For Quick Alerts
ALLOW NOTIFICATIONS  
For Daily Alerts

ಪಾಸ್ ಪೋರ್ಟ್ ನವೀಕರಣ ಮಾಡುವಂತೆ ನೆನಪಿಸಲು ಮೆಸೇಜ್, ಮೇಲ್

|

ಪಾಸ್ ಪೋರ್ಟ್ ಸೇವಾ ಕೇಂದ್ರಗಳಿಂದ ಹೊಸ ಸೇವೆ ಆರಂಭವಾಗಿದೆ. ನವೀಕರಣಕ್ಕೆ ಹತ್ತಿರ ಇರುವ ಪಾಸ್ ಪೋರ್ಟ್ ಗಳ ಬಳಕೆದಾರರಿಗೆ ರಿನೀವಲ್ ಗೆ ಅರ್ಜಿ ಹಾಕಿಕೊಳ್ಳುವಂತೆ ನೆನಪಿಸುವ ಅಲರ್ಟ್ ಕಳುಹಿಸಲಾಗುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರ್ದೇಶನದ ಮೇರೆಗೆ ಈ ಹೊಸ ಸೇವೆ ಆರಂಭಿಸಲಾಗಿದೆ.

ಪಾಸ್ ಪೋರ್ಟ್ ಬಳಕೆದಾರರಿಗೆ ಎರಡು ಎಸ್ಸೆಮ್ಮೆಸ್ ಮತ್ತು ಇಮೇಲ್ ಕಳುಹಿಸಲಾಗುತ್ತದೆ. ಕಳೆದ ವರ್ಷ ಸೆಪ್ಟೆಂಬರ್ ನಿಂದ ಈ ಸೇವೆ ಜಾರಿಗೆ ಬಂದಿದೆ. ಪಾಸ್ ಪೋರ್ಟ್ ಅವಧಿಯು ಮುಗಿಯುವ ಒಂಬತ್ತು ತಿಂಗಳಿಗೆ ಮೊದಲು ಒಂದು ಮತ್ತು ಏಳು ತಿಂಗಳಿಗೆ ಮೊದಲು ಮತ್ತೊಂದು ಎಸ್ಸೆಮ್ಮೆಸ್ ಕಳುಹಿಸಲಾಗುತ್ತದೆ.

ಮಧ್ಯಾಹ್ನ 12ರೊಳಗೆ ಅರ್ಜಿ ಹಾಕಿದರೆ ಸಂಜೆಯೊಳಗೆ ತತ್ಕಾಲ್ ಪಾಸ್ ಪೋರ್ಟ್ಮಧ್ಯಾಹ್ನ 12ರೊಳಗೆ ಅರ್ಜಿ ಹಾಕಿದರೆ ಸಂಜೆಯೊಳಗೆ ತತ್ಕಾಲ್ ಪಾಸ್ ಪೋರ್ಟ್

ಎಸ್ಸೆಮ್ಮೆಸ್ ನಲ್ಲಿ ಪಾಸ್ ಪೋರ್ಟ್ ಸಂಖ್ಯೆ, ಅವಧಿ ಮುಕ್ತಾಯದ ದಿನಾಂಕ, ನವೀಕರಣಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಲಿಂಕ್ ಇರುತ್ತದೆ. ಬಹಳ ದೇಶಗಳಲ್ಲಿ ಜಾರಿಯಲ್ಲಿ ಇರುವ ನಿಯಮದ ಪ್ರಕಾರ, ಆ ದೇಶಗಳಿಗೆ ಪ್ರಯಾಣ ಮಾಡಬೇಕು ಅಂದರೆ ಪಾಸ್ ಪೋರ್ಟ್ ವ್ಯಾಲಿಡಿಟಿ ಕನಿಷ್ಠ ಆರು ತಿಂಗಳು ಮತ್ತು ಅದಕ್ಕಿಂತ ಹೆಚ್ಚಿರಬೇಕು.

ಪಾಸ್ ಪೋರ್ಟ್ ನವೀಕರಣ ಮಾಡುವಂತೆ ನೆನಪಿಸಲು ಮೆಸೇಜ್, ಮೇಲ್

ಭಾರತದಲ್ಲಿ ಸಾಮಾನ್ಯ ವಯಸ್ಕರಿಗೆ ವಿತರಿಸುವ ಪಾಸ್ ಪೋರ್ಟ್ ವ್ಯಾಲಿಡಿಟಿ ಹತ್ತು ವರ್ಷಗಳು. ಆ ನಂತರ ರಿನೀವಲ್ ಮಾಡಿಸಬೇಕು. ಅಪ್ರಾಪ್ತ ವಯಸ್ಕರ ಪಾಸ್ ಪೋರ್ಟ್ ಐದು ವರ್ಷಗಳು ಅಥವಾ ಹದಿನೆಂಟು ವರ್ಷ ಪೂರ್ಣ ಆಗುವ ತನಕ ಮಾನ್ಯತೆ ಹೊಂದಿರುತ್ತದೆ. ಆ ನಂತರ ನವೀಕರಣ ಮಾಡಿಸಬೇಕು.

English summary

Passport Renewal Reminders Send By Officials

Officials to send reminders to renewal of passport. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X