For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯಕ್ಕೆ ಪೇಟಿಎಂ ಆನ್ ಲೈನ್ ಚಿನ್ನ; 100% ಗೋಲ್ಡ್ ಬ್ಯಾಕ್ ಆಫರ್

|

ಈ ಬಾರಿಯ ಅಕ್ಷಯ ತೃತೀಯ ಏಪ್ರಿಲ್ 26ನೇ ತಾರೀಕಿನ ಭಾನುವಾರ ಬಂದಿದೆ. ಆದರೆ ಕೊರೊನಾ ಕಾರಣಕ್ಕೆ ಲಾಕ್ ಡೌನ್ ಘೋಷಣೆ ಆಗಿರುವುದರಿಂದ ಅಕ್ಷಯ ತೃತೀಯದ ಸಂಭ್ರಮ- ಸಿದ್ಧತೆ ಕಾಣಿತ್ತಿಲ್ಲ. ಆದರೂ ನಿಮ್ಮಲ್ಲಿ ಯಾರಾದರೂ ಅಕ್ಷಯ ತೃತೀಯಕ್ಕೆ ಮನೆಯಲ್ಲಿ ಕೂತೇ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಅಂದುಕೊಂಡರೆ ಅದಕ್ಕೆ ಅವಕಾಶ ಇದೆ.

ಭಾರತೀಯರು ಚಿನ್ನ ಖರೀದಿ ಮಾಡುವುದಕ್ಕೆ ಇರುವ ಸುರಕ್ಷಿತ ವಿಧಾನದ ಬಗ್ಗೆ ಪೇಟಿಎಂ ಘೋಷಣೆ ಮಾಡಿದೆ. ಅಷ್ಟೇ ಅಲ್ಲ, ಜತೆಗೆ ನೂರು ಪರ್ಸೆಂಟ್ ಗೋಲ್ಡ್ ಬ್ಯಾಕ್ ಪಡೆಯುವ ಅವಕಾಶ ಸಹ ಇದೆ. ಲಾಕ್ ಡೌನ್ ಮಧ್ಯೆ ಭಾರತೀಯರು ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಅವಕಾಶದಿಂದ ವಂಚಿತರಾಗಬಾರದು. ಜತೆಗೆ ಪೇಟಿಎಂ ಆಪ್ಲಿಕೇಷನ್ ಮೂಲಕವಾಗಿ ಚಿನ್ನ ಖರೀದಿ ಮಾಡುವ ಅವಕಾಶ ನೀಡುತ್ತಿದೆ.

ಶೇಕಡಾ 100ರಷ್ಟು ಗೋಲ್ಡ್ ಬ್ಯಾಕ್ ಆಫರ್
 

ಶೇಕಡಾ 100ರಷ್ಟು ಗೋಲ್ಡ್ ಬ್ಯಾಕ್ ಆಫರ್

ಎಂಎಂಟಿಸಿ ಜತೆಗೆ ಸಹಭಾಗಿತ್ವ ವಹಿಸಿರುವ ಪೇಟಿಎಂ ಆಕರ್ಷಕವಾದ ಕೊಡುಗೆಗಳನ್ನು ಘೋಷಣೆ ಮಾಡಿದೆ. ಕನಿಷ್ಠ ಇಷ್ಟು ಗ್ರಾಮ್ ಚಿನ್ನವನ್ನು ಖರೀದಿ ಮಾಡಬೇಕು ಎಂಬ ಯಾವ ನಿರ್ಬಂಧವೂ ಇಲ್ಲ. ಇನ್ನು ಇದರ ಜತೆಗೆ ಪೇಟಿಎಂನಿಂದ ಕೆಲವು ಅದೃಷ್ಟಶಾಲಿಗಳಿಗೆ ಶೇಕಡಾ 100ರಷ್ಟು ಗೋಲ್ಡ್ ಬ್ಯಾಕ್, ಅಂದರೆ ರು. 3000ದಷ್ಟು ದೊರೆಯುತ್ತದೆ. ಇನ್ನು ಎರಡು ಪರ್ಸೆಂಟ್ ಗೋಲ್ಡ್ ಬ್ಯಾಕ್ ಖಚಿತ ಎಂದು ಕೂಡ ಹೇಳಲಾಗಿದೆ. ಏಪ್ರಿಲ್ 24ನೇ ತಾರೀಕಿನಿಂದ ಗ್ರಾಹಕರು ಚಿನ್ನ ಖರೀದಿ ಆರಂಭಿಸಬಹುದು. ಈ ಕೊಡುಗೆ ಏಪ್ರಿಲ್ 26, 2020ರ ತನಕ ಇರಲಿದೆ.

