳಿದಿದೆ. ಗೌತಮ್ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ ದಿಡೀರ್ ಆಗಿ 7ನೇ ಸ್ಥಾನಕ್ಕೆ ಇಳಿದಿದ್ದಾರೆ. ಈ ನಡುವೆ ಸ್ಟಾಕ್ ಮಾರುಕಟ್ಟೆಯಲ್ಲಿನ ಮಲ್ಟಿಬ್ಯಾಗರ್ ಸ್ಟಾಕ್ ಒಂದು ಒಂದು ವರ್ಷದಲ್ಲೇ ಶೇಕಡ 1000ರಷ್ಟು ರಿಟರ್ನ್ ಅನ್ನು ನೀಡಿದೆ.

ಡೀಪ್ ಡೈಮೆಂಡ್ ಎಂಬ ಮಲ್ಟಿಬ್ಯಾಗರ್ ಸ್ಟಾಕ್ ಒಂದು ವರ್ಷದಲ್ಲೇ ತಮ್ಮ ಹೂಡಿಕೆದಾರರಿಗೆ ಶೇಕಡ 1000ರಷ್ಟು ರಿಟರ್ನ್ ಅನ್ನು ನೀಡಿದೆ. ಸತತ ಐದನೇ ಸೆಷನ್‌ನಲ್ಲಿ ಸ್ಮಾಲ್ ಕ್ಯಾಪ್ ಮಲ್ಟಿಬ್ಯಾಗರ್ ಸ್ಟಾಕ್ ಭಾರೀ ಏರಿಕೆಯನ್ನು ಕಂಡಿದೆ. ಬುಧವಾರ (ಜನವರಿ 25) ಸ್ಟಾಕ್ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಸೆಬಿ ರಿಜಿಸ್ಟಾರ್‌ ಬ್ರೋಕರೇಜ್ ಸಂಸ್ಥೆ: ಯುವ ಹೂಡಿಕೆದಾರರಿಗೆ ಉತ್ತಮ ಆಯ್ಕೆಯೇ?ಸೆಬಿ ರಿಜಿಸ್ಟಾರ್‌ ಬ್ರೋಕರೇಜ್ ಸಂಸ್ಥೆ: ಯುವ ಹೂಡಿಕೆದಾರರಿಗೆ ಉತ್ತಮ ಆಯ್ಕೆಯೇ?

ಸ್ಮಾಲ್ ಕ್ಯಾಪ್‌ ಮಲ್ಟಿಬ್ಯಾಗರ್ ಸ್ಟಾಕ್ ಆದ ಡೀಪ್ ಡೈಮೆಂಡ್ ಬುಧವಾರ (ಜನವರಿ 25) ಸುಮಾರು ಶೇಕಡ 5ರಷ್ಟು ಏರಿಕೆಯನ್ನು ಕಂಡಿದೆ. ಷೇರು ಮೌಲ್ಯವು ಸುಮಾರು 18.45 ರೂಪಾಯಿಗೆ ಏರಿಕೆಯಾಗಿದೆ. ಶುಕ್ರವಾರ ಜನವರಿ 27ರಂದು ಈ ಮಲ್ಟಿಬ್ಯಾಗರ್ ಸ್ಟಾಕ್ ಮತ್ತೆ ಏರಿಕೆಯನ್ನು ಕಂಡು, 19.35 ರೂಪಾಯಿಗೆ ತಲುಪಿದೆ.

ಸ್ಟಾಕ್‌ನ ಮುಖಬೆಲೆ ಎಷ್ಟಿದೆ ತಿಳಿಯಿರಿ

ಸ್ಟಾಕ್‌ನ ಮುಖಬೆಲೆ ಎಷ್ಟಿದೆ ತಿಳಿಯಿರಿ

ಈ ಮಲ್ಟಿಬ್ಯಾಗರ್ ಸ್ಟಾಕ್ ಇತ್ತೀಚೆಗೆ ಸಂಸ್ಥೆಯಿಂದ 10:1 ಅನುಪಾತದಲ್ಲಿ ವಿಭಾಗ ಮಾಡಲಾಗಿದೆ. ಇದಕ್ಕೂ ಮುನ್ನ ಈ ಸ್ಟಾಕ್‌ನ ಮುಖಬೆಲೆ ರೂಪಾಯಿ 10 ಆಗಿತ್ತು. ಸಂಸ್ಥೆಯು ಇತ್ತೀಚೆಗೆ ಅನುಪಾತವನ್ನು ಬದಲಾವಣೆ ಮಾಡಿದ ಬಳಿಕ ಸ್ಟಾಕ್‌ನ ಮುಖಬೆಲೆ ರೂಪಾಯಿ ಒಂದು ಆಗಿದೆ.

