For Quick Alerts
ALLOW NOTIFICATIONS  
For Daily Alerts

ಇರಾಕ್‌ ನೆಲದಲ್ಲಿ ಅಮೆರಿಕಾ ಕ್ಷಿಪಣಿ ದಾಳಿ: ತೈಲ ದರದಲ್ಲಿ ಏರಿಕೆ

|

ಇರಾಕ್ ಮೇಲೆ ಅಮೆರಿಕಾ ಡ್ರೋನ್ ದಾಳಿ ನಡೆಸಿರುವ ಪರಿಣಾಮ ಅಲ್ಲಿದ್ದ ಇರಾನ್‌ನ ಪ್ರಭಾವಿ ಸೇನಾಧಿಕಾರಿ ಮೃತಪಟ್ಟಿದ್ದಾರೆ. ಪರಿಣಾಮ ಯುದ್ಧ ಭೀತಿ ಮೂಡಿದ್ದು, ತೈಲ ದರದಲ್ಲಿ 4 ಪರ್ಸೆಂಟ್ ಏರಿಕೆ ಕಂಡಿದೆ.

 

ಇರಾಕ್‌ನ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್ ಬೆಂಬಲಿತ ಸಶಸ್ತ್ರ ಮುಖ್ಯಸ್ಥ ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಸಿರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಇರಾನ್‌ನ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ ಮೇಜರ್ ಜನರಲ್ ಖಾಸಿಂ ಸೊಲೆಮನಿ ಮೃತಪಟ್ಟಿದ್ದಾರೆ.

ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ

ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ

ಏಷ್ಯಾದ ಸಮಯದಲ್ಲಿ ಬೆಳಗ್ಗೆ 11.01ರ ಹೊತ್ತಿಗೆ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ 2.88 ಪರ್ಸೆಂಟ್ ಏರಿಕೆಯಾದರೆ, ಬ್ಯಾರೆಲ್‌ಗೆ 68.14 ಅಮೆರಿಕಾ ಡಾಲರ್‌ಗೆ ಮುಟ್ಟಿದೆ. ಜೊತೆಗೆ ಅಮೆರಿಕಾ ಕಚ್ಚಾ ಬ್ಯಾರೆಲ್‌ಗೆ 2.70 ಪರ್ಸೆಂಟ್ ಏರಿಕೆಗೊಂಡಿದ್ದು, ಬ್ಯಾರೆಲ್‌ಗೆ ತೈಲ ದರ 62.82 ಅಮೆರಿಕನ್ ಡಾಲರ್ ತಲುಪಿದೆ.

ಪ್ರತಿಭಟನೆ ಬೆನ್ನಲ್ಲೇ ನಡೆದ ದಾಳಿ

ಪ್ರತಿಭಟನೆ ಬೆನ್ನಲ್ಲೇ ನಡೆದ ದಾಳಿ

ಇರಾಕ್‌ನ ಅಮೆರಿಕ ರಾಯಭಾರಿ ಕಚೇರಿಗೆ ನುಗ್ಗಿ ಇರಾನ್ ಬೆಂಬಲಿಗರು ಪ್ರತಿಭಟನೆ ನಡೆಸಿದ ಕೆಲವೇ ದಿನಗಳಲ್ಲಿ ಅಮೆರಿಕಾ ಈ ದಾಳಿ ನಡೆಸಿದ್ದು, ಜಾಗತಿಯ ವಲಯದಲ್ಲಿ ಯುದ್ಧಭೀತಿ ಸೃಷ್ಠಿಯಾಗಿದೆ. ಅಮೆರಿಕಾ ಈ ಕುರಿತು ಘೋಷಣೆ ಮಾಡುತ್ತಿದ್ದಂತೆ ತೈಲ ಬೆಲೆಯು 4 ಪರ್ಸೆಂಟ್ ಏರಿಕೆ ಕಂಡಿದೆ.

ಸ್ವತಃ ಡೊನಾಲ್ಡ್ ಟ್ರಂಪ್ ಆದೇಶ
 

ಸ್ವತಃ ಡೊನಾಲ್ಡ್ ಟ್ರಂಪ್ ಆದೇಶ

ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ದಾಳಿ ನಡೆಸಲು ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಆದೇಶ ನೀಡಿದ್ದಾರೆ. ಇರಾನ್ ಸೇನೆಯ ಕಮಾಂಡರ್ ಖಾಸಿಂ ಸೋಲೆಮನಿಯನ್ನು ಕೊಲ್ಲಲು ಟ್ರಂಪ್ ಆದೇಶಿಸಿದ್ದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

 

ಅಮೆರಿಕ ಪ್ರಜೆಗಳ ರಕ್ಷಣೆಗೆ ದಾಳಿ ನಡೆಸಿದ್ದಾಗಿ ಸ್ಪಷ್ಟನೆ

ಅಮೆರಿಕ ಪ್ರಜೆಗಳ ರಕ್ಷಣೆಗೆ ದಾಳಿ ನಡೆಸಿದ್ದಾಗಿ ಸ್ಪಷ್ಟನೆ

ವಿದೇಶದಲ್ಲಿರುವ ಅಮೆರಿಕ ಪ್ರಜೆಗಳು ರಕ್ಷಣೆ ಮತ್ತು ಅವರ ಹಿತಾಸಕ್ತಿಯನ್ನು ಕಾಪಾಡಲು ಅಧ್ಯಕ್ಷರು ತೆಗೆದುಕೊಂಡ ಸ್ಪಷ್ಟ ನಿರ್ಧಾರದಂತೆ ಈ ಕಾರ್ಯಾಚರಣೆ ನಡೆದಿದೆ ಎಂದು ಅಮೆರಿಕಾ ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ' ಇರಾಕ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸೋಲೆಮನಿ ಸಂಚು ರೂಪಿಸುತ್ತಿದ್ದರು ಎಂದು ಅಮೆರಿಕಾ ರಕ್ಷಣಾ ಇಲಾಖೆ ಆರೋಪ ಮಾಡಿದೆ.

English summary

Oil Prices Surge After US Confirms Airstrike In Iraq

Oil prices rocketed in the morning asia trading hours after US confirms Iran top commander was killed in US Airstrike in Baghdad
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X