24 ಕ್ಯಾರೆಟ್ ನ 99.99 ಪರ್ಸೆಂಟ್ ಶುದ್ಧ ಚಿನ್ನ

24 ಕ್ಯಾರೆಟ್ ನ 99.99 ಪರ್ಸೆಂಟ್ ಶುದ್ಧ ಚಿನ್ನ

ಅಂದಹಾಗೆ ಲಾಕ್ ಡೌನ್ ಅವಧಿಯಲ್ಲಿ ಪೇಟಿಎಂ ಮೂಲಕ 90 ಕೇಜಿ ಡಿಜಿಟಲ್ ಚಿನ್ನ ಖರೀದಿ ಮಾಡಿದ್ದಾರೆ ಗ್ರಾಹಕರು. MMTC- PAMP ಯಿಂದ 24 ಕ್ಯಾರೆಟ್ ನ 99.99 ಪರ್ಸೆಂಟ್ ಶುದ್ಧತೆಯ ಚಿನ್ನ ದೊರೆಯುತ್ತದೆ. ವೆಬ್ ಸೈಟ್ ನಲ್ಲಿ ಇರುವ ಮಾಹಿತಿಯಂತೆ ಕೆಲವು ನಿಬಂಧನೆಗಳು ಇವೆ.

ಚಿನ್ನ ಖರೀದಿ ನಿಯಮ- ನಿಬಂಧನೆಗಳು

ಚಿನ್ನ ಖರೀದಿ ನಿಯಮ- ನಿಬಂಧನೆಗಳು

* ಕನಿಷ್ಠ ಆರ್ಡರ್ ಮೌಲ್ಯ ರು. 1000

* ಪೇಟಿಎಂ ಚಿನ್ನ ಖರೀದಿಸುವಾಗ WINGOLD ಕೋಡ್ ಅಪ್ಲೈ ಮಾಡಬೇಕು

* ಪ್ರತಿ ಗಂಟೆಗೆ ಒಬ್ಬ ವಿಜಯಶಾಲಿಗೆ ಶೇಕಡಾ ನೂರರಷ್ಟು ಗೋಲ್ಡ್ ಬ್ಯಾಕ್ ದೊರೆಯುತ್ತದೆ.

* ಈ ಪ್ರೋಮೋ ಕೋಡ್ ಗೆ ಗರಿಷ್ಠ ಗೋಲ್ಡ್ ಬ್ಯಾಕ್ ರು. 3000

* ಈ ಪ್ರೋಮೋ ಕೋಡ್ ವ್ಯಾಲಿಡಿಟಿ 24-4-2020ರ ಮಧ್ಯಾಹ್ನ 12ರಿಂದ 26-4-2020ರ ರಾತ್ರಿ 11.59ರ ತನಕ ಇರುತ್ತದೆ.

* ಇನ್ನು ಈ ಅಭಿಯಾನ ಮುಗಿದ ಐದರಿಂದ ಏಳು ವರ್ಕಿಂಗ್ ಡೇ ಒಳಗೆ ಗೋಲ್ಡ್ ಬ್ಯಾಕ್ ಪೇಟಿಎಂ ವ್ಯಾಲೆಟ್ ಗೆ ಗೋಲ್ಡ್ ಬ್ಯಾಕ್ ಬರುತ್ತದೆ.

* ಈ ಪ್ರೋಮೋ MMTC- PAMP ಚಿನ್ನ ಖರೀದಿಗೆ ಮಾತ್ರ ಅನ್ವಯಿಸುತ್ತದೆ.

ಮನೆಗೆ ಡೆಲಿವರಿ ಪಡೆಯಬಹುದು
 

ಮನೆಗೆ ಡೆಲಿವರಿ ಪಡೆಯಬಹುದು

ಒಂದು ವೇಳೆ ಆ ನಿರ್ದಿಷ್ಟ ಮಾರಾಟಗಾರರ ಗೋಲ್ಡ್ ಅಕ್ಯುಮಲೇಷನ್ ಪ್ಲಾನ್ ಅಕೌಂಟ್ (GAP) ಈಗಾಗಲೇ ಇದ್ದಲ್ಲಿ ಆ ಖಾತೆಗೆ ಚಿನ್ನ ವರ್ಗಾವಣೆ ಮಾಡಲಾಗುತ್ತದೆ. ಇಲ್ಲದಿದ್ದಲ್ಲಿ ಹೊಸ GAP ಅಕೌಂಟ್ ತೆರೆಯಲಾಗುತ್ತದೆ. ಮತ್ತು ಪೇಟಿಎಂನಿಂದ ಚಿನ್ನ ಖರೀದಿಸುವುದು ಶೇಕಡಾ ನೂರರಷ್ಟು ಸುರಕ್ಷಿತ. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಗೋಲ್ಡ್ ಲಾಕರ್ ವ್ಯವಸ್ಥೆಯೂ ಸಿಗುತ್ತದೆ. "ಶೀಘ್ರದಲ್ಲೇ ಸರ್ಕಾರವು ಅಗತ್ಯ ವಸ್ತುಗಳ ಹೊರತಾದವುಗಳಿಗೂ ಸಾಗಾಟಕ್ಕೆ ಅನುಮತಿ ನೀಡುತ್ತದೆ. ಅಂಥ ವೇಳೆ ಮನೆಗೆ ಡೆಲಿವರಿ ಪಡೆಯುವ ಆಯ್ಕೆ ಗ್ರಾಹಕರಿಗೆ ಇದೆ" ಎಂದು ಪೇಟಿಎಂ ಹೇಳಿದೆ.

English summary

Paytm Online Gold Offer For Akshaya Tritiya; 100 Percent Goldback

Paytm offering gold purchase offer for Akshaya Tritiya. Here is the complete details.
Story first published: Friday, April 24, 2020, 17:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X