For Quick Alerts
ALLOW NOTIFICATIONS  
For Daily Alerts

ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ತೆರಿಗೆ: ನಿರ್ಮಲಾ ಸ್ಪಷ್ಟನೆ

|

ಅನಿವಾಸಿ ಭಾರತೀಯರ ಜಾಗತಿಕ ವರಮಾನದ ಮೇಲೆ ತೆರಿಗೆ ಹಾಕುವ ಯಾವ ಉದ್ದೇಶವೂ ಇಲ್ಲ ಮತ್ತು ಭಾರತದಲ್ಲಿ ಪಡೆಯುವ ಆದಾಯಕ್ಕೆ ಮಾತ್ರ ತೆರಿಗೆ ಹಾಕಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಹೇಳಿದ್ದಾರೆ. ಅನಿವಾಸಿ ಭಾರತೀಯರ ಜಾಗತಿಕ ಆದಾಯಕ್ಕೆ ಹೇಗೆ ತೆರಿಗೆ ಹಾಕಲಾಗುತ್ತದೆ ಎಂಬ ಬಗ್ಗೆ ಕೇಂದ್ರ ಬಜೆಟ್ ದಿನವಾದ ಶನಿವಾರ ಗೊಂದಲ ಏರ್ಪಟ್ಟಿತ್ತು.

ವಿದೇಶದಲ್ಲಿ ದುಡಿಯುತ್ತಿರುವ ಭಾರತೀಯರು ಭಾರತದಲ್ಲಿ ಕಟ್ಟಬೇಕು ತೆರಿಗೆವಿದೇಶದಲ್ಲಿ ದುಡಿಯುತ್ತಿರುವ ಭಾರತೀಯರು ಭಾರತದಲ್ಲಿ ಕಟ್ಟಬೇಕು ತೆರಿಗೆ

ಅನಿವಾಸಿ ಭಾರತೀಯರು ಭಾರತದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಹಾಕಲಾಗುವುದು. ಒಂದು ವೇಳೆ ಅವರು ಬೇರೆ ಯಾವುದೋ ದೇಶದಲ್ಲಿ ದುಡಿದು, ಅಲ್ಲಿ ತೆರಿಗೆ ಹಾಕುತ್ತಿಲ್ಲ ಅಂದಲ್ಲಿ ಅಲ್ಲಿ ಉತ್ಪತ್ತಿಯಾದ ಆದಾಯಕ್ಕೆ ನಾವೇಕೆ ತೆರಿಗೆ ಹಾಕಬೇಕು ಎಂದು ಪ್ರಶ್ನೆ ಮಾಡಿದ್ದಾರೆ ನಿರ್ಮಲಾ.

ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ತೆರಿಗೆ: ನಿರ್ಮಲಾ ಸ್ಪಷ್ಟನೆ

ಒಬ್ಬ ವ್ಯಕ್ತಿಗೆ ಭಾರತದಲ್ಲಿ ಮನೆಯಿದ್ದು, ಅದಕ್ಕೆ ಇಲ್ಲಿ ಬಾಡಿಗೆ ಬರುತ್ತಿರುತ್ತದೆ. ಆ ದುಡ್ಡನ್ನು ಆ ವ್ಯಕ್ತಿ ಇರುವ ದೇಶಕ್ಕೆ ತೆಗೆದುಕೊಂಡು ಹೋಗುತ್ತಾರೆ. ಆದಾಯ ಉತ್ಪತ್ತಿಯಾದ ಭಾರತಕ್ಕೂ ಆ ಹಣ ತೆಗೆದುಕೊಂಡು ಹೋದ ದೇಶಕ್ಕೂ ತೆರಿಗೆ ಕಟ್ಟದೆ ಇರಲು ಸಾಧ್ಯವೇ? ಆಸ್ತಿ ಭಾರತದಲ್ಲಿ ಇದೆಯಾದ್ದರಿಂದ ತೆರಿಗೆ ಸಂಗ್ರಹಿಸುವ ಹಕ್ಕು ನಮಗಿದೆ ಎಂದಿದ್ದಾರೆ.

English summary

Nirmala Clarification On Global Income Of NRI's

Finance minister Nirmala Sitharaman's clarification on taxation on global income of NRI's.
Story first published: Sunday, February 2, 2020, 18:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X