For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೂಳಿ ಗುಟುರು, ಹೊಸ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

|

ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ದಾಖಲೆಯ ಜಿಗಿತ ಕಂಡಿದೆ. ನಿಫ್ಟಿ 12 ಸಾವಿರ ಗಡಿ ಸಮೀಪಿಸಿದೆ. ಷೇರುಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟಿನ ಪರಿಣಾಮ ಸಂವೇದಿ ಸೂಚ್ಯಂಕ ಹೊಸ ದಾಖಲೆಯನ್ನು ಸೃಷ್ಠಿಸಿದೆ. ವಾರದಿಂದೀಚೆಗೆ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನ ತಲುಪಿದೆ.

ಸಂವೇದಿ ಸೂಚ್ಯಂಕವು ಮಧ್ಯಾಹ್ನದ ಬಳಿಕ ದಾಖಲೆಯ ಮಟ್ಟವಾದ 40,607 ಅಂಶಗಳಿಗೆ ಮುಟ್ಟಿತ್ತು. ದಿನದ ಅಂತ್ಯದಲ್ಲಿ ಸೂಚ್ಯಂಕವು 221.55 ಅಂಶ ಹೆಚ್ಚಾಗಿ ಹೊಸ ಗರಿಷ್ಠ ಮಟ್ಟವಾದ 40,469.70 ಅಂಶಗಳಲ್ಲಿ ವಹಿವಾಟು ಮುಗಿಸಿತು. ಬ್ಯಾಂಕಿಂಗ್ ಷೇರುಗಳಲ್ಲಿ ಉತ್ತಮ ವಹಿವಾಟು ದಾಖಲಾಗಿದ್ದು, ಐಸಿಐಸಿಐ ಬ್ಯಾಂಕ್‌, ಹೆಚ್‌ಡಿಎಫ್ಸಿ , ಇನ್ಫೋಸಿಸ್ ಷೇರುಗಳು ಹೆಚ್ಚು ಲಾಭಗಳಿಸಿವೆ. ಇನ್ನು ಯೆಸ್ ಬ್ಯಾಂಕ್ , ಬಜಾಜ್ ಫೈನಾನ್ಸ್ ಮತ್ತು ಟೈಟಾನ್ ಕಂಪನಿ ಅತ್ಯಂತ ಸಕ್ರಿಯ ಷೇರುಗಳಾಗಿವೆ.

ಷೇರುಪೇಟೆಯಲ್ಲಿ ಗೂಳಿ ಗುಟುರು, ಹೊಸ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಕೂಡ 43.80 ಅಂಶಗಳನ್ನ ಹೆಚ್ಚಾಗಿ ಗಳಿಸಿತು. ಒಂದು ಹಂತದಲ್ಲಿ ನಿಫ್ಟಿ 12 ಸಾವಿರದ ಗಡಿಯನ್ನು ಮುಟ್ಟಿತ್ತು. ಆದರೆ ದಿನದ ಅಂತ್ಯದಲ್ಲಿ 44 ಅಂಶಗಳ ಏರಿಕೆಯೊಂದಿಗೆ 11,961 ಅಂಶಗಳಿಗೆ ವಹಿವಾಟು ಕೊನೆಗೊಂಡಿದೆ.

ಇನ್ನು ಡಾಲರ್ ಎದುರು ರೂಪಾಯಿ ಮೌಲ್ಯ 28 ಪೈಸೆ ಕುಸಿತ ಕಂಡಿದ್ದು ದಿನದ ಕೊನೆಗೆ 71 ರೂಪಾಯಿಗೆ ತಲುಪಿದೆ.

English summary

Sensex At Record High, Nifty Near 12 Thousand

The BSE Sensex reached record high points. Nifty Reclaims 12 Thousand. Banking Shares attracted
Story first published: Wednesday, November 6, 2019, 19:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X