For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಷೇರುಗಳ ಮೇಲೆ 87 ಕೋಟಿ ಹೂಡಿದ ರಾಕೇಶ್ ಜುಂಜುನ್ ವಾಲ

|

ಷೇರು ಮಾರುಕಟ್ಟೆ ಮಂಗಳವಾರ ಆರಂಭವಾಗುತ್ತಿದ್ದಂತೆ ಯೆಸ್ ಬ್ಯಾಂಕ್ ಷೇರುಗಳು ಭಾರೀ ವೇಗ ಪಡೆದಿದ್ದು, ಷೇರುಗಳ ಮೌಲ್ಯ ಶೇಕಡಾ 9ರಷ್ಟು ಹೆಚ್ಚಿದೆ. ದೇಶದ ಬೃಹತ್‌ ಹೂಡಿಕೆದಾರರಲ್ಲಿ ಒಬ್ಬರಾದ ರಾಕೇಶ್ ಜುಂಜುನ್ ವಾಲ 86.89 ಕೋಟಿ ರುಪಾಯಿಯಷ್ಟು ಯೆಸ್ ಬ್ಯಾಂಕ್‌ ಷೇರುಗಳನ್ನು ಖರೀದಿಸಿದಾಗ ಪ್ರತಿ ಷೇರಿನ ಬೆಲೆ 67.1 ರುಪಾಯಿ ಇತ್ತು.

ಹೀಗೆ ದೊಡ್ಡ ಮೊತ್ತದ ಷೇರು ಖರೀದಿ ಆದ ಮೇಲೆ ಯೆಸ್ ಬ್ಯಾಂಕ್‌ ಷೇರುಗಳಿಗೆ ಚೈತನ್ಯ ಸಿಕ್ಕಂತಾಗಿದೆ. ಸೋಮವಾರವಷ್ಟೇ ಅನುಭವಿ ಹೂಡಿಕೆದಾರ ರಾಕೇಶ್ ಜುಂಜನ್ ವಾಲ 1.29 ಕೋಟಿ ಯೆಸ್ ಬ್ಯಾಂಕ್ ಷೇರುಗಳನ್ನು ಮುಕ್ತ ಮಾರುಕಟ್ಟೆ ಮೂಲಕ ಖರೀದಿಸಿದ್ದಾರೆ. ಮಾಹಿತಿ ಪ್ರಕಾರ, ಬಿಎಸ್ಇನಲ್ಲಿ ಜುಂಜುನ್ ವಾಲ ಅವರು 1,29,50,000 ಷೇರುಗಳನ್ನು ಖರೀದಿಸಿದ್ದಾರೆ. ಇದು ಬ್ಯಾಂಕ್ ನಲ್ಲಿ ಸುಮಾರು 0.5 ಪ್ರತಿ ಶತದಷ್ಟು ಆಗುತ್ತದೆ.

ಯೆಸ್ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೇಳಿಕೆ ಪ್ರಕಾರ, ಪ್ರತಿ ಷೇರಿಗೆ ಸರಾಸರಿ 67.1 ರುಪಾಯಿಗೆ ಖರೀದಿಸಲಾಗಿದೆ. ಜಾಗತಿಕ ಹೂಡಿಕೆದಾರರಿಂದ 1.2 ಬಿಲಿಯನ್ ಮೊತ್ತದ ಪ್ರಸ್ತಾಪವನ್ನು ಸ್ವೀಕರಿಸಿದೆ. ಮತ್ತು ಹೆಚ್ಚುವರಿಯಾಗಿ 8 ಬಿಡ್ ಗಳನ್ನು ಸ್ವೀಕರಿಸಲಾಗಿದ್ದು, ಇವುಗಳ ಮೌಲ್ಯ 1.5 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಿದೆ. (ಇವತ್ತಿನ ಭಾರತೀಯ ಮೌಲ್ಯ ಒಂದು ಡಾಲರ್ ಗೆ ಎಪ್ಪತ್ತೊಂದು ರುಪಾಯಿ)

ಯೆಸ್ ಬ್ಯಾಂಕ್ ಷೇರುಗಳ ಮೇಲೆ 87 ಕೋಟಿ ಹೂಡಿದ ರಾಕೇಶ್ ಜುಂಜುನ್ ವಾಲ

ಇನ್ನು ಯೆಸ್ ಬ್ಯಾಂಕ್ ಬಂಡವಾಳ ಕ್ರೋಡೀಕರಣದತ್ತ ಕಣ್ಣಿಟ್ಟಿದೆ. ಇತ್ತೀಚೆಗಷ್ಟೇ ಅರ್ಹವಾದ ಕ್ಯೂಐಪಿ (ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಪ್ಲೇಸ್ ಮೆಂಟ್) ಮೂಲಕ 237 ಮಿಲಿಯನ್ ಅಮೆರಿಕನ್ ಡಾಲರ್‌ ನಷ್ಟು ಹಣವನ್ನು ಸಂಗ್ರಹಿಸಿದೆ. ಇದರ ಪರಿಣಾಮ ಇಕ್ವಿಟಿ ೧೦ ಪ್ರತಿ ಶತದಷ್ಟು ದುರ್ಬಲಗೊಳ್ಳುತ್ತದೆ. ಆದಾಗ್ಯೂ ಇದು ಮತ್ತಷ್ಟು ಬಂಡವಾಳ ಪೂರೈಸಲು ಸಜ್ಜಾಗಿದೆ. ಇದರಿಂದ ಹೂಡಿಕೆದಾರರು ಯೆಸ್ ಬ್ಯಾಂಕ್‌ ಷೇರುಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ.

ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ಷೇರುಗಳು ಒಟ್ಟಾರೆ 600.08 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದ್ದವು. ಮೇ 6 ರಂದು 166.25 ರೂಪಾಯಿ ಮೌಲ್ಯದ ಯೆಸ್ ಬ್ಯಾಂಕ್ ಷೇರುಗಳು ಅಕ್ಟೋಬರ್ 1 ರ ವೇಳೆಗೆ ಭಾರೀ ಕುಸಿತ ಅನುಭವಿಸಿ ಪ್ರತಿ ಷೇರಿನ ಬೆಲೆ 32 ರೂಪಾಯಿಗೆ ತಲುಪಿತ್ತು. ತದನಂತರ ಜಾಗತಿಕ ಹೂಡಿಕೆದಾರರ ಬಂಡವಾಳದ ಹರಿವಿನಿಂದ ಯೆಸ್ ಬ್ಯಾಂಕ್‌ನ ಷೇರುಗಳು ಚೇತರಿಸಿಕೊಂಡಿದ್ದು, 70 ರೂಪಾಯಿ ಗಡಿದಾಟುವ ಮುನ್ಸೂಚನೆ ನೀಡಿವೆ.

English summary

Rakesh Jhunjhunwala Purchased Yes Bank Shares Worth Of 87 Crores

Yes Bank shares price increased by 9 percent on Tuesday, after investor Rakesh Jhunjhunwala purchased Yes Bank share worth of 87 crore on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X