For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಹೊಸ ಎತ್ತರಕ್ಕೆ; 413 ಅಂಶ ಹೆಚ್ಚಳ, ದಿನಾಂತ್ಯಕ್ಕೆ 41,352 ಪಾಯಿಂಟ್ಸ್

|

ಸೆನ್ಸೆಕ್ಸ್ ಸೂಚ್ಯಂಕವು ಮಂಗಳವಾರ (ಡಿಸೆಂಬರ್ 17) ಹೊಸ ಎತ್ತರಕ್ಕೆ ಏರಿದೆ. ಎಚ್ ಡಿಎಫ್ ಸಿ ಮತ್ತು ಎಚ್ ಡಿಎಫ್ ಇ ಬ್ಯಾಂಕ್ ನಂಥ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಆಸಕ್ತಿ ತೋರಿದರು. ಇದರ ಹೊರತಾಗಿ ಟಾಟಾ ಸ್ಟೀಲ್, ವೇದಾಂತದಂಥ ಲೋಹದ ಷೇರುಗಳಲ್ಲಿ ಕೂಡ ಏರಿಕೆ ಕಂಡುಬಂದಿತು.

 

ಎಲ್ಲ ವಲಯಗಳಲ್ಲೂ ಖರೀದಿ ಆಸಕ್ತಿ ಕಂಡುಬಂತು. ಯು.ಎಸ್.- ಚೀನಾ ಮಧ್ಯೆ ಮೊದಲ ಹಂತದ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದರಿಂದ ಹೂಡಿಕೆದಾರರು ಖರೀದಿಗೆ ಮುಂದಾದರು. ಸೆನ್ಸೆಕ್ಸ್ ಸೂಚ್ಯಂಕವು 413 ಪಾಯಿಂಟ್ ಹೆಚ್ಚಳವಾಗಿ, ದಿನಾಂತ್ಯಕ್ಕೆ 41,352 ಅಂಶದೊಂದಿಗೆ ವಹಿವಾಟು ಮುಗಿಸಿತು. ಇನ್ನು ನಿಫ್ಟಿ ಸೂಚ್ಯಂಕವು 111 ಅಂಶಗಳ ಏರಿಕೆ ದಾಖಲಿಸಿತು.

 
ಸೆನ್ಸೆಕ್ಸ್ ಹೊಸ ಎತ್ತರ; 413 ಅಂಶ ಹೆಚ್ಚಳ, ದಿನಾಂತ್ಯಕ್ಕೆ 41,352

ಕಳೆದ ಕೆಲವು ಟ್ರೇಡಿಂಗ್ ಸೆಷನ್ ನಲ್ಲಿ ಭರ್ಜರಿ ಏರಿಕೆ ದಾಖಲಿಸಿದ್ದ GAIL ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದವು. ಸನ್ ಫಾರ್ಮಾ, ಇಂಡಿಯನ್ ಆಯಿಲ್ ಕಂಪೆನಿಯ ಷೇರುಗಳು ಸಹ ನಷ್ಟ ಕಂಡವು. ವಿದೇಶಿ ದಲ್ಲಾಳಿ ಸಂಸ್ಥೆಗಳು ಮೇಲ್ದರ್ಜೆಗೆ ಏರಿಸಿದ್ದರಿಂದಾಗಿ ಮಾರುತಿ ಸುಜುಕಿ ಷೇರು ಸ್ಥಿರತೆ ಪ್ರದರ್ಶಿಸಿತು.

English summary

Sensex Closes New High; Metal Stocks Lead Gain

Sensex closes new high on Tuesday. Metal stocks lead gain.
Story first published: Tuesday, December 17, 2019, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X