ಈ ಬಗ್ಗೆ ಸಂಸ್ಥೆಯು ಇತ್ತೀಚೆಗೆ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ. ಸ್ಟಾಕ್‌ ತನ್ನ ಸರ್‌ಪ್ಲಸ್ ಮೊತ್ತವನ್ನು ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಅನುಮೋದನೆಯನ್ನು ಬೋರ್ಡ್‌ನಿಂದ ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ. ಈ ಮೊತ್ತವು ಸಂಸ್ಥೆಯ ವಹಿವಾಟಿಗೆ ಶೀಘ್ರವೇ ಬೇಕಾದ ಹಣವಾಗಿಲ್ಲ. ಈ ಹಣವನ್ನು ಬೇರೆ ಸಂಸ್ಥೆಯ ಷೇರು ಮತ್ತು ಸೆಕ್ಯೂರಿಟಿಗಳ ಖರೀದಿ ಅಥವಾ ಚಂದಾದಾರಿಕೆಗೆ ಬಳಕೆ ಮಾಡಿಕೊಳ್ಳಬಹುದು ಎಂದು ಸಂಸ್ಥೆ ಹೇಳಿದೆ.

ಸಂಸ್ಥೆಯು ಪ್ರಸ್ತುತ ಹೊಸ ಯುಗಕ್ಕೆ ತಕ್ಕುದಾಗಿ ಬದಲಾಗುವ ಪ್ರಯತ್ನವನ್ನು ಮಾಡುತ್ತಿದೆ. ಎಲೆಕ್ಟ್ರಾನಿಕ್ ವಾಹನಗಳು, ಸೋಲರ್‌ನಂತಹ ಗ್ರೀನ್ ಎನರ್ಜಿ, ವೇಸ್ಟ್‌ ಮ್ಯಾನೆಜ್‌ಮೆಂಟ್‌ನಂತಹ ಯೋಜನೆಗಳನ್ನು ರೂಪಿಸುವ ನಿರ್ಧಾರವನ್ನು ಮಾಡಿಕೊಂಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಪ್ರೋತ್ಸಾಹದ ಕಾರಣದಿಂದಾಗಿ ಇವಿ ವಿಭಾಗಕ್ಕೆ ಹೆಚ್ಚಿನ ಆದ್ಯತೆ ಇದೆ ಎಂದು ಸಂಸ್ಥೆ ಹೇಳಿಕೊಂಡಿದೆ.

 

 ಸಂಸ್ಥೆಯಲ್ಲಿ ನಿವ್ವಳ ಆದಾಯ ಏರಿಕೆ

ಸಂಸ್ಥೆಯಲ್ಲಿ ನಿವ್ವಳ ಆದಾಯ ಏರಿಕೆ

ಈ ನಡುವೆ ಸಂಸ್ಥೆಯ ನಿಯಮಗಳ ಮೆಮೊರೆಂಡೆಮ್ ಅನ್ನು ಡೀಪ್ ಡೈಮೆಂಡ್ ಬೋರ್ಡ್ ಅನುಮೋದಿಸಿದೆ ಎಂದು ವರದಿಯಾಗಿದೆ. ಹಾಗೆಯೇ ಸಂಸ್ಥೆಯಲ್ಲಿ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 233.33ರಷ್ಟು ಏರಿಕೆ ಕಂಡು ಬಂದಿದ್ದು ಆದಾಯ 1.5 ಕೋಟಿ ರೂಪಾಯಿಗೆ ತಲುಪಿದೆ. ನಿವ್ವಳ ಆದಾಯವು ಕಳೆದ ವರ್ಷದಲ್ಲಿ ಇದೇ ತ್ರೈಮಾಸಿಕದ ನಿವ್ವಳ ಆದಾಯಕ್ಕೆ ಹೋಲಿಕೆ ಮಾಡಿದಾಗ ಶೇಕಡ 6000ರಷ್ಟು ಹೆಚ್ಚಳವಾಗಿ 0.01 ಕೋಟಿ ರೂಪಾಯಿಯಿಂದ 0.61 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

 ಗಮನಿಸಿ

ಗಮನಿಸಿ

ಈ ಮೇಲಿನ ಲೇಖನವನ್ನು ತಜ್ಞರ ಅಭಿಪ್ರಾಯದ ಮೇಲೆ ಬರೆಯಲಾಗಿದೆ. ಯಾವುದೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. ನೀವು ನಿಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹೂಡಿಕೆ ಮಾಡುವ ಮುನ್ನ ಅಪಾಯವನ್ನು ಅರಿತುಕೊಂಡು ಹೂಡಿಕೆ ಮಾಡುವುದು ಉತ್ತಮ. ಈ ಲೇಖನದ ಆಧಾರದಲ್ಲಿ ಹೂಡಿಕೆ ಮಾಡಿದ ಬಳಿಕ ಉಂಟಾದ ಯಾವುದೇ ನಷ್ಟಕ್ಕೆ ಗ್ರೇನಿಯಂ ಸಂಸ್ಥೆ ಅಥವಾ ಲೇಖಕರು ಜವಾಬ್ದಾರರಲ್ಲ.

English summary

Multibagger stock alert: Investors get mammot 1000 percent return in one year, here's details

Multibagger stock alert: Several promising stocks surface in the share market from time to time. Investors get mammot 1000 percent return in one year, here's details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X