For Quick Alerts
ALLOW NOTIFICATIONS  
For Daily Alerts

ಗುರು ನಾನಕ್ ಜಯಂತಿ: ಷೇರು ಮಾರುಕಟ್ಟೆ ವಹಿವಾಟು ಇಲ್ಲ

|

ಗುರು ನಾನಕ್ ಜಯಂತಿ ಪ್ರಯುಕ್ತ ಸೋಮವಾರ ಭಾರತದ ಕರೆನ್ಸಿ, ಡೆಟ್ ಮತ್ತು ಈಕ್ವಿಟಿ ಮಾರುಕಟ್ಟೆಗಳಾದ ಬಿಎಸ್ ಇ ಮತ್ತು ಎನ್ ಎಸ್ ಇ ವಹಿವಾಟು ಇಲ್ಲ. ಡಿಸೆಂಬರ್ 1ನೇ ತಾರೀಕಿನ ಮಂಗಳವಾರ ವ್ಯವಹಾರ ಮತ್ತೆ ಆರಂಭವಾಗಲಿದೆ. ಕಮಾಡಿಟಿ ಎಕ್ಸ್ ಚೇಂಜ್ MCX ಸೋಮವಾರ ಸಂಜೆ 5ರಿಂದ ರಾತ್ರಿ 11.30ರ ತನಕ ವಹಿವಾಟು ನಡೆಸಲಿದ್ದು, ಬೆಳಗ್ಗೆ 9ರಿಂದ ಸಂಜೆ 5ರ ತನಕ ವ್ಯವಹಾರ ಇರುವುದಿಲ್ಲ.

 

ಅಂದ ಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ನೀತಿ ಸಭೆ ಈ ವಾರ ನಿಗದಿ ಆಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಪೂರಕವಾಗಿ ಆರ್ ಬಿಐ ನೀತಿ ಘೋಷಿಸುವ ಸಾಧ್ಯತೆ ಇದೆ. ಈ ಬಾರಿ ದರ ಕಡಿತ ಮಾಡುವ ಸಾಧ್ಯತೆ ಬಹಳ ಕಡಿಮೆ ಇದೆ. ಇನ್ನು ಮಾರುಕಟ್ಟೆ ವಿಚಾರಕ್ಕೆ ಬಂದಲ್ಲಿ ಈ ವಾರ ರಜಾದ ಕಾರಣಕ್ಕೆ ಇಂಥದ್ದೇ ನಿರ್ದಿಷ್ಟ ದಿಕ್ಕಿನಲ್ಲಿ ಸಾಗಬಹುದು ಎಂದು ಊಹಿಸುವುದು ಕಷ್ಟ ಎನ್ನುತ್ತಾರೆ ವಿಶ್ಲೇಷಕರು.

 

ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದ FDIನ 2ನೇ ಅತಿ ದೊಡ್ಡ ಮೂಲ USಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಬಂದ FDIನ 2ನೇ ಅತಿ ದೊಡ್ಡ ಮೂಲ US

ಐ.ಟಿ., ಫಾರ್ಮಾಸ್ಯುಟಿಕಲ್ ಮತ್ತು ಖಾಸಗಿ ಬ್ಯಾಂಕ್ ವಲಯದ ಷೇರುಗಳಲ್ಲಿ ಚಲನೆ ಕಂಡುಬರಬಹುದು ಎಂದು ಹೇಳುತ್ತಾರೆ. ಇನ್ನು ಕೊರೊನಾ ಲಸಿಕೆ ಸದ್ಯದಲ್ಲೇ ಬರಬಹುದು ಎಂಬ ಭರವಸೆ ಹಿನ್ನೆಲೆಯಲ್ಲಿ ಏಷ್ಯನ್ ಈಕ್ವಿಟಿ ಮಾರ್ಕೆಟ್ ನಲ್ಲಿ ಅತಿಂದಿತ್ತ ಹೊಯ್ದಾಡಿತು.

ಗುರು ನಾನಕ್ ಜಯಂತಿ: ಷೇರು ಮಾರುಕಟ್ಟೆ ವಹಿವಾಟು ಇಲ್ಲ

ಇತ್ತ ತೈಲ ಉತ್ಪಾದಕರ ಎರಡು ದಿನಗಳ ಪ್ರಮುಖ ಸಭೆ ಇದ್ದು, ತೈಲ ದರವೂ ಒತ್ತಡದಲ್ಲಿದೆ. ಉತ್ಪಾದನೆ ಕಡಿತ ಹೆಚ್ಚಳ ಮಾಡುವುದಕ್ಕೆ ಒಪ್ಪದೆ, ವರ್ತಕರು ಚಿಂತಿತರಾಗಿದ್ದಾರೆ. ನವೆಂಬರ್ ತಿಂಗಳ ವಿಶ್ವ ಮಟ್ಟದಲ್ಲಿ ಮಾರ್ಕೆಟ್ ಗಳು ಏರಿಕೆ ಕಂಡಿವೆ. ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವಿನಿಂದಲೂ ಏರಿಕೆಗೆ ಪುಷ್ಟಿ ಸಿಕ್ಕಿದೆ.

ಕನಿಷ್ಠ ಮೂರು ಕೊರೊನಾ ಲಸಿಕೆ ಇನ್ನೇನು ಅನುಮತಿ ಪಡೆಯಲಿವೆ ಮತ್ತು ಕೆಲವು ದೇಶಗಳಲ್ಲಿ ಬಳಕೆ ಆರಂಭವಾಗಲಿದೆ ಎಂಬ ನಿರೀಕ್ಷೆ ಇದೆ. ಆ ಕಾರಣಕ್ಕೆ ಮುಂದಿನ ವರ್ಷ ಆರ್ಥಿಕ ಚೇತರಿಕೆ ಕಾಣಬಹುದು ಎಂಬ ಉತ್ಸಾಹ ಕಂಡುಬರುತ್ತಿದೆ.

English summary

Share Market Today Closed On Account Of Guru Nanak Jayanti Holiday

On account of Guru Nanak Jayanti public holiday Indian stock market closed on Monday, November 30, